Asianet Suvarna News Asianet Suvarna News

ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ: ಬಿಜೆಪಿ ಮುಖಂಡ ಅನಿಲ್ ಚಳ್ಳಕೆರೆ ವಿರುದ್ದ ದೂರು

Bengaluru News: ರಾಷ್ಟ್ರಧ್ವಜಕ್ಕೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಅನಿಲ್ ಚಳ್ಳಕೆರೆ ವಿರುದ್ದ ದೂರು ದಾಖಲಾಗಿದೆ

Complaint against Bengaluru BJP Leader for allegedly insulting national Flag during Facebook Live mnj
Author
Bengaluru, First Published Aug 12, 2022, 3:42 PM IST

ಬೆಂಗಳೂರು (ಆ. 12): ರಾಷ್ಟ್ರಧ್ವಜಕ್ಕೆ (National Flag) ಅವಮಾನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ (BJP) ಮುಖಂಡ ಅನಿಲ್ ಚಳ್ಳಕೆರೆ ವಿರುದ್ದ ದೂರು ದಾಖಲಾಗಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿರುವ ಅನಿಲ್ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೇಸ್‌ಬುಕ್‌ನಲ್ಲಿ (Facebook) ರಾಷ್ಟ್ರಧ್ವಜದ ಬಗ್ಗೆ ಮಾಹಿತಿ ನೀಡಲು ಅನಿಲ್‌ ಲೈವ್‌ಗೆ ಬಂದಿದ್ದರು. ಲೈವ್ ವೇಳೆ ತಮ್ಮ ಹಿಂಬದಿಯಲ್ಲಿ ರಾಷ್ಟ್ರ ಧ್ವಜವನ್ನು ಅನಿಲ್ ತಲೆಕೆಳಗಾಗಿ  ಹಾಕಿರುವುದು ಕಂಡುಬಂದಿದೆ. 

ಈ ಹಿನ್ನೆಲ್ಲೆ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಅನಿಲ್ ವಿರುದ್ದ ದೂರು ದಾಖಲಿಸಲಾಗಿದೆ. ಸುದರ್ಶನ್ ಎಂಬುವವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ. ಪ್ರಿವೆನ್‌ಶನ್ ಆಫ್ ಇನ್ಸಸಲ್ಟ್ ಟು ನ್ಯಾಷನಲ್ ಆನರ್ ಆ್ಯಕ್ಟ್ 1971 ಪ್ರಕಾರ ಕ್ರಮ‌ ಜರುಗಿಸುವಂತೆ ದೂರುದಾರರುಅಗ್ರಹಿಸಿದ್ದಾರೆ. 

ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ:  "ಫೇಸ್‌ಬುಕ್ ಲೈವ್‌ನಲ್ಲಿ ರಾಷ್ಟ್ರಧ್ವಜದ ಕುರಿತು ಸಾರ್ವಜನಿಕರಿಗೆ ಉಚಿತ ಮಾಹಿತಿ ಒದಗಿಸಲು ಅನಿಲ್ ಪ್ರಯತ್ನಿಸಿರುತ್ತಾರೆ. ಆದರೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತಹ ಸಂದರ್ಭದಲ್ಲಿ ಅವರು ಕುಳಿತಿದ್ದ ಸ್ಥಳದ ಹಿಂಭಾಗದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾಕುವ ಮೂಲಕ ರಾಷ್ಟ್ರಧ್ವಜಕ್ಕೆ ನೇರವಾಗಿ ಅವಮಾನ ಎಸಗಿರುತ್ತಾರೆ" ಎಂದು ದೂರಿನಲ್ಲಿ ತಿಳಿಸಲಾಗಿದೆ. 

INDIA@75: ಧರಂಸಿಂಗ್‌ ಫೌಂಡೇಶನ್‌ನಿಂದ 50 ಸಾವಿರ ಧ್ವಜ ಹಸ್ತಾಂತರ

"ಫೇಸ್‌ಬುಕ್ ಲೈವ್‌ನ ವೀಕ್ಷಣೆಯಲ್ಲಿದ್ದ ವೀಕ್ಷಕರು ತಕ್ಷಣವೇ ನೇರವಾಗಿ ಫೇಸ್‌ಬುಕ್ ಲೈವ್‌ನಲ್ಲಿಯೇ ರಾಷ್ಟ್ರದ್ವಜವನ್ನು ತಲೆಕೆಳಗಾಗಿ ಹಾಕಿದ್ದೀರಿ, ಸರಿಪಡಿಸಿ, ಎಂದು ಸೂಚಿಸುತ್ತಿದ್ದರೂ, ಸಾರ್ವಜನಿಕರ ಹಿತಾಸಕ್ತಿಗೆ ಗಮನ ನೀಡದೆ ಸಾರ್ವಜನಿಕರಲ್ಲಿ ಫೇಸ್‌ಬುಕ್ ಲೈವ್ ಮೂಲಕವಾದರೂ ಮಾಡಿದ ತಪ್ಪಿಗೆ ಕ್ಷಮೆಯನ್ನೂ ಯಾಚಿಸದೇ ಇರುವುದು ನೇರವಾಗಿ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿರುವುದು ಶಿಕ್ಷಾರ್ಹ ಅಪರಾದವಾಗಿದೆ" ಎಂದು ದೂರುದಾರು ಆರೋಪಿಸಿದ್ದಾರೆ

"ಇದರಿಂದ ನಮ್ಮಂತಹ ಸಾರ್ವಜನಿಕರಿಗೆ, ದೇಶಪ್ರೇಮಿಗಳ ದೇಶಪ್ರೇಮದ ಭಾವನೆಗೆ ಧಕ್ಕೆ ಉಂಟಾಗಿರುತ್ತದೆ. ಆದ್ದರಿಂದ ಈ ಕೂಡಲೇ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿರುವಂತಹ ಅನಿಲ್‌ ಚಳೆಗೇರಿ ವಿರುದ್ಧ ದಿ ಪ್ರಿವೆನ್ಶನ್ ಆಫ್ ಇನ್ನಲ್ಸ್ ಟು ನ್ಯಾಷನಲ್ ಆನರ್ ಆಕ್ಟ್ 1971 (The Prevention of Insults to National Honour Act 1971) ಅನ್ವಯ ಕಾನೂನು ಕ್ರಮ ಜರುಗಿಸಬೇಕಾಗಿ" ದೂರುದಾರು ಆಗ್ರಹಿಸಿದ್ದಾರೆ. 

Follow Us:
Download App:
  • android
  • ios