Asianet Suvarna News Asianet Suvarna News

9ನೇ ತರಗತಿ ವಿದ್ಯಾರ್ಥಿನಿಯ ಗ್ಯಾಂಗ್‌ರೇಪ್‌ ಮಾಡಿ ಸುಟ್ಟುಹಾಕಿದ ರಾಜಕಾರಣಿಯ ಮಗ

West Bengal Gangrape Case: ಯುವತಿಯ ಮರಣೋತ್ತರ ಪರೀಕ್ಷೆಗೂ ಅವಕಾಶ ನೀಡದೇ, ಆರೋಪಿ ಕಡೆಯವರು ಬಲವಂತವಾಗಿ ಮೃತದೇಹವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದ್ದಾರೆ.

class 9 student gangraped by tmc leader in west bengal
Author
First Published Apr 11, 2022, 1:31 PM IST

ಆಕೆ ಇನ್ನು ಒಂಭತ್ತನೇ ತರಗತಿ ವಿದ್ಯಾರ್ಥಿನಿ. ಸ್ನೇಹಿತನ ಹುಟ್ಟುಹಬ್ಬದ ಆಚರಣೆಗೆಂದು ಹೋದವಳು ಸಾಮೂಹಿಕ ಅತ್ಯಾಚಾರಕ್ಕೊಳಗಾದಳು. ಸ್ವಲ್ಪ ಜೀವ ಹಿಡಿದಿಟ್ಟುಕೊಂಡು ಮನೆ ಸೇರಿದವಳೇ ಸಾವನ್ನಪ್ಪಿದ್ದಳು. ಮನೆಯವರು ಆಸ್ಪತ್ರೆಗೆ ಕರೆದೊಯ್ಯಬೇಕು ಅನ್ನುವಷ್ಟರಲ್ಲೇ ಅದೇ ಕೀಚಕರ ಕಡೆಯವರು ಬಂದು ಆಕೆಯ ಅಂತ್ಯಕ್ರಿಯೆ ಮುಗಿಸಿಬಿಟ್ಟರು. ಅಲ್ಲಿಗೆ ಸಾಕ್ಷಿ ನಾಶವೂ ಮಾಡಿದಂತಾಯಿತು. ಈ ಘಟನೆ ನಡೆದಿರುವುದು ಪಶ್ಚಿಮಬಂಗಾಳದ ನಾದಿಯಾ ಜಿಲ್ಲೆಯಲ್ಲಿ. ಆರೋಪಿಯ ತಂದೆ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್‌ನ ಸ್ಥಳೀಯ ನಾಯಕ. ನಿಮಗೆಲ್ಲಾ ಪಿಂಕ್‌ ಅಥವಾ ವಕೀಲ್‌ ಸಾಬ್‌ ಸಿನೆಮಾ (Pink - Vakeel Saab) ನೆನಪಿರಬಹುದು, ಅದೂ ಕೂಡ ನಡೆದಿದ್ದು ಇದೇ ಪಶ್ಚಿಮಬಂಗಾಳದಲ್ಲಿ (West Bengal). ಆ ಪ್ರಕರಣದ ಆರೋಪಿ ತೃಣಮೂಲ ಕಾಂಗ್ರೆಸ್‌ ಪಕ್ಷದ (Trinamool Congress Leader) ಮುಖಂಡೆಯೊಬ್ಬಳ ಪ್ರಿಯಕರನಾಗಿದ್ದ. ಈ ಘಟನೆಯನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದೆ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಘೋರಕೃತ್ಯ. 

ಕಳೆದ ವಾರ ಆರೋಪಿಯ ಹುಟ್ಟುಹಬ್ಬ ಆಚರಣೆಗೆಂದು ಸಂತ್ರಸ್ಥ ಹುಡುಗಿ ಆತನ ಮನೆಗೆ ಹೋಗಿದ್ದಳು. ಅಲ್ಲಿ ಆರೋಪಿ ಮತ್ತು ಆತನ ಸ್ನೇಹಿತರು ಸಂತ್ರಸ್ಥೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ (Class 9 student gang-raped). ಮಗಳು ಮನೆಗೆ ಬರುವಾಗ ಕಾಲುಗಳು ರಕ್ತಮಯವಾಗಿತ್ತು, ಮತ್ತು ಕಿಬ್ಬೊಟ್ಟೆ ಭಾಗದಲ್ಲಿ ವಿಪರೀತ ನೋವು ಆರಂಭವಾಗಿತ್ತು. ಇನ್ನೇನು ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬಷ್ಟರಲ್ಲೇ ಸಾವನ್ನಪ್ಪಿದಳು ಎಂದು ಸಂತ್ರಸ್ಥೆಯ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಘಟನೆ ಸಂಬಂಧ ಹನ್ಸಕಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮತ್ತು ಸಹಚರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೋಷಕರ ದೂರಿನ ಅನ್ವಯ, ಯುವತಿಯ ಮರಣೋತ್ತರ ಪರೀಕ್ಷೆಗೂ ಅವಕಾಶ ನೀಡದೇ, ಆರೋಪಿ ಕಡೆಯವರು ಬಲವಂತವಾಗಿ ಮೃತದೇಹವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದ್ದಾರೆ. ಬ್ರಜ್‌ಗೋಪಾಲ್‌ ಅಲಿಯಾಸ್‌ ಸೊಹೇಲ್‌ ಖಾನ್‌ ಎಂಬುವವನೇ ಪ್ರಕರಣದ ಪ್ರಮುಖ ಆರೋಪಿ. ಆತ ಮತ್ತು ಆತನ ಸಹಚರರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಅತ್ಯಾಚಾರ, ಕೊಲೆ ಮತ್ತು ಸಾಕ್ಷಿನಾಶದ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಂತ್ರಸ್ತೆಗೆ ಅರಿವಿತ್ತು, ಆರೋಪಿ ಕಾಂಡೋಂ ಬಳಸಿದ್ದ: ಅಪ್ರಾಪ್ತೆಯ ರೇಪ್ ಆರೋಪಿಗೆ ಜಾಮೀನು!

ಈ ಸಂಬಂಧ ಕೋಲ್ಕತ್ತಾ ಹೈಕೋರ್ಟಿನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೂಡ ದಾಖಲಾಗಿದ್ದು, ನ್ಯಾಯಾಂಗ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಕೋರಲಾಗಿದೆ. ಅರ್ಜಿ ವಿಚಾರಣೆ ಕೋರ್ಟ್‌ ಗುರುವಾರ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. 

ಕುಟುಂಬಸ್ಥರ ಆರೋಪವೇನು?:
ಮಗಳು ಸಾವನ್ನಪ್ಪಿದ ನಂತರ, ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ಇತರರನ್ನು ಪೋಷಕರು ವಿಚಾರಿಸಿದ್ದಾರೆ. ಆಗ ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಅಲ್ಲಿದ್ದವರು ಮಾಹಿತಿ ನೀಡಿದ್ದಾರೆ. ಸಾವನ್ನಪ್ಪಿದ ಮಗಳ ಶರೀರವನ್ನು ಯಾವುದೇ ಸರ್ಕಾರಿ ಆಸ್ಪತ್ರೆಗಾಗಲೀ ಅಥವಾ ಖಾಸಗಿ ಆಸ್ಪತ್ರೆಗಾಗಲೀ ತೆಗೆದುಕೊಂಡು ಹೋಗಬಾರದು ಎಂದು ಆರೋಪಿ ಕಡೆಯವರು ಬೆದರಿಕೆ ಹಾಕಿದರಂತೆ. ಹೋಗುವುದಾದರೆ ಸ್ಥಳೀಯ ಕ್ಲಿನಿಕ್‌ಗೆ ಹೋಗಿ ಎಂದರು, ಆದರೆ ನಂತರ ಬಲವಂತದಿಂದ ಅಂತ್ಯಕ್ರಿಯೆ ಮಾಡಿದರು ಎಂದು ಕುಟುಂಬದವರು ನೋವು ತೋಡಿಕೊಂಡಿದ್ದಾರೆ. ಈ ಪ್ರಕರಣ 2020ರ ಹತ್ರಾಸ್‌ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನೆನಪಿಸುವಂತಿದೆ. 

ಇದನ್ನೂ ಓದಿ: Bengaluru Crime: ಆಸ್ತಿಗಾಗಿ ತಂದೆಯನ್ನೇ ಮುಗಿಸಲು ಮಲತಾಯಿ ಪ್ಲಾನ್‌?: ಮಗನಿಂದಲೇ ದೂರು

ನ್ಯಾಯ ಕೊಡಿಸುವ ಆಶ್ವಾಸನೆ ನೀಡಿದ ಟಿಎಂಸಿ, ಪ್ರತಿಭಟನೆಗೆ ಮುಂದಾದ ಬಿಜೆಪಿ:
ಈ ಘಟನೆಗೆ ಸಂಬಂಧಿಸಿದಂತೆ ನಿಶ್ಪಕ್ಷಪಾತ ತನಿಖೆ ನಡೆಯಲಿದೆ ಮತ್ತು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ತೃಣಮೂಲ ಕಾಂಗ್ರೆಸ್‌ ನಾಯಕರು ಆಶ್ವಾಸನೆ ನೀಡಿದ್ದಾರೆ. ಆದರೆ ಭಾರತೀಯ ಜನತಾ ಪಕ್ಷ, ಪ್ರಕರಣ ಸಂಬಂಧ ಪ್ರತಿಭಟನೆಗೆ ಮುಂದಾಗಿದೆ. 

Follow Us:
Download App:
  • android
  • ios