ಸಂತ್ರಸ್ತೆಗೆ ಅರಿವಿತ್ತು, ಆರೋಪಿ ಕಾಂಡೋಂ ಬಳಸಿದ್ದ: ಅಪ್ರಾಪ್ತೆಯ ರೇಪ್ ಆರೋಪಿಗೆ ಜಾಮೀನು!

ಕಾಂಡೋಂ ಬಳಸಿದ್ದ ಹಾಗೂ ಸಂತ್ರಸ್ತೆಗೆ ಅರಿವಿದ್ದೇ ಲೈಂಗಿಕ ಕ್ರಿಯೆ ನಡೆದಿದೆ ಎಂದಿರುವ ಕೋರ್ಟ್‌ ಈ ವಿಚಾರವನ್ನು ಆಧಾರವಾಗಿಟ್ಟುಕೊಂಡು ಅತ್ಯಾಚಾಋ ಆರೋಪಿಗೆ ಜಾಮೀನು ನೀಡಿದೆ. 

Bombay HC Grants Bail to Rape Accused Noting that He Used Condom During Sex With 16 Year Old pod

ಮಹಾರಾ‍ಷ್ಟ್ರ(ಏ.11): ಬಾಂಬೆ ಹೈಕೋರ್ಟ್ ಅತ್ಯಾಚಾರ ಆರೋಪಿಯೊಬ್ಬನಿಗೆ ಜಾಮೀನು ನೀಡಿದ್ದು, 16 ವರ್ಷದ ಸಂತ್ರಸ್ತೆಗೆ ಕೃತ್ಯದ ಪರಿಣಾಮಗಳ ಬಗ್ಗೆ ತಿಳಿದಿತ್ತು ಮತ್ತು ಆರೋಪಿಯು ಅವಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗ ಕಾಂಡೋಮ್ ಬಳಸಿದ್ದಾನೆ ಎಂದು ಕೋರ್ಟ್‌ ತಿಳಿಸಿದೆ.

ಸೆಪ್ಟೆಂಬರ್ 9, 2019 ರಂದು ಕೊಲ್ಲಾಪುರ ಪೊಲೀಸರು ಅತ್ಯಾಚಾರ ಆರೋಪಿಯನ್ನು ಬಂಧಿಸಿತ್ತು. ಅಂದಿನಿಂದ ಬಂಧನದಲ್ಲಿದ್ದ ಆರೋಪಿಯ ಜಾಮೀನು ಅರ್ಜಿಯನ್ನು ಏಕ-ನ್ಯಾಯಪೀಠ ಸಿವಿ ಭದಂಗ್ ವಿಚಾರಣೆ ನಡೆಸುತ್ತಿದ್ದರು.

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗಳ ಬೆದರಿಕೆಗೆ ಹೆದರಿ ಕಬಾಬ್ ಸ್ಟೋರಿ ಹೇಳಿದ ಬಾಲಕಿ

ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೂ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಆಕೆ ಅಪ್ರಾಪ್ತ ವಯಸ್ಕಳಾಗಿದ್ದರೂ, 16.5 ವರ್ಷ ವಯಸ್ಸಿನ ಆಕೆಗೆ, ಆಕೆ ನಡೆಸುತ್ತಿರುವ ಕ್ರಿಯೆಯ ಪರಿಣಾಮಗಳ ಬಗ್ಗೆ ಾರಿವಿತ್ತು ಎಂದು ನ್ಯಾಯಮೂರ್ತಿ ಭದಂಗ್ ಹೇಳಿದ್ದಾರೆ.

"ಸಂತ್ರಸ್ತೆಗೆ 16 ವರ್ಷ ಮತ್ತು 6 ತಿಂಗಳ ವಯಸ್ಸಾಗಿದೆ ಮತ್ತು ಕೃತ್ಯದ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ತಿಳಿದಿದೆ ಎಂಬುವುದು ಉಲ್ಲೇಖನೀಯ. ಈ ಲೈಂಗಿಕ ಕ್ರಿಯೆ ಒತ್ತಾಯಪೂರ್ವಕ ಅಥವಾ ಬಲವಂತದಿಂದ ನಡೆದಿಲ್ಲ ಎಂದು ಸಾಬೀತುಪಡಿಸುವ ಅಂಶಗಳಿವೆ. ಅಲ್ಲದೇ ವೈದ್ಯಕೀಯ ವರದಿಯು ಷರತ್ತು 15 (ಎಫ್) ರ ಪ್ರಕಾರಅರ್ಜಿದಾರರು ಸಂತ್ರಸ್ತೆಯ ಜೊತೆ ದೈಹಿಕ ಸಂಬಂಧ ನಡೆಸಿದ ವೇಳೆ ಕಾಂಡೋಮ್ ಸಹ ಬಳಸಿದ್ದಾರೆ ಎಂದು ತೋರಿಸುತ್ತದೆ, "ಎಂದು ಕೋರ್ಟ್‌ ಗಮನಿಸಿದೆ.

ಆರೋಪಿಯ ಕಳೆದ ಎರಡು ವರ್ಷಗಳಿಂದ ಬಂಧನದಲ್ಲಿದ್ದ, ಹೀಗಾಗಿ ₹ 25,000 ರ ಶ್ಯೂರಿಟಿಯನ್ನು ಒದಗಿಸುವುದನ್ನು ಪರಿಗಣಿಸಿ ಜಾಮೀನು ನೀಡಲು ಮುಂದಾಗಿರುವುದಾಗಿ ನ್ಯಾಯಮೂರ್ತಿ ಭದಂಗ್ ಉಲ್ಲೇಖಿಸಿದ್ದಾರೆ. ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ, ಆಕೆಯ ತಂದೆ ಎಫ್‌ಐಆರ್ ದಾಖಲಿಸಿದಾಗ ಸಂತ್ರಸ್ತೆ ಆಗಿನ ಸಮಯದಲ್ಲಿ 16 ವರ್ಷ ಮತ್ತು 6 ತಿಂಗಳ ವಯಸ್ಸು ತಲುಪಿದ್ದರು. ಆರೋಪಿ ಸಂತ್ರಸ್ತೆಯ ಸ್ನೇಹಿತನ ಸಹೋದರನಾಗಿದ್ದು, ಇಬ್ಬರಿಗೂ ಪರಸ್ಪರ ಪರಿಚಯವಿತ್ತು ಎಂದೂ ನ್ಯಾಯಾಲಯ ತಿಳಿಸಿದೆ.

ಮೇ 2019 ರಲ್ಲಿ, ಸಂತ್ರಸ್ತೆ ಆರೋಪಿಯು ತನ್ನನ್ನು ತನ್ನ ಮನೆಯ ಹಿಂದೆ ಕರೆದು, ಪಗ್ರೀತಿಯ ವಿಚಾರ ಮುಂದಿಟ್ಟು ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಿದ್ದಾರೆ. ಇದು ಕೆಲವು ತಿಂಗಳುಗಳ ಕಾಲ ಮುಂದುವರೆಯಿತು ಮತ್ತು ಅಂತಿಮವಾಗಿ, ಸಂತ್ರಸ್ತೆಯ ತಂದೆಗೆ ಸಂಬಂಧದ ಬಗ್ಗೆ ತಿಳಿದಿದೆ. ಕೂಡಲೇ ಅವರು ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 

Sexual Wellness Tips: ಹದಿಹರೆಯದಲ್ಲೇ ಗರ್ಭಧಾರಣೆ! Safe Sex ಬಗ್ಗೆ ತಿಳಿದುಕೊಳ್ಳೋಕೆ ಇದು ಸಕಾಲ

ಆರೋಪಿ ಪರ ವಾದ ಮಂಡಿಸಿದ ವಕೀಲ ಪರಸ್ ಯಾದವ್, ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವಳಾಗಿದ್ದರೂ ಆಕೆಗೆ ವಯಸ್ಸಾಗಿರುವುದರಿಂದ ಆಕೆ ಕೃತ್ಯದ ಸ್ವರೂಪ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದು ತಿಳಿಸಿದರು. ಅವರು ಸಂತ್ರಸ್ತೆಯ ವೈದ್ಯಕೀಯ ವರದಿಗಳ ಮೇಲೆ ಮತ್ತಷ್ಟು ಅವಲಂಬಿತರಾಗಿದ್ದಾರೆ, ಇದು ಸಂಬಂಧವು ಒಮ್ಮತದಿಂದ ಕೂಡಿದೆ ಎಂದು ಸೂಚಿಸುತ್ತದೆ ಎಂದು ಅವರು ಹೇಳಿದರು.

ಈ ವೇಳೆ ಪ್ರತಿವಾದಿಸಿದ, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಆರ್ ಕಪಾಡ್ನಿಸ್ ಅವರು ಸಂತ್ರಸ್ತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ಅಪ್ರಾಪ್ತೆ ಎಂದು ವಾದಿಸಿದರು ಮತ್ತು ಆರೋಪಿಗಳು ಅನೇಕ ಸಂದರ್ಭಗಳಲ್ಲಿ ಆಕೆಯನ್ನು ಲೈಂಗಿಕವಾಗಿ ದೌರ್ಜನ್ಯಕ್ಕೀಡು ಮಾಡಿದ್ದಾನೆ ಎಂದಿದ್ದಾರೆ. ಆದರೆ ನ್ಯಾಯಾಲಯವು ಆರೋಪಿಯ ವಾದವನ್ನು ಪರಿಗಣಿಸಿ ಜಾಮೀನು ನೀಡಲು ಮುಂದಾಗಿದೆ. 

Latest Videos
Follow Us:
Download App:
  • android
  • ios