'ತುಂಬಾ ಒಳ್ಳೆ ಕೆಲಸ ಮಾಡಿದ್ದಿ ಬ್ರದರ್':‌ ಫೇಸ್‌ಬುಕ್‌ನಲ್ಲಿ ಕನ್ಹಯ್ಯಾ ಹತ್ಯೆ ವಿಡಿಯೋ ಹೊಗಳಿದ ವ್ಯಕ್ತಿ ಬಂಧನ!

Udaipur Kanhaiya Lal Murder: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕನ್ಹಯ್ಯಾ ಲಾಲ್‌ ಹತ್ಯೆ  ವೀಡಿಯೊವನ್ನು ಲೈಕ್ ಮಾಡಿ, ಹತ್ಯೆಯನ್ನು ಹೊಗಳಿದ್ದಕ್ಕಾಗಿ  ಛಪ್ರೌಲಿ ನಿವಾಸಿಯನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ

Noida man held for praising Udaipur Kanhaiya Lal beheading video on social media mnj

ನವದೆಹಲಿ (ಜೂ. 30): ಉದಯಪುರದಲ್ಲಿ ನಡೆದ ಟೈಲರ್‌ ಕನ್ಹಯ್ಯಾ ಲಾಲ್‌ ಹತ್ಯೆ ಸದ್ಯ ದೇಶಾದ್ಯಂತ ಚರ್ಚೆಯಾಗುತ್ತಿದ್ದೆ. ‌ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕನ್ಹಯ್ಯಾ ಲಾಲ್‌ ಹತ್ಯೆ  ವೀಡಿಯೊವನ್ನು ಲೈಕ್ ಮಾಡಿ, ಹತ್ಯೆಯನ್ನು ಹೊಗಳಿದ್ದಕ್ಕಾಗಿ  ಛಪ್ರೌಲಿ ನಿವಾಸಿಯನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಕನ್ಹಯ್ಯಾ ಲಾಲ್ ಶಿರಚ್ಛೇದನದ ವೈರಲ್ ವಿಡಿಯೋ ಕುರಿತು ಆರೋಪಿ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದು ಆರೋಪಿಯ ವಿರುದ್ಧ ಕಲಂ 505(2)/295A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನೋಯ್ಡಾದ ಸೆಕ್ಟರ್ 168 ರ ನಿವಾಸಿ ಯೂಸುಫ್ ಖಾನ್ (Yusuf Khan) ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಲೈಕ ಮಾಡಿದ್ದು  “ತುಂಬಾ ಒಳ್ಳೆ ಕೆಲಸ ಮಾಡಿದ್ದಿ ನನ್ನ ಸಹೋದರ” (Very well done my brother) ಎಂದು ಕಾಮೆಂಟ್ ಮಾಡಿದ್ದಾನೆ. ಅದೇ ಗ್ರಾಮದ ನಿವಾಸಿಯೊಬ್ಬರು ದೂರು ನೀಡಿದ ಹಿನ್ನೆಲೆ ಆರೋಪಿಯನ್ನು ಬಂಧಿಸಲಾಗಿದೆ. ವಿಡಿಯೋ ಕುರಿತು ಕಾಮೆಂಟ್ ಮಾಡಲು ಬಳಸಿದ್ದ ಮೊಬೈಲ್ ಫೋನ್ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಾಗ್ಪತ್ ಜಿಲ್ಲೆಯ ಛಪ್ರೌಲಿ ಗ್ರಾಮದ ನಿವಾಸಿಗಳು ಆರೋಪಿ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ನೋಯ್ಡಾ ವಲಯ ಎಡಿಸಿಪಿ ರಣವಿಜಯ್ ಸಿಂಗ್ ಹೇಳಿದ್ದಾರೆ. ಇನ್ನು ಉದಯಪುರದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ನೋಯ್ಡಾದ ಎಲ್ಲಾ ಪೊಲೀಸ್ ಠಾಣೆಗಳು ಅಲರ್ಟ್ ಆಗಿವೆ.

ಇದನ್ನೂ ಓದಿ: ಕನ್ಹಯ್ಯಾ ಹಂತಕರನ್ನು ಗಲ್ಲಿಗೇರಿಸಿ: ಶಿರಚ್ಛೇದಕ್ಕೆ ಹಿಂದೂಗಳ ಆಕ್ರೋಶ, ರಾಜ್ಯಾದ್ಯಂತ ಪ್ರತಿಭಟನೆ

ನಗರದ ವಾತಾವರಣವನ್ನು ಪರಿಶೀಲಿಸಲು ಪೊಲೀಸರು ಸಾಮಾಜಿಕ ಮಾಧ್ಯಮಗಳ ಮೇಲೆ ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ ಮತ್ತು ಪರಿಶೀಲಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಪ್ರಚೋದನಕಾರಿ ಸಂದೇಶಗಳು ಮತ್ತು ವೀಡಿಯೊಗಳಿಗೆ ಗಮನ ಕೊಡಬೇಡಿ ಎಂದು ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.

ನೂಪುರ್‌ ಶರ್ಮಾ ಬೆಂಬಲಿಸಿದ್ದಕ್ಕಾಗಿ ಕನ್ಹಯ್ಯಾ ಲಾಲ್‌ ಹತ್ಯೆ: ಪ್ರವಾದಿ ಮೊಹಮ್ಮದರ ಕುರಿತು ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಆಡಿದ್ದ ಮಾತು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದ ಕನ್ಹಯ್ಯಾ ಲಾಲ್‌ನನ್ನು ರಾಜಸ್ಥಾನದ ಉದಯ್‌ಪುರದಲ್ಲಿ ಇಬ್ಬರು ಧರ್ಮಾಂಧ ವ್ಯಕ್ತಿಗಳು ಐಸಿಸ್‌ ಮಾದರಿಯಲ್ಲಿ ಶಿರಚ್ಛೇದಗೊಳಿಸಿ ಹತ್ಯೆ ಮಾಡಿದ್ದರು. ಜೊತೆಗೆ ಇಡೀ ಘಟನೆಯನ್ನು ವಿಡಿಯೋ ಮಾಡಿ ಹರಿಯಬಿಟ್ಟಿದ್ದರು. 

ಮಂಗಳವಾರ ಮಧ್ಯಾಹ್ನ ನಡೆದ ಈ ಭೀಕರ ಘಟನೆ ಇಡೀ ದೇಶವನ್ನು ತಲ್ಲಣಗೊಳಿಸಿದ್ದು, ಧರ್ಮಾಂಧರ ಕೃತ್ಯದ ಬಗ್ಗೆ  ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆ ನಡೆದ ಕೆಲ ಹೊತ್ತಿನಲ್ಲೇ ನೆರೆಯ ರಾಜ್‌ಸಮಂದ್‌ ಜಿಲ್ಲೆಯಲ್ಲಿ ಆರೋಪಿಗಳಾದ ಮಹಮ್ಮದ್‌ ರಿಯಾಜ್‌ ಅಖ್ತಾರಿ ಮತ್ತು ಮಹಮ್ಮದ್‌ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  

ಇದನ್ನೂ ಓದಿ: ಇಂದು ನನ್ನ ಗಂಡ ನಾಳೆ ಇತರರು, ಹಿಂದೂ ಸಮಾಜಕ್ಕೆ ಕನ್ಹಯ್ಯಾ ಪತ್ನಿ ಎಚ್ಚರಿಕೆ

ಇನ್ನು ಕೊಲೆಯಾದ ಅದೇ ದಿನ, ಇಬ್ಬರು ವ್ಯಕ್ತಿಗಳು ಉದಯಪುರದ ಟೈಲರ್ ಅಂಗಡಿಗೆ ನುಗ್ಗಿ ಕನ್ಹಯ್ಯಾ ಲಾಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಇಬ್ಬರು ವ್ಯಕ್ತಿಗಳು ಪೋಸ್ಟ್ ಮಾಡಿದ ಪ್ರತ್ಯೇಕ ವೀಡಿಯೊದಲ್ಲಿ, ಇಬ್ಬರು ಕೊಲೆಯನ್ನು ಒಪ್ಪಿಕೊಂಡಿದ್ದು, ಸದ್ಯ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. 

Latest Videos
Follow Us:
Download App:
  • android
  • ios