Asianet Suvarna News Asianet Suvarna News

Chikkaballapur: ಅಕ್ರಮ ವಿದ್ಯುತ್‌ ತಂತಿ ಬೇಲಿ ಹಾಕಿದ್ದವನ ಬಡಿದು ಕೊಂದ ದುರುಳರು

*   ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚರಕಮಟ್ಟೇನಹಳ್ಳಿಯಲ್ಲಿ ನಡೆದ ಘಟನೆ
*   ವಿದ್ಯುತ್‌ ತಂತಿ ಸ್ಪರ್ಶಿಸಿ ಯುವಕ ಸಾವು
*   ಮೃತನ ಬಂಧುಗಳಿಂದ ತೋಟದ ಮಾಲೀಕನ ಕೊಲೆ
 

Chikkaballapur Man Murder for Illegal Electric Wire to Land grg
Author
Bengaluru, First Published Nov 26, 2021, 7:40 AM IST
  • Facebook
  • Twitter
  • Whatsapp

ಚಿಕ್ಕಬಳ್ಳಾಪುರ(ನ.26):  ಜಿಲ್ಲೆಯ ಗೌರಿಬಿದನೂರು(Gauribidanur) ತಾಲೂಕಿನ ಚರಕಮಟ್ಟೇನಹಳ್ಳಿಯಲ್ಲಿ ವಿದ್ಯುತ್‌(Electricity) ಅಕ್ರಮ ಸಂಪರ್ಕ ಇಬ್ಬರನ್ನು ಬಲಿ ಪಡೆದಿದೆ. ತೋಟಕ್ಕೆ ಅಳವಡಿಸಿದ್ದ ವಿದ್ಯುತ್‌ ತಂತಿ ತುಳಿದು ಯುವಕ ಮೃತಪಟ್ಟಿದರಿಂದ ರೊಚ್ಚಿಗೆದ್ದ ಯುವಕನ ಸಂಬಂಧಿಕರು ತೋಟದ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತನನ್ನು ಕೊಲೆ ಮಾಡಿದ್ದಾರೆ.

ವಿದ್ಯುತ್‌ ಬಲಿಯಾದ ವ್ಯಕ್ತಿ ಗೌರಿಬಿದನೂರು ತಾಲೂಕಿನ ಚರಕಮಟ್ಟೇನಹಳ್ಳಿ ಗ್ರಾಮದ ವಸಂತರಾವ್‌(29) ಹಾಗೂ ಹತ್ಯೆಗೀಡಾದ(Murder) ಮಾಲೀಕ ಚಿಕ್ಕಹುಸೇನಪುರ ಗ್ರಾಮದ ಅಶ್ವತ್ಥರಾವ್‌(45) ಎಂದು ಗುರುತಿಸಲಾಗಿದೆ.

Murder: ATM ದೋಚಲು ಬಂದಿದ್ದ ದುಷ್ಕರ್ಮಿಗಳಿಂದ ಬ್ಯಾಂಕ್ ಸೆಕ್ಯೂರಿಟಿ ಬರ್ಬರ ಕೊಲೆ?

ಏನಿದು ಪ್ರಕರಣ:

ಇತ್ತೀಚೆಗೆ ತೀವ್ರ ಮಳೆಯಿಂದಾಗಿ(Rain) ತರಕಾರಿ ಸೇರಿದಂತೆ ಟೊಮೆಟೋ ಬೆಳೆಯ ದರ ಗಗನಕ್ಕೇರಿದೆ. ಈ ಕಾರಣಕ್ಕಾಗಿಯೆ ಬೆಳೆ ರಕ್ಷಣೆಗಾಗಿ ಟೊಮೇಟೊ ತೋಟಕ್ಕೆ ಮಾಲೀಕ ಅಕ್ರಮವಾಗಿ ತನ್ನ ತೋಟಕ್ಕೆ ಕಲ್ಪಿಸಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಯುವಕ ಮೃತಪಟ್ಟ(Death) ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಯುವಕನ ಕುಟುಂಬಸ್ಥರು ತೋಟದ ಮಾಲೀಕನನ್ನು ಥಳಿಸಿ(Assault) ಹತ್ಯೆಗೈದಿದ್ದಾರೆ.

ಚಿಕ್ಕಹುಸೇನಪುರ ಗ್ರಾಮದ ರೈತ(Farmer) ಅಶ್ವತ್ಥರಾವ್‌ ಟೊಮೆಟೋ ಬೆಳೆದಿದ್ದರು. ಟೊಮೆಟೋ(Tomato) ದರ ದುಬಾರಿಯಾಗಿದ್ದರ ಹಿನ್ನೆಲೆಯಲ್ಲಿ ತೋಟಕ್ಕೆ ಕಳ್ಳರ ಕಾಟ ಎದುರಾಗಬಹುದು. ಜತೆಗೆ ಪ್ರಾಣಿಗಳು(Animals) ಲಗ್ಗೆ ಇಡಬಹದೆಂದು ಬೆಳೆ(Crop) ರಕ್ಷಣೆ ಸಲುವಾಗಿ ತೋಟಕ್ಕೆ ಕಂಬದಿಂದ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದರು. ತೋಟದ ಪಕ್ಕದಲ್ಲೇ ಜಮೀನು ಹೊಂದಿರುವ ವಸಂತರಾವ್‌ ಸಹ ತನ್ನ ಜಮೀನಿನಲ್ಲಿ ಮೇಕೆ ಶೆಡ್‌ ನಿರ್ಮಿಸಿಕೊಂಡಿದ್ದರು. ಕಳೆದ ರಾತ್ರಿ ಮೇಕೆ ಮರಿ ತಪ್ಪಿಸಿಕೊಂಡು ಟೊಮೇಟೊ ತೋಟಕ್ಕೆ ನುಗ್ಗಿದೆ. ಆ ವೇಳೆ ಅಶ್ವತ್ಥರಾವ್‌ ತೋಟದ ಬಳಿ ಹೋದಾಗ ವಿದ್ಯುತ್‌ ತಗುಲಿ ವಸಂತರಾವ್‌ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಲೀಕನ ಮೇಲೆ ಹಲ್ಲೆ, ಕೊಲೆ:

ವಿದ್ಯುತ್‌ ತಂತಿ ಸ್ಪರ್ಶದಿಂದಲೇ ಯುವಕ ಮೃತಪಟ್ಟಿರುವ ವಿಷಯ ತಿಳಿದ ಸಂಬಂಧಿಕರು, ತೋಟದ ಪಕ್ಕದ ಶೆಡ್‌ನಲ್ಲಿ ಮಲಗಿದ್ದ ತೋಟದ ಮಾಲೀಕ ಅಶ್ವತ್ಥರಾವ್‌ರನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಆಗ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಎರಡೂ ಕಡೆಯಿಂದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು(Police) ಅಶ್ವತ್ಥರಾವ್‌ ಕೊಲೆಗೆ ಕಾರಣದ ಆರೋಪಿಗಳ(Accused) ಬಂಧನಕ್ಕೆ ಬಲೆ ಬೀಸಿದ್ದಾರೆ.

ಮನೆಗಳವು ಮಾಡುತ್ತಿದ್ದ ರೌಡಿ ಶೀಟರ್‌ ಸೇರಿ ಇಬ್ಬರ ಬಂಧನ

ಬೆಂಗಳೂರು(Bengaluru):  ಬೀಗ ಹಾಕಿದ ಮನೆಗಳಲ್ಲಿ ಕಳವು(Theft) ಮಾಡುತ್ತಿದ್ದ ರೌಡಿ ಶೀಟರ್‌(Rowdysheeter) ಸೇರಿ ಇಬ್ಬರನ್ನು ಸಂಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ(Arrest).

Murder Case | ಲೈಂಗಿಕ ದೌರ್ಜನ್ಯ ನೀಡಿದ ಸ್ವಂತ ತಂದೆ : ಸ್ನೇಹಿತರಿಂದ ಅಪ್ಪನ ಕೊಲ್ಲಿಸಿದ ಮಗಳು

ಸಂಜಯ ನಗರದ ಶರಣಪ್ಪ (24) ಮತ್ತು ಹರೀಶ್‌(24) ಬಂಧಿತರು. ಆರೋಪಿಗಳಿಂದ 3.70 ಲಕ್ಷ ಮೌಲ್ಯದ 24 ಗ್ರಾಂ ತೂಕದ ಚಿನ್ನಾಭರಣ, 2 ಲ್ಯಾಪ್‌ಟಾಪ್‌(Laptop), 2 ಐಫೋನ್‌(iPhone) ಹಾಗೂ 2 ದ್ವಿಚಕ್ರ ವಾಹನ(Bikes) ವಶಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಸಂಜಯ ನಗರ ವ್ಯಾಪ್ತಿಯಲ್ಲಿ ನಡೆದ ಮನೆಗಳವು ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಹಲವು ವರ್ಷಗಳಿಂದ ಮನೆಗಳವು, ದ್ವಿಚಕ್ರ ವಾಹನ ಕಳವು, ಸುಲಿಗೆ, ಕಳ್ಳತನ ಸೇರಿದಂತೆ ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಸಂಜಯ ನಗರ ಠಾಣೆ ರೌಡಿ ಶೀಟರ್‌ ಶರಣಪ್ಪ ಈ ಹಿಂದೆ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಮತೊಬ್ಬ ಆರೋಪಿ ಹರೀಶ್‌ ಸಹ ರಾಮಮೂರ್ತಿ ನಗರ ಹಾಗೂ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ, ಕೊಲೆ ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದ. ಒಟ್ಟು ಆರು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 
 

Follow Us:
Download App:
  • android
  • ios