ಮತಾಂತರ ಮಾಡುತ್ತಿದ್ದ ಛಂಗುರ್ ಬಾಬಾ ಬಳಸುತ್ತಿದ್ದ ಕೋಡ್ ವರ್ಡ್‌ಗಳು ಬಯಲಿಗೆ ಬಂದಿವೆ. ಮಿಟ್ಟಿ ಪಲಟನಾ, ಕಾಜಲ್ ಲಗಾನಾ, ದರ್ಶನ್ ಎಂಬ ಕೋಡ್‌ಗಳ ಮೂಲಕ ಮತಾಂತರ ನಡೆಸುತ್ತಿದ್ದ. ಜಾತಿಯ ಆಧಾರದ ಮೇಲೆ ಹಣ ನಿಗದಿಪಡಿಸಿ ಮತಾಂತರ ಮಾಡಿಸುತ್ತಿದ್ದ.
ಸೈಕಲ್ನಲ್ಲಿ ತಾಯತ ಮಾರುತ್ತಲೇ ಹಿಂದೂ ಹೆಣ್ಣುಮಕ್ಕಳ ಸ್ಕೆಚ್ ಹಾಕುತ್ತಲೇ ಕೆಲವೇ ದಿನಗಳಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಮಹಿಳೆಯರ ಮತಾಂತರ ಮಾಡಿರುವ ಉತ್ತರ ಪ್ರದೇಶದ ಛಂಗುರ್ ಬಾಬಾ ಜಮಾಲುದ್ದೀನ್ (Chhangur Baba) ಅರೆಸ್ಟ್ ಆಗುತ್ತಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆದೇಶದ ಮೇರೆಗೆ ಈತ ಅಕ್ರಮವಾಗಿ ಕಟ್ಟಿದ್ದ ಐಷಾರಾಮಿ ಬಂಗಲೆಯನ್ನು ನೆಲಸಮಗೊಳಿಸಲಾಗಿದೆ. ಇದಾದ ಬಳಿಕ ಈತನ ಬಗ್ಗೆ ತನಿಖೆ ಚುರುಕಾಗಿದ್ದು, ಭಯಾನಕ ಘಟನೆಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ಮತಾಂತರಗೊಳಿಸಲು ವಿದೇಶಿ ಫಂಡ್ ಪಡೆಯುತ್ತಿದ್ದ ಈತ ನೂರಾರು ಕೋಟಿ ರೂಪಾಯಿಗಳ ಒಡೆಯನಾಗಿದ್ದಾನೆ . ಇವನಷ್ಟೇ ಅಲ್ಲದೇ ಇವನ ಮಗ ಕೂಡ ಸ್ವಿಸ್ ಬ್ಯಾಂಕ್ ಸೇರಿದಂತೆ 40ಕ್ಕೂ ಅಧಿಕ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದಾರೆ.
ಇದೀಗ ಈತ ತನ್ನ ಶಿಷ್ಯರಿಗೆ ಕೋಡ್ ವರ್ಡ್ ಮೂಲಕ ಮತಾಂತರಕ್ಕೆ ಆದೇಶಿಸುತ್ತಿದ್ದ. ಆ ಮೂರು ಕೋಡ್ ವರ್ಡ್‌ಗಳು ಇದೀಗ ಬೆಳಕಿಗೆ ಬಂದಿವೆ. "ಪ್ರಾಜೆಕ್ಟ್" ಹೆಸರಿನಲ್ಲಿ ಮತಾಂತರ ನಡೆಯುತ್ತಿತ್ತು. ಮಿಟ್ಟಿ ಪಲಟನಾ (ಮಣ್ಣನ್ನು ಬದಲಿಸುವುದು) ಎಂದರೆ ಮತಾಂತರ ಮಾಡುವುದು ಎಂಬ ಕೋಡ್ ವರ್ಡ್. ಇದಕ್ಕಾಗಿ ಮೊದಲು ಹಿಂದೂ ಹೆಣ್ಣುಮಕ್ಕಳ ಬ್ರೇನ್ವಾಷ್ ಮಾಡಬೇಕಲ್ಲ ಅದಕ್ಕಾಗಿ ಇಟ್ಟ ಹೆಸರು ಕಾಜಲ್ ಲಗಾನಾ (ಕಾಡಿಗೆ ಹಚ್ಚುವುದು), ಅದಾದ ಬಳಿಕ ಮತಾಂತರಗೊಳಿಸುವ ಮುನ್ನ ಎಲ್ಲಾ ಹೆಣ್ಣುಮಕ್ಕಳನ್ನು ಈತನ ಬಳಿ ಕಳುಹಿಸಲಾಗುತ್ತದೆ. ಅಲ್ಲಿ ಅವನು ಹಿಂದೂ ಹೆಣ್ಣುಮಕ್ಕಳ ಜೊತೆ ಏನು ಮಾಡುತ್ತಿದ್ದ ಎನ್ನುವುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ತನ್ನ ಬಳಿ ಇವರನ್ನು ಕರೆತರಲು ಆತ ಇಟ್ಟಿದ್ದ ಕೋಡ್ ವರ್ಡ್ 'ದರ್ಶನ್' ಎಂದು ಅರ್ಥಾತ್ ತನಗೆ ದರ್ಶನ ನೀಡಬೇಕು ಎನ್ನುವುದು.
ಇನ್ನು, ಈತನ ಕುರಿತು ಹೇಳುವುದಾದರೆ, ಒಂದೊಂದು ಜಾತಿಯ ಹುಡುಗಿಯನ್ನು ಮತಾಂತರ ಮಾಡಲು ರೇಟ್ ಫಿಕ್ಸ್ ಮಾಡಿದ್ದ. ಒಬ್ಬ ಬ್ರಾಹ್ಮಣ, ಸಿಖ್ ಅಥವಾ ಕ್ಷತ್ರಿಯ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿದರೆ ಅಂಥವರಿಗೆ 16 ಲಕ್ಷ ರೂಪಾಯಿ ಸಿಗುತ್ತಿತ್ತು. ಇತರೇ ಹಿಂದುಳಿದ ವರ್ಗದವರಾದರೆ 10 ರಿಂದ 12 ಲಕ್ಷ ಹಾಗೂ ಉಳಿದವರಿಗೆ 8 ರಿಂದ 10 ಲಕ್ಷ ರೂಪಾಯಿ ನಿಗದಿ ಮಾಡಿದ್ದ. ಹೀಗೆ ಮಾಡಲು ಅವನಿಗೆ ವಿದೇಶಿ ನೆರವು ಸಿಗುತ್ತಿತ್ತು. 40 ಬ್ಯಾಂಕ್ ಅಕೌಂಟ್ಗಳಲ್ಲಿ ಈತನಿಗೆ ಹಣದ ಹೊಳೆಯೇ ಹರಿದು ಬರುತ್ತಿತ್ತು. ಅದನ್ನು ಬಳಸಿಕೊಂಡು ತನ್ನ ಶಿಷ್ಯರನ್ನು ಮತಾಂತರಕ್ಕೆ ಬಿಡುತ್ತಿದ್ದ.
ಹೆಣ್ಣುಮಕ್ಕಳಿಗೆ ಬ್ರೇನ್ವಾಷ್ ಮಾಡಿಸಿ, ಅವರನ್ನು ಮತಾಂತರಗೊಳಿಸಿದರೆ ಅವರಿಗೆ ಇಷ್ಟು ಬೃಹತ್ ಮೊತ್ತದ ಹಣ ನೀಡಲಾಗುತ್ತಿತ್ತು. ಐಷಾರಾಮಿ ಬೈಕ್, ಕಾರುಗಳಲ್ಲಿ ಚಿತ್ರ ವಿಚಿತ್ರ ಹೇರ್ಸ್ಟೈಲ್ ಮಾಡಿಕೊಂಡು ಬರುವ ಸುಂದರ ಹುಡುಗರನ್ನು ನೋಡಿ ಮರಳಾಗುವ ಹಿಂದೂ ಹುಡುಗಿಯರಿಗೇನೂ ಕಮ್ಮಿ ಇಲ್ಲ. ಒಟ್ಟಿನಲ್ಲಿ ದುಡ್ಡಿದ್ದವನ ಜೊತೆ ಮೋಜು ಮಾಡುವ ಆಸೆಯಿಂದ ಬಲಿಯಾಗುವ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ (ಈಗಲೂ ಮಾಡುತ್ತಿರುವ) ಖದೀಮರಿಗೆ ಈತನೇ ನಾಯಕ!
ಇದರ ಜೊತೆ, ಮತಾಂತರದ ಕುರಿತು ಇನ್ನೂ ಕೆಲವು ವಿಷಯಗಳು ಬೆಳಕಿಗೆ ಬಂದಿವೆ. ಅದೇನೆಂದರೆ, ಸೋಷಿಯಲ್ ಮೀಡಿಯಾ, ಡೇಟಿಂಗ್ ಆ್ಯಪ್‌ಗಳ ಮೂಲಕ 15-24 ವಯಸ್ಸಿನ ಕೆಳ ಮಧ್ಯಮ ವರ್ಗದ ಹಿಂದೂ ಹೆಣ್ಣುಮಕ್ಕಳ ಜತೆ ಪ್ರೀತಿ, ಮದುವೆ ಅಥವಾ ಉದ್ಯೋಗ ಭರವಸೆ ನೀಡಿ ಸಂಪರ್ಕ ಮಾಡಲಾಗುತ್ತದೆ. ಕೊನೆಗೆ ಹಿಂದೂ ಧರ್ಮದ, ಹಿಂದೂ ದೇವತೆಗಳ ವಿರುದ್ಧ ಬ್ರೇನ್ವಾಷ್ ಮಾಡಿ, ಇಸ್ಲಾಂ ಬೋಧನೆಗಳ ವಿಡಿಯೋಗಳನ್ನು ಕಳಿಸಿ, ಅದೇ ಶ್ರೇಷ್ಠ ಎನ್ನುವಮತೆ ಮಾಡಲಾಗುತ್ತದೆ. ಬುದ್ಧಿಹೀನ ಹೆಣ್ಣುಮಕ್ಕಳು ಸುಲಭದಲ್ಲಿ ಇದಕ್ಕೆ ಟಾರ್ಗೆಟ್ ಆಗುತ್ತಾರೆ. ದಿ ಕೇರಳ ಸ್ಟೋರಿಯಂಥ ಸಿನಿಮಾ ಮಾಡಿರುವುದು ಇಂಥ ಹೆಣ್ಣುಮಕ್ಕಳಿಗೆ ಬುದ್ಧಿ ಬರಲಿ ಎನ್ನುವುದಕ್ಕಾಗಿಯೇ. ಆದರೂ, ದುಡ್ಡೇ ದೊಡ್ಡಪ್ಪ ಎಂದು ವರ್ತಿಸುವ ಹೆಣ್ಣುಮಕ್ಕಳು ತಾವು ಎಂಥ ಕೂಪದಲ್ಲಿ ಹೋಗುತ್ತಿದ್ದೇವೆ ಎನ್ನುವ ಅರಿವಿಲ್ಲದೇ ಬೀಳುತ್ತಿದ್ದಾರೆ. ಒಮ್ಮೆ ಅವರ ಜಾಲಕ್ಕೆ ಬಿದ್ದ ಮೇಲೆ ಮುಂದೆ ಸಾಯಲೂ ಆಗದೇ, ಬದುಕಲೂ ಆಗದೇ ಕ್ಷಣ ಕ್ಷಣವೂ ವಿಲವಿಲ ಒದ್ದಾಡುವ ಸ್ಥಿತಿ ಅವರದ್ದು.
