ತಾಯತ ಮಾರುವ ಸೋಗಿನಲ್ಲಿ ಇದಾಗಲೇ ಕೆಲವೇ ದಿನಗಳಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಹಿಂದೂ ಮಹಿಳೆಯರ ಮತಾಂತರ ಮಾಡಿಸಿರುವ ಛಂಗುರ್ ಬಾಬಾ ಜಮಾಲುದ್ದೀನ್ ಅರೆಸ್ಟ್ ಆಗಿದ್ದು, ಆಘಾತಕಾರಿ ವಿಷ್ಯಗಳು ರಿವೀಲ್ ಆಗ್ತಿವೆ.
ಈ ಫೋಟೋದಲ್ಲಿ ಕಾಣಿಸುತ್ತಿರುವ ಆಸಾಮಿಯ ಹೆಸರು ಛಂಗುರ್ ಬಾಬಾ ಜಮಾಲುದ್ದೀನ್ (Chhangur Baba). ಸೈಕಲ್ನಲ್ಲಿ ತಾಯತ ಮಾರುತ್ತಿದ್ದ ಈ ಖತರ್ನಾಕ್ ಬಾಬಾನ ಒಂದೊಂದೇ ಭಯಾನಕ ಕೃತ್ಯಗಳು ಆತ ಅರೆಸ್ಟ್ ಆದ ಬಳಿಕ ಬೆಳಕಿಗೆ ಬರುತ್ತಿದೆ. ಮೊನ್ನೆ ಈತನನ್ನು ಬಂಧಿಸಲಾಗಿದ್ದು, ಅವರು ನೂರಾರು ಕೋಟಿ ರೂಪಾಯಿಗಳ ಒಡೆಯನಾಗಿದ್ದು, ಐಷಾರಾಮಿ ಬಂಗಲೆ ಸೇರಿದಂತೆ ಐಷಾರಾಮಿ ಜೀವನ ನಡೆಸುತ್ತಿರುವುದು ತಿಳಿದುಬಂದಿದೆ. ಈತನ ಮಗ ಸ್ವಿಸ್ ಬ್ಯಾಂಕ್ನಲ್ಲಿಯೂ ಅಕೌಂಟ್ ಹೊಂದಿದ್ದಾನೆ. ಅಷ್ಟಕ್ಕೂ ಇಷ್ಟೊಂದು ಸಂಪಾದನೆ ಮಾಡುತ್ತಿದ್ದುದು ಹಿಂದೂಗಳನ್ನು ಅದರಲ್ಲಿಯೂ ಹೆಚ್ಚಾಗಿ ಹುಡುಗಿಯರು ಮತ್ತು ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡುವ ಮೂಲಕ! ಇದಾಗಲೇ ಒಂದೂವರೆ ಸಾವಿರಕ್ಕೂ ಅಧಿಕ ಹಿಂದೂ ಮಹಿಳೆಯರು ಈತನ ಮೋಸದ ಜಾಲಕ್ಕೆ ಬಿದ್ದು ಮತಾಂತರಗೊಂಡಿರುವುದಾಗಿ ಹೇಳಲಾಗುತ್ತಿದೆ.
ಉತ್ತರ ಪ್ರದೇಶದ ಈ ಆಸಾಮಿ, ಒಂದೊಂದು ಜಾತಿಯ ಹುಡುಗಿಯನ್ನು ಮತಾಂತರ ಮಾಡಲು ರೇಟ್ ಫಿಕ್ಸ್ ಮಾಡಿದ್ದ. ಒಬ್ಬ ಬ್ರಾಹ್ಮಣ, ಸಿಖ್ ಅಥವಾ ಕ್ಷತ್ರಿಯ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿದರೆ ಅಂಥವರಿಗೆ 16 ಲಕ್ಷ ರೂಪಾಯಿ ಸಿಗುತ್ತಿತ್ತು. ಇತರೇ ಹಿಂದುಳಿದ ವರ್ಗದವರಾದರೆ 10 ರಿಂದ 12 ಲಕ್ಷ ಹಾಗೂ ಉಳಿದವರಿಗೆ 8 ರಿಂದ 10 ಲಕ್ಷ ರೂಪಾಯಿ ನಿಗದಿ ಮಾಡಿದ್ದ. ಹೀಗೆ ಮಾಡಲು ಅವನಿಗೆ ವಿದೇಶಿ ನೆರವು ಸಿಗುತ್ತಿತ್ತು. 40 ಬ್ಯಾಂಕ್ ಅಕೌಂಟ್ಗಳಲ್ಲಿ ಈತನಿಗೆ ಹಣದ ಹೊಳೆಯೇ ಹರಿದು ಬರುತ್ತಿತ್ತು. ಅದನ್ನು ಬಳಸಿಕೊಂಡು ತನ್ನ ಶಿಷ್ಯರನ್ನು ಮತಾಂತರಕ್ಕೆ ಬಿಡುತ್ತಿದ್ದ. ಹೆಣ್ಣುಮಕ್ಕಳಿಗೆ ಬ್ರೇನ್ವಾಷ್ ಮಾಡಿಸಿ, ಅವರನ್ನು ಮತಾಂತರಗೊಳಿಸಿದರೆ ಅವರಿಗೆ ಇಷ್ಟು ಬೃಹತ್ ಮೊತ್ತದ ಹಣ ನೀಡಲಾಗುತ್ತಿತ್ತು. ಐಷಾರಾಮಿ ಬೈಕ್, ಕಾರುಗಳಲ್ಲಿ ಚಿತ್ರ ವಿಚಿತ್ರ ಹೇರ್ಸ್ಟೈಲ್ ಮಾಡಿಕೊಂಡು ಬರುವ ಸುಂದರ ಹುಡುಗರನ್ನು ನೋಡಿ ಮರಳಾಗುವ ಹಿಂದೂ ಹುಡುಗಿಯರಿಗೇನೂ ಕಮ್ಮಿ ಇಲ್ಲ. ಒಟ್ಟಿನಲ್ಲಿ ದುಡ್ಡಿದ್ದವನ ಜೊತೆ ಮೋಜು ಮಾಡುವ ಆಸೆಯಿಂದ ಬಲಿಯಾಗುವ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ (ಈಗಲೂ ಮಾಡುತ್ತಿರುವ) ಖದೀಮರಿಗೆ ಈತನೇ ನಾಯಕ!
ಇದರ ಜೊತೆ, ಮತಾಂತರದ ಕುರಿತು ಇನ್ನೂ ಕೆಲವು ವಿಷಯಗಳು ಬೆಳಕಿಗೆ ಬಂದಿವೆ. ಅದೇನೆಂದರೆ, ಸೋಷಿಯಲ್ ಮೀಡಿಯಾ, ಡೇಟಿಂಗ್ ಆ್ಯಪ್‌ಗಳ ಮೂಲಕ 15-24 ವಯಸ್ಸಿನ ಕೆಳ ಮಧ್ಯಮ ವರ್ಗದ ಹಿಂದೂ ಹೆಣ್ಣುಮಕ್ಕಳ ಜತೆ ಪ್ರೀತಿ, ಮದುವೆ ಅಥವಾ ಉದ್ಯೋಗ ಭರವಸೆ ನೀಡಿ ಸಂಪರ್ಕ ಮಾಡಲಾಗುತ್ತದೆ. ಕೊನೆಗೆ ಹಿಂದೂ ಧರ್ಮದ, ಹಿಂದೂ ದೇವತೆಗಳ ವಿರುದ್ಧ ಬ್ರೇನ್ವಾಷ್ ಮಾಡಿ, ಇಸ್ಲಾಂ ಬೋಧನೆಗಳ ವಿಡಿಯೋಗಳನ್ನು ಕಳಿಸಿ, ಅದೇ ಶ್ರೇಷ್ಠ ಎನ್ನುವಮತೆ ಮಾಡಲಾಗುತ್ತದೆ. ಬುದ್ಧಿಹೀನ ಹೆಣ್ಣುಮಕ್ಕಳು ಸುಲಭದಲ್ಲಿ ಇದಕ್ಕೆ ಟಾರ್ಗೆಟ್ ಆಗುತ್ತಾರೆ. ದಿ ಕೇರಳ ಸ್ಟೋರಿಯಂಥ ಸಿನಿಮಾ ಮಾಡಿರುವುದು ಇಂಥ ಹೆಣ್ಣುಮಕ್ಕಳಿಗೆ ಬುದ್ಧಿ ಬರಲಿ ಎನ್ನುವುದಕ್ಕಾಗಿಯೇ. ಆದರೂ, ದುಡ್ಡೇ ದೊಡ್ಡಪ್ಪ ಎಂದು ವರ್ತಿಸುವ ಹೆಣ್ಣುಮಕ್ಕಳು ತಾವು ಎಂಥ ಕೂಪದಲ್ಲಿ ಹೋಗುತ್ತಿದ್ದೇವೆ ಎನ್ನುವ ಅರಿವಿಲ್ಲದೇ ಬೀಳುತ್ತಿದ್ದಾರೆ. ಒಮ್ಮೆ ಅವರ ಜಾಲಕ್ಕೆ ಬಿದ್ದ ಮೇಲೆ ಮುಂದೆ ಸಾಯಲೂ ಆಗದೇ, ಬದುಕಲೂ ಆಗದೇ ಕ್ಷಣ ಕ್ಷಣವೂ ವಿಲವಿಲ ಒದ್ದಾಡುವ ಸ್ಥಿತಿ ಅವರದ್ದು.
ಹೀಗೆ ಹೆಣ್ಣುಮಕ್ಕಳು ಜಾಲಕ್ಕೆ ಬೀಳುತ್ತಿದ್ದಂತೆಯೇ, ಇದಕ್ಕಾಗಿಯೇ ಇರುವ ಕೆಲವು ಧಾರ್ಮಿಕ ಸಂಸ್ಥೆಗಳಿಗೆ ಕರೆದೊಯ್ದು ಅಧಿಕೃತವಾಗಿ ಮತಾಂತರಿಸಲಾಗುತ್ತದೆ. ಬಳಿಕ, ಹಿಂದೂ ಹೆಸರಿಟ್ಟುಕೊಂಡ ಮುಸ್ಲಿಂ ಹುಡುಗರ ಜತೆ ಮದುವೆ ಮಾಡಿಸಲಾಗುತ್ತದೆ. 16ರಿಂದ 22 ವರ್ಷದ ಹುಡುಗರಿಗೆ ಇದರ ತರಬೇತಿ ನೀಡಲಾಗಿರುತ್ತದೆ. 2018 ರಿಂದ 2024ನೇ ಇಸ್ವಿಯ ನಡುವೆ, ಭೋಪಾಲ್‌ನಲ್ಲಿರುವ ಸಂಸ್ಥೆಗೆ ದೋಹಾ ಮತ್ತು ಶಾರ್ಜಾದಿಂದ 18.5 ಕೋಟಿ ರು. ದೇಣಿಗೆ ಬಂದಿತ್ತು ಎನ್ನುವುದು ಈಗ ಬೆಳಕಿಗೆ ಬಂದಿದೆ. ಈ ಮತಾಂತರಕ್ಕೆ ಹಣವನ್ನು ಝಕಾತ್(ದಾನ) ಹೆಸರಲ್ಲಿ ಹೊಂದಿಸಲಾಗುತ್ತದೆ. ಇದಕ್ಕಾಗಿಯೇ ಕೆಲ ನಕಲಿ ಎನ್‌ಜಿಒಗಳನ್ನು ಸೃಷ್ಟಿಸಲಾಗುತ್ತದೆ. ದೆಹಲಿ, ಆಗ್ರಾ ಮತ್ತು ಲಖನೌನಲ್ಲಿ ಇಂತಹ ಸಂಸ್ಥೆಗಳು ಪತ್ತೆಯಾಗಿವೆ. ಗಲ್ಫ್ ರಾಷ್ಟ್ರಗಳಿಂದ ಹವಾಲಾ ಮಾರ್ಗದಲ್ಲಿ ನೇಪಾಳ, ಬಾಂಗ್ಲಾ, ದುಬೈ ಮೂಲಕ, ಅನುಮಾನ ಬರದಂತೆ ಕಂತುಗಳಲ್ಲಿ ಹಣ ಹರಿದು ಬರುತ್ತದೆ. ಇದನ್ನೆಲ್ಲಾ ನಡೆಸಿಕೊಡುತ್ತಿದ್ದ ಛಂಗುರ್ ಬಾಬಾ ಜಮಾಲುದ್ದೀನ್ ಸದ್ಯ ಸಿಕ್ಕಿಬಿದ್ದಿದ್ದಾನೆ. ಆದರೆ ಇಂಥ ಅದೆಷ್ಟೋ ಖತರ್ನಾಕ್ ಮಂದಿ ಇದರ ಹಿಂದೆ ಇದ್ದು, ಹಿಂದೂ ಹೆಣ್ಣುಮಕ್ಕಳಿಗೆ ಬುದ್ಧಿ ಬರದ ಹೊರತು ಬೇರೆ ಏನೂ ಮಾರ್ಗ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
