Asianet Suvarna News Asianet Suvarna News

POCSO Case : ಪಿಯು ಸ್ಟುಡೆಂಟ್ ಗ್ರೂಪ್‌ನಲ್ಲಿ ಪೋರ್ನ್ ವಿಡಿಯೋ! ಗಣಿತ ಶಿಕ್ಷಕ ಅರೆಸ್ಟ್

* ಖಾಸಗಿ ಶಾಳೆ ಗಣಿತ ಶಿಕ್ಷಕ ಮಾಡಿಕೊಂಡ ಎಡವಟ್ಟು
*ವಿದ್ಯಾರ್ಥಿಗಳಿಗೆಂದು ಮಾಡಿದ್ದ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ 
* ಮದ್ಯದ ನಶೆಯಲ್ಲಿ ಇಂಥ ಕೆಲಸ ಮಾಡಿದೆ ಎಂದ

Chennai teacher shares porn video on school WhatsApp group after consuming liquor mah
Author
Bengaluru, First Published Dec 21, 2021, 12:39 PM IST

ಚೆನ್ನೈ(ಡಿ. 21)  ಮಾಡಿಕೊಂಡ ಎಡವಟ್ಟು ಕೆಲಸಕ್ಕೆ ಈ ಶಿಕ್ಷಕ (Teacher) ಕೆಲಸ ಕಳೆದುಕೊಂಡಿದ್ದಾರೆ. ಖಾಸಗಿ ಶಾಲೆ ಶಿಕ್ಷಕ ವಿದ್ಯಾರ್ಥಿಗಳಿಗೆಂದು ಮಾಡಿಕೊಂಡಿದ್ದ ಗ್ರೂಪ್ ನಲ್ಲಿ ಅಶ್ಲೀಲ (Porn) ವಿಡಿಯೋ ಹರಿಬಿಟ್ಟಿದ್ದಾರೆ. 

ಕೊರೋನಾ (Coronavirus) ಕಾರಣದಿಂದ ಆನ್ ಲೈನ್ (Online) ತರಗತಿಗೆ ಅನುಕೂಲವಾಗಲು ವ್ಯಾಟ್ಸಪ್ ಗ್ರೂಪ್ ಮಾಡಲಾಗಿತ್ತು. ಈ ಗ್ರೂಪ್ ನಲ್ಲಿ ಗಣಿತ ಶಿಕ್ಷಕನೊಬ್ಬ ಅಶ್ಲೀಲ ವಿಡಿಯೋ ರವಾನಿಸಿದ್ದ.

12 ನೇ ತರಗತಿ ವಿದ್ಯಾರ್ಥಿಗಳಿಗಾಗಿ ರಚಿಸಿಕೊಂಡಿದ್ದ ವಾಟ್ಸಾಪ್ ಗ್ರೂಪ್ ನಲ್ಲಿ ಶಿಕ್ಷಕ ರಾತ್ರಿ ವೇಳೆ ಅಶ್ಲೀಲ ವಿಡಿಯೋ ಶೇರ್ ಮಾಡಿದ್ದಾನೆ.  ವಿಷಯ ದೊಡ್ಡದಾಗಿದ್ದು ಶಾಲಾ ಆಡಳಿತ ಮಂಡಳಿಯೇ ಶಿಕ್ಷಕನ ವಿರುದ್ಧ ದೂರು ನೀಡಿದೆ. ಹತ್ತು ವರ್ಷದಿಂದ ಗಣಿತ ಕಲಿಸುತ್ತಿದ್ದ ಶಿಕ್ಷಕ ಇದೀಗ ಶಿಕ್ಷೆಗೆ  ಗುರಿಯಾಗಬೇಕಾಗಿದೆ.

ಕಳೆದ ಶುಕ್ರವಾರ ರಾತ್ರಿ ಶಿಕ್ಷಕ ಆರ್  ಮತಿವಣ್ಣನ್ ಅಶ್ಲೀಲ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರು ಆಘಾತಕ್ಕೆ ಒಳಗಾಗಿದ್ದು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಹವಾಮಾನ ವರದಿ ಓದುತ್ತಿದ್ದ ಆಂಕರ್, ಪ್ಲೇ ಆಗಿದ್ದು ಮಾತ್ರ ಪೋರ್ನ್‌ ವಿಡಿಯೋ!

ಶಿಕ್ಷಕನನ್ನು ವಿಚಾರಣೆಗೆ ಒಳಪಡಿಸಿದ್ದು ನಾನು ಮದ್ಯ ಸೇವನೆ ಮಾಡಿದ್ದೆ. ಅಮಲಿನಲ್ಲಿ ಇದ್ದ ಕಾರಣ ಏನು ಮಾಡಿದೆ ಎನ್ನುವುದು ನೆನಪಿಲ್ಲ ಎಂದಿದ್ದಾನೆ. ಶಿಕ್ಷಕನ ವಿರುದ್ಧ ಪೋಕ್ರೋ(POCSO)  ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ.  ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚೆನ್ನೈಯ ಖಾಸಗಿ ಶಾಲೆಯೊಂದರಲ್ಲಿ ಒಂದು ದಶಕದಿಂದ ಗಣಿತ ಶಿಕ್ಷಕರಾಗಿರುವ ಮತಿವಣ್ಣನ್, ಪತ್ನಿ ಹಾಗೂ ಮಕ್ಕಳ ಜತೆ ಅಂಬತ್ತೂರಿನಲ್ಲಿ ವಾಸವಿದ್ದರು.

2016  ರಲ್ಲಿ ಇಂಥದ್ದೇ ಒಂದು ಪ್ರಕರಣ ವರದಿಯಾಗಿತ್ತು. ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿ ಆಕೆ ಎದುರಿನಲ್ಲಿಯೇ ಹಸ್ತಮೈಥುನ ಮಾಡಿಕೊಂಡಿದ್ದ ಶಿಕ್ಷಕನಿಗೆ ಶಿಕ್ಷೆ ವಿಧಿಸಲಾಗಿತ್ತು. 

ಚೆನ್ನೈನಲ್ಲೇ ಮತ್ತೊಂದು ಪ್ರಕರಣ:  ತನ್ನ 11 ವರ್ಷದ ಮಗನ ಶಾಲಾ ವಾಟ್ಸಾಪ್ ಗ್ರೂಪ್ ನಲ್ಲಿ ಅಶ್ಲೀಲ  ಕಂಟೆಂಟ್ ಒಂದನ್ನು ಶೇರ್ ಮಾಡಿದ್ದ ಅಪ್ಪನ ವಿರುದ್ಧ ದೂರು ದಾಖಲಾಗಿತ್ತು.

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ  ಬಿ ಮುನುಸಾಮಿ  ವಿಡಿಯೋ ಶೇರ್ ಮಾಡಿದ್ದರು. ಮಗ ಖಾಸಗಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿ. ಆನ್‌ಲೈನ್ ಶಿಕ್ಷಣಕ್ಕಾಗಿ ಮಗುವಿನ ಶಾಲೆಯು ವಾಟ್ಸಾಪ್‌ನಲ್ಲಿ ಒಂದು ಗುಂಪನ್ನು ರಚಿಸಿತ್ತು. ವಾಟ್ಸಾಪ್ ಗುಂಪಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಸದಸ್ಯರಾಗಿದ್ದರು.

ಶನಿವಾರ ಸಂಜೆ, ಮುನುಸಾಮಿ ಅವರು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಲೈಂಗಿಕ ಚಿತ್ರಗಳು ಮತ್ತು ವಿಡಿಯೋ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ.  ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿತ್ತು..  ನಂತರ ಅವರು ಈ ವಿಷಯದಲ್ಲಿ ಶಾಲಾ ಆಡಳಿತಕ್ಕೆ ತಿಳಸಿದ್ದಾರೆ. ಶಾಲಾ ಮಂಡಳಿ ದೂರು ನೀಡಿದ ಕಾರಣ ಪೊಲೀಸರು ಅವರನ್ನು ಬಂಧಿಸಿದ್ದರು.  ಸ್ನೇಹಿತರೊಬ್ಬರು ಕಳುಹಿಸಿದ ಕಂಟೆಂಟ್ ನನ್ನು ನಾನು ಮದ್ಯದ ನಶೆಯಲ್ಲಿದ್ದಾಗ ಸೆಂಡ್ ಮಾಡಿದ್ದೇನೆ ಎಂದು ಮುನಿಸಾಮಿ ಹೇಳಿದ್ದರು.

ರಾಜಕೀಯ ಪಕ್ಷದ ಗ್ರೂಪ್ ನಲ್ಲಿ ವಿಡಿಯೋ: ಉತ್ತರ ಕನ್ನಡ  ಜಿಲ್ಲೆಯ ಎಲ್ಲ ಶಾಸಕರು ಮತ್ತು ಸೊರಬ ಶಾಸಕ ಕುಮಾರ ಬಂಗಾರಪ್ಪ ಸಹ ಇರುವ ಗ್ರೂಪ್ ನಲ್ಲಿ  ಬ್ಲ್ಯೂಫಿಲಂ ಹರಿದಾಡಿತ್ತು. ಬಿಜೆಪಿ ವಲಯದಲ್ಲಿ ಇರಿಸು ಮುರಿಸು ಮತ್ತು ಮುಜುಗರಕ್ಕೆ ಈ ಪ್ರಕರಣ ಕಾರಣವಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ ,ಹಾಲಿ ಶಾಸಕರುಗಳಾದ ಭಟ್ಕಳ ಕ್ಷೇತ್ರದ ಸುನೀಲ್ ನಾಯ್ಕ ,ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ , ಜಿಲ್ಲಾ ಪಂಚಾಯ್ತಿ ಸದಸ್ಯೆ ಗಾಯಿತ್ರಿ ಗೌಡ ಸೇರಿದಂತೆ ಬಿಜೆಪಿಯ ಪ್ರಮುಖರು ಈ ಗ್ರೂಪ್ ನಲ್ಲಿದ್ದರು.

Follow Us:
Download App:
  • android
  • ios