ವಂಚನೆ ಪ್ರಕರಣ ಹಿನ್ನೆಲೆ ಶಿವಮೊಗ್ಗದಲ್ಲಿ ಬಂಧನಕ್ಕೊಳಗಾಗಿದ್ದ ಸಿನಿಮಾ ಹಾಗೂ ಕಿರುತೆರೆ ನಟಿ ಬೆಂಗಳೂರಿನ ಉಷಾ ರವಿಶಂಕರ್‌ ಅವ​ರಿಗೆ ಜಿಲ್ಲಾ ಕೋರ್ಚ್‌ ಮಧ್ಯಂತರ ಜಾಮೀನು ನೀಡಿದೆ.

ಶಿವಮೊಗ್ಗ (ಜೂ.18) ವಂಚನೆ ಪ್ರಕರಣ ಹಿನ್ನೆಲೆ ಶಿವಮೊಗ್ಗದಲ್ಲಿ ಬಂಧನಕ್ಕೊಳಗಾಗಿದ್ದ ಸಿನಿಮಾ ಹಾಗೂ ಕಿರುತೆರೆ ನಟಿ ಬೆಂಗಳೂರಿನ ಉಷಾ ರವಿಶಂಕರ್‌ ಅವ​ರಿಗೆ ಜಿಲ್ಲಾ ಕೋರ್ಚ್‌ ಮಧ್ಯಂತರ ಜಾಮೀನು ನೀಡಿದೆ.

ಸಲಗ, ಒಂದಲ ಎರಡು ಸಿನಿಮಾ ಹಾಗೂ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಉಷಾ ರವಿಶಂಕರ್‌ಗೆ ಫೇಸುಬುಕ್‌​ನ ನೀನಾಸಂ ಫ್ರೆಂಡ್‌ ಸರ್ಕಲ್‌ನಲ್ಲಿ ಶಿವಮೊಗ್ಗದ ಶರವಣನ್‌ ಪರಿಚಯವಾಗಿದ್ದರು. ಅನಂತರ ಈ ಪರಿಚಯ ಸ್ನೇಹವಾಗಿ ಬೆಳೆದಿತ್ತು. ಇಬ್ಬರೂ ವಾಟ್ಸ್‌ಆ್ಯಪ್‌ ನಂಬರ್‌ ವಿನಿಮಯ ಮಾಡಿಕೊಂಡು ಚಾಟ್‌ ಮಾಡುತ್ತಿದ್ದರು. ಬಳಿಕ ನಟಿ ಉಷಾ ಅವರು ಶರವಣ್‌ನಿಂದ ಆತನ ಕ್ರೆಡಿಟ್‌ ಕಾರ್ಡ್‌ ಬಳಸಿ .4 ಲಕ್ಷ ಪಡೆದುಕೊಂಡಿದ್ದರು. ಈ ರೀತಿ ಹಂತ ಹಂತವಾಗಿ ಸುಮಾರು .7ರಿಂದ .8 ಲಕ್ಷಗಳನ್ನು ಪಡೆದುಕೊಂಡಿದ್ದು, ಹಣ ಮರಳಿಸಿರಲಿಲ್ಲ ಎಂದು ಹೇಳಲಾಗಿದೆ.

ವಂಚನೆ ಪ್ರಕರಣ: 'ಸಲಗ' ಸಿನಿಮಾ ನಟಿ ಬಂಧನ

ಹಣ ವಾಪಸ್‌ ಕೊಡದ ಕಾರಣ ಶರವಣನ್‌ ಇಲ್ಲಿನ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲು ಪ್ರಯತ್ನಿಸಿದ್ದರು. ಆದರೆ, ಪೊಲೀಸರು ದೂರು ದಾಖಲು ಮಾಡಿಕೊಂಡಿರಲಿಲ್ಲ. ಹೀಗಾಗಿ, ಅವರು ವಕೀಲರ ಮೂಲಕ ಕೋರ್ಚ್‌ನಲ್ಲಿ ಖಾಸಗಿ ದೂರು ದಾಖಲು ಮಾಡಿದ್ದರು.

ಉಷಾ ಮನೆ ವಿಳಾಸ ಸಿಕ್ಕಿರದ ಕಾರಣ ವಾಟ್ಸ್‌ಆ್ಯಪ್‌ ಮೂಲಕವೇ ನೋಟಿಸ್‌ ನೀಡಲಾಗಿತ್ತು. ಅನಂತರ ಉಷಾ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ನ್ಯಾಯಾಲಯ ಒಂದು ತಿಂಗಳಲ್ಲಿ ಹಾಜರಾಗುವಂತೆ ಸೂಚಿಸಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಈ ಹಿನ್ನೆಲೆ ಕೋರ್ಚ್‌ ಆದೇಶದ ಮೇಲೆ ಶುಕ್ರವಾರ ವಿನೋಬನಗರ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ವಂಚನೆ ಆರೋಪ, ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್ಐಆರ್ ದಾಖಲು

ಬಳಿಕ ನಟಿ ಉಷಾ ಪರವಾಗಿ ವಕೀಲ ಶ್ರೀನಿಧಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು.