Asianet Suvarna News Asianet Suvarna News

ಮಸಾಜ್ ಪಾರ್ಲರ್ ಮೇಲೆ ಸಿಸಿಬಿ ಪೊಲೀಸರ ದಾಳಿ; 44 ಮಹಿಳೆಯರು, 34 ಪುರುಷರು ಪೊಲೀಸರ ವಶಕ್ಕೆ!

ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಒಟ್ಟು 44 ಮಹಿಳೆಯರು, 34 ಪುರುಷರನ್ನು ವಶಕ್ಕೆ ಪಡೆದ ಪೊಲೀಸರು. ನಗರದ ಟಿನ್ ಫ್ಯಾಕ್ಟರಿ ಬಳಿಯಿರುವ ಓಲ್ಡ್ ಮದ್ರಾಸ್ ರಸ್ತೆಯಲ್ಲಿರೋ ನಿರ್ವಾನ ಇಂಟರ್ ನ್ಯಾಷನಲ್ ಸ್ಫಾ ಪ್ರೈಲಿ ನಡೆಯುತ್ತಿದ್ದ ವೇಶ್ಯವಾಟಿಕೆ ದಂಧೆ.

CCB police raids on Spa massage parlour 44 women, 34 men were taken into police custody at bengaluru rav
Author
First Published Jan 7, 2024, 8:00 AM IST

ಬೆಂಗಳೂರು (ಜ.7): ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಒಟ್ಟು 44 ಮಹಿಳೆಯರು, 34 ಪುರುಷರನ್ನು ವಶಕ್ಕೆ ಪಡೆದ ಪೊಲೀಸರು.

ನಗರದ ಟಿನ್ ಫ್ಯಾಕ್ಟರಿ ಬಳಿಯಿರುವ ಓಲ್ಡ್ ಮದ್ರಾಸ್ ರಸ್ತೆಯಲ್ಲಿರೋ ನಿರ್ವಾನ ಇಂಟರ್ ನ್ಯಾಷನಲ್ ಸ್ಫಾ ಪ್ರೈಲಿ ಹೆಸರಲ್ಲಿ ವೇಶ್ಯವಾಟಿಕೆ ದಂಧೆ. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿ ಧರ್ಮೇಂದ್ರ ನೇತೃತ್ವದ ತಂಡದಿಂದ ನಡೆದಿರುವ ದಾಳಿ. ಸುಮಾರು ಹತ್ತು ಅಧಿಕಾರಿಗಳಿಂದ ಸ್ಪಾ ಮೇಲೆ ದಾಳಿ ನಡೆಸಿದ್ದರು. 

ಮಸಾಜ್ ಪಾರ್ಲರ್, ಸ್ಪಾ ಹೆಸರಲ್ಲಿ ವೇಶ್ಯವಾಟಿಕೆ ದಂಧೆ; ಹೊರರಾಜ್ಯಗಳಿಂದ ಉದ್ಯೋಗಕ್ಕೆ ಬರೋ ಹುಡುಗಿಯರೇ ಇವನ ಟಾರ್ಗೆಟ್!

ಹೊರರಾಜ್ಯದಿಂದ ಬಂದು ಬೆಂಗಳೂರಲ್ಲಿ ವೇಶ್ಯೆವಾಟಿಕೆ!

ಬಹುಮಹಡಿ‌ ಕಟ್ಟಡದ 1 ಮತ್ತು 6 ಪ್ಲೋರ್ ನಲ್ಲಿ ನಡೆಯುತ್ತಿದ್ದ ಸ್ಪಾ. ಹೊರರಾಜ್ಯದಿಂದ ಬಂದು ನಗರದಲ್ಲಿ ಮಾಂಸದಂಧೆ ನಡೆಸುತ್ತಿದ್ದ ಅನಿಲ್. ಸದ್ಯ ಅನಿಲ್ ನನ್ನ ಬಂಧಿಸಿ ವಿಚಾರಣೆ ನಡೆಸುತ್ತಿರೋ ಸಿಸಿಬಿ ಅಧಿಕಾರಿಗಳು.

ವೇಶ್ಯಾವಾಟಿಕೆ ದಂಧೆ; ರೆಡ್‌ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಿರುತೆರೆ ನಟಿ ಆರತಿ

ಬಾಡಿ ಟು ಬಾಡಿ ಮಸಾಜ್: 

ಹೊರರಾಜ್ಯ ಹೊರದೇಶದ ಮಹಿಳೆಯರನ್ನು ನಗರಕ್ಕೆ ಕರೆಯಿಸಿಕೊಂಡು ದಂಧೆ ನಡೆಸುತ್ತಿದ್ದ ಅನಿಲ್. ಸ್ಪಾ ಹೆಸರಲ್ಲಿ ಕಾನೂ‌ನು ಬಾಹಿರವಾಗಿ ಬಾಡಿ ಟು ಬಾಡಿ ಮಸಾಜ್ ಸೇರಿದಂತೆ ವಿವಿಧ ಮಾದರಿಯ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆಸಾಮಿ. ಒಟ್ಟು 34 ರೂಂಗಳನ್ನ ಒಳಗೊಂಡ ಬಹು ಅಂತಸ್ಥಿನ ಕಟ್ಟಡದಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು. ದಾಳಿ ವೇಳೆ ಒಟ್ಟು ದಾಳಿ ವೇಳೆ ಒಟ್ಟು 44 ಮಹಿಳೆಯರು, 34 ಪುರುಷರು ಪತ್ತೆಯಾಗಿದ್ದಾರೆ. ಎಲ್ಲರನ್ನೂ ವಶಕ್ಕೆ ಪಡೆದುಕೊಂಡ ಪೊಲೀಸರು. ಸ್ಪಾ ಮಾಲೀಕ ಅನಿಲ್ ಗೆ ಸೇರಿದ ಮೂರವರೆ ಕೋಟಿ ಮೌಲ್ಯದ ಮರ್ಸಿಡೀಸ್ ಬೆನ್ಜ್ ಮೇ ಬ್ಯಾಕ್ ಕಾರು ಸೀಜ್ ಮಾಡಿದ ಪೊಲೀಸರು. ಸದ್ಯ ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ವಿಚಾರಣೆ ಮುಂದುವರಿದಿದೆ. 

Latest Videos
Follow Us:
Download App:
  • android
  • ios