Asianet Suvarna News Asianet Suvarna News

ಮಸಾಜ್ ಪಾರ್ಲರ್, ಸ್ಪಾ ಹೆಸರಲ್ಲಿ ವೇಶ್ಯವಾಟಿಕೆ ದಂಧೆ; ಹೊರರಾಜ್ಯಗಳಿಂದ ಉದ್ಯೋಗಕ್ಕೆ ಬರೋ ಹುಡುಗಿಯರೇ ಇವನ ಟಾರ್ಗೆಟ್!

ಮಸಾಜ್ ಪಾರ್ಲರ್, ಸ್ಪಾಗಳ ಹೆಸರಲ್ಲಿ ಬಾಡಿಗೆ ಮನೆಗಳಲ್ಲಿ ವೇಷ್ಯವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಿಂದೆ ಆರು ಬಾರಿ ಜೈಲು ಪಾಲಾಗಿದ್ದರೂ ಜೈಲಿನಿಂದ ಹೊರಬಂದು ದಂಧೆ ಮುಂದುವರಿಸಿದ್ದ ಆರೋಪಿ. ಇದೀಗ ಗೂಂಡಾ ಕಾಯ್ದೆಯಡಿ ಜೈಲಿಗೆ ದಬ್ಬಿದ ಸಿಸಿಬಿ ಪೊಲೀಸರು

CCB police arrested the accused of prostitution at Bengaluru rav
Author
First Published Dec 22, 2023, 8:23 PM IST

ಬೆಂಗಳೂರು (ಡಿ.22): ಮಸಾಜ್ ಪಾರ್ಲರ್, ಸ್ಪಾಗಳ ಹೆಸರಲ್ಲಿ ಬಾಡಿಗೆ ಮನೆಗಳಲ್ಲಿ ವೇಷ್ಯವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ ಅಲಿಯಾಸ್ ಸಂಜು ಬಂಧಿತ ಆರೋಪಿ. ಹೊರರಾಜ್ಯಗಳಿಂದ ಬರುವ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ. ಯುವತಿಯರಿಗೆ ಉದ್ಯೋಗ, ಹಣದ ಆಮಿಷೊಡ್ಡಿ ಮಾನವ ಕಳ್ಳಸಾಗಾಣಿಕೆ ಮೂಲಕ ದಂಧೆ ನಡೆಸುತ್ತಿದ್ದ ಆರೋಪಿ.

ಶಿವಮೊಗ್ಗದಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ: ಬೆಂಗಳೂರು, ಮೈಸೂರಿನಿಂದ ಬರ್ತಿದ್ದ ಕಾಲ್‌ಗರ್ಲ್ಸ್!

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ವೇಶ್ಯೆವಾಟಿಕೆ ದಂಧೆ ನಡೆಸಿರುವ ಆರೋಪಿ. ಮಡಿವಾಳ, ಪುಟ್ಟೇನಹಳ್ಳಿ, ಮೈಕೋ ಲೇಔಟ್, ಎಸ್ ಜಿ ಪಾಳ್ಯ,  ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ದಂಧೆ. ಈ ಹಿಂದೆ ಇದೇ ಕಾರಣಕ್ಕೆ ಆರು ಬಾರಿ ಜೈಲು ಸೇರಿದ್ರೂ ಹೊರಬಂದು ಹಳೇ ಚಾಳಿ ಮುಂದುವರಿಸಿದ್ದ ಆರೋಪಿ. ಪದೇಪದೆ ವೇಶ್ಯವಾಟಿಕೆ ನಡೆಸಿರುವ ಹಿನ್ನೆಲೆ ಇದೀಗ ಗೂಂಡಾ ಆ್ಯಕ್ಟ್ ಅಡಿ ಆರೋಪಿಯನ್ನ ಬಂಧಿಸಿದ ಸಿಸಿಬಿ ಪೊಲೀಸರು. ಜಾಮೀನು ಸಿಗದಂತೆ ಜೈಲು ಫಿಕ್ಸ್ ಮಾಡೋದು ಗ್ಯಾರೆಂಟಿ.

ದಿನವೂ 25 ಪುರುಷರೊಂದಿಗೆ ಮಲಗುತ್ತಿದ್ದ ವೇಶ್ಯೆ, ಆ ಕೂಪದಿಂದ ತಪ್ಪಿಸಿಕೊಂಡ ಕಥೆ ಇದು!

Follow Us:
Download App:
  • android
  • ios