ಬೆಂಗಳೂರು [ಜ.04]: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. 

ಬೆಂಗಳೂರಿನ ಸದಾಶಿವನಗರದಲ್ಲಿ ERWAN THAI SPA ಹೆಸರಿನ ಸ್ಪಾ ನಡೆಸುತ್ತಿದ್ದು, ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು  ಮೂರ್ತಿ (46),ಮುಖೇಶ್ ಕುಮಾರ್ ಶರ್ಮಾ (30) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಹೆಸರಿಗೆ ಮಾತ್ರ ಮಸಾಜ್ ಪಾರ್ಲರ್ ಆಗಿದ್ದ ಇಲ್ಲಿ ನಡೆಯುತ್ತಿದ್ದದ್ದು ಮಾತ್ರ ವೇಶ್ಯಾವಾಟಿಕೆಯಾಗಿತ್ತು.  "ಬಾಡಿ ಟು ಬಾಡಿ ಮಸಾಜ್" "ಹ್ಯಾಪಿ ಎಂಡಿಂಗ್"  ಮಸಾಜ್ ಎಂಬ ವಿವಿವಿಧ ರೀತಿಯ ಮಸಾಜ್ ಹೆಸರಿಟ್ಟು ಇಲ್ಲಿ ಈ ದಂಧೆ ನಡೆಸುತ್ತಿದ್ದರು.    

ಸ್ವಂತ ಅಪಾರ್ಟ್‌ಮೆಂಟ್, ಖಾತೆಯಲ್ಲಿ ಲಕ್ಷ ಲಕ್ಷ ಹಣ : ವಿದ್ಯಾರ್ಥಿಗೆ ಇದೆಲ್ಲಾ ಬಂದಿದ್ದೆಲ್ಲಿಂದ?..

ಮಸಾಜ್ ಪಾರ್ಲರ್ ನಲ್ಲಿ 4 ಜನ ಥೈಲ್ಯಾಂಡ್ ಮೂಲದ ಯುವತಿಯರನ್ನು ಹಾಗೂ ಓರ್ವ ಮಿಜೋರಾಂ ಮೂಲದ ಯುವತಿಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಳ್ಳುತ್ತಿದ್ದರು.  ಈ ಬಗ್ಗೆ ಖಚಿತ ಮಾಹಿರಿ ಆಧರಿಸಿ ದಾಳಿ ಮಾಡಿದ ಪೊಲೀಸರು ಐವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. 

ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ತನಿಖೆ ನಡೆಸುತ್ತಿದ್ದಾರೆ.

ಮಸಾಜ್ ಪಾರ್ಲರ್‌ ರೇಡ್: ಸಿಕ್ಕಿಬಿದ್ದ ಸಿಸಿಬಿ ಪೋಲಿಸ್ರು, ಡಿಸಿಪಿ ರಿಯಾಕ್ಷನ್...

ಈ ಹಿಂದೆಯೂ ಕೂಡ ಬೆಂಗಳೂರಿನ ಹಲವೆಡೆ ಮಸಾಜ್ ಪಾರ್ಲರ್ ಗಳ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆಗಳು ನಡೆಯುತ್ತಿದ್ದು, ನೂರಾರು ಯುವತಿಯರು ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದರು.