Asianet Suvarna News Asianet Suvarna News

Bengaluru Crime ಹಫ್ತಾಕ್ಕಾಗಿ ಅವಾಜ್ ಹಾಕಿ ಸಿಸಿಬಿ ಬಲೆಗೆ ಬಿದ್ದ ಕುಳ್ಳ ಪಳನಿ

ಹಫ್ತಾ ವಸೂಲಿಗಾಗಿ ರೌಡಿ ಶೀಟರ್‌ ಒಬ್ಬ ವರ್ತಕನೊಬ್ಬನಿಗೆ ಅವಾಜ್​ ಹಾಕಿ ಸಿಸಿಬಿ ಬಲೆ ಸಿಕ್ಕಿಬಿದ್ದಿದ್ದಾನೆ.

CCB Police Arrests rowdy sheeter for demanding hafta rbj
Author
First Published Sep 14, 2022, 5:21 PM IST

ವರದಿ : ಚೇತನ್‌ ಮಹಾದೇವ, ಏಷ್ಯಾನೆಟ್ ಸುವರ್ಣನ್ಯೂಸ್
 

ಬೆಂಗಳೂರು, (ಸೆಪ್ಟೆಂಬರ್.14) : ಬೇರೆಯವರ ಭಯವೇ ಇವರಿಗೆ ಬಂಡವಾಳ.. ಒಂದು ಬಾರಿ ರೌಡಿ ಪಟ್ಟಿ ಬಿತ್ತು ಅಂದ್ರೆ ಮುಗೀತು ಎದೆಯುಬ್ಬಿಸಿ  ರೋಲ್​ ಕಾಲ್‌ಗೆ ನಿಂತು ಬಿಡ್ತಾರೆ. ಇಲ್ಲೊಬ್ಬ ಪಂಟರ್​ ಎನಿಸಿಕೊಂಡಿರುವ ಆ್ಯಂಟಿ ಸೋಷಿಯಲ್​  ಎಲಿಮೆಂಟ್​ ಕೂಡ ಅಂತಹದ್ದೆ ಕೆಲಸ ಮಾಡಿ ಅಂದರ್​ ಆಗಿದ್ದಾನೆ. 

ಹೌದು..ಬೆಂಗಳೂರಿನ ಕಲಾಸಿ ಪಾಳ್ಯ, ಸಿಟಿ ಮಾರ್ಕೆಟ್,​ ಭಕ್ಷಿ ಗಾರ್ಡನ್​ ಸೇರಿದಂತೆ ಸಿಟಿ ಮಾರ್ಕೇಟ್​ ಒತ್ತಿಗೆ ಇರುವ ಏರಿಯಾಗಳ ರೌಡಿಗಳಿಗೆ ಸಿಟಿ ಮಾರ್ಕೆಟ್‌​ನ ವ್ಯಾಪಾರಿಗಳು ಚಿನ್ನದ ಮೊಟ್ಟೆ ಇಡೋ ಕೊಳಿಗಳಂತೆ .  ಒಂದು ಫೋನ್​ ಕಾಲ್​ ಅಥವಾ ಮಚ್ಚು ಲಾಂಗುಗಳನ್ನ ಅವರಿಗೆ ಪಾರ್ಸಲ್​ ಕಳಿಸಿದ್ರೆ ಸಾಕು  ದುಡ್ಡು ಕಾಲ ಬುಡಕ್ಕೆ ಬಂದು ಬೀಳುತ್ತೆ.

ಬೆಂಗಳೂರಿನಲ್ಲಿ ಹೆಚ್ಚಾಗಿದೆ RX ಬೈಕ್ ಕಳ್ಳತನ: ಕಳ್ಳರಿಗೂ ಇಷ್ಟವಾಯ್ತು ಆರ್‌ ಎಕ್ಸ್ ಕ್ರೇಜ್!

ಈಗಾಗಲೆ ಪುಡಿ ರೌಡಿಗಳಿಂದ ಹಿಡಿದು ದೊಡ್ಡ ಮಟ್ಟಿಗಿನ ಪಂಟರ್​ಗಳ ಹಾವಳಿಗೆ  ಅಲ್ಲಿನ ವರ್ತಕರು ,ವ್ಯಾಪಾರಿಗಳು ಹೈರಾಣಾಗಿದ್ದಾರೆ. ಇದೀಗ ಮತ್ತೊಬ್ಬ ಕ್ರಿಮಿನಲ್​ ಈಗ ವರ್ತಕನೊಬ್ಬನಿಗೆ ಅವಾಜ್​ ಹಾಕಿ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ. 

ಸೆಕ್ಯೂರಿಟಿ ಮನಿ ನೆಪದಲ್ಲಿ ಹಫ್ತಾ ವಸೂಲಿ...!
ಭಾರತದ  ಮೊದಲ ಮಾಫಿಯಾ ಡಾನ್​ ಹಾಜಿ ಮಸ್ತಾನ್‌ನಿಂದ ಹಿಡಿದು ಈಗಿನ ಪುಡಿ ರೌಡಿಗಳ ಕಾಲಘಟ್ಟದವರೆಗು ಕಾಮನ್​ ಆಗಿರುವ  ಒಂದೇ ದಂಧೆ ಅಂದ್ರೆ ಅದು  ಹಫ್ತಾ.. ಅದನ್ನ ಅವರು ಸಮರ್ಥಿಸಿಕೊಳ್ಳುವುದು ಸೆಕ್ಯೂರಿಟಿ ಮನಿ ಎಂದು. ನಿಮಗೆ ಭದ್ರತೆ ಕೊಡುತ್ತೇವೆ ಇಂತಿಷ್ಟು ಹಣ ನೀಡ್ಬೇಕು ಎಂಬುದು ಇದರ ಕಾನ್ಸೆಪ್ಟ್​. ಇಲ್ಲಿ ಕೂಡ ಪಳನಿ ಅಲಿಯಾಸ್ ಕುಳ್ಳ ಪಳನಿ ಎಂಬಾತ ಮಾಡ್ತಿದ್ದಿದ್ದು ಅದೇ ಕೆಲಸ.

ಒಂದು ಬಾರಿ ರೌಡಿ ಪಟ್ಟ ಕಟ್ಟಿಕೊಮಡ ಮೇಲೆ ಅದನ್ನ ಹಣವನ್ನಾಗಿ ಕನ್ವರ್ಟ್​ ಮಾಡಿಕೊಳ್ಳು ರೌಡಿಗಳ ರೀತಿ ಪಳನಿ ಕೂಡ ಸಿಟಿ ಮಾರ್ಕೆಟ್‌ನಲ್ಲಿರುವ ವರ್ತನಕನ ಹಿಂದೆ ಬಿದ್ದಿದ್ದ. ಮೊದಲು ಐದು ಲಕ್ಷ ಕೇಳಿದ್ದನಂತೆ  ನಂತರ ಮಾತಾಡಿ ಮೂರು ಲಕ್ಷಕ್ಕೆ ಸೆಟಲ್ ಮಾಡು ಎಂದು ವರ್ತಕನಿಗೆ ಬೆದರಿಕೆ ಹಾಕಿದ್ದಾನೆ. ಆ ಆಡಿಯೋದಲ್ಲಿ ವರ್ತಕ  ತನ್ನ ಬಳಿ ದುಡ್ಡಿಲ್ಲ ಲಾಸ್‌ನಲ್ಲಿ ಅಂಗಡಿ ನಡೀತಿದೆ ಅಂದ್ರೂ ಬಿಡದೆ  ಧಮ್ಕಿ ಹಾಕುತ್ತಿದ್ದ. 

ನೀನು ದೂರು ಕೊಟ್ಟರೆ ಒಂದು ಕೇಸ್​ ಅಷ್ಟೆ.  ದುಡ್ಡು ಕೊಡದಿದ್ದರೆ ಹುಡುಗರನ್ನ ಕಳಿಸಿ ಚುಚ್ಚಿಸೋದಾಗಿ ಪ್ರಾಣ ಬೆದರಿಕೆ ಹಾಕಿದ್ದ . ಇನ್ನು ಈ ಬಗ್ಗೆ ವರ್ತಕ ಸಿಸಿಬಿ ಪೊಲೀಸರ ಮೊರೆ ಹೋಗಿದ್ದಾನೆ. ಬಳಿಕ ವರ್ತಕನ ಮಾಹಿತಿಯ ಮೇಲೆ ಪಳನಿ@ ಕುಳ್ಳನನ್ನ ಅವನ ಲಾಂಗ್​ ಸಮೇತ ಹಿಡಿದು ತಂದಿದ್ದಾರೆ 

 ಇವನೊಬ್ಬ ಕ್ರಿಮಿ ಅಷ್ಟೇ ಇಂತಹ ಬಹಳಷ್ಟು ಕ್ರಿಮಿನಲ್‌ಗಳು ಜನರನ್ನ ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಲೇ ಇದ್ದಾರೆ. ಅಂತಹವರನ್ನೂ ಕೂಡ ಪೊಲೀಸರು ಬಂಧಿಸಿ ಜನರಿಗೆ ನೆಮ್ಮದಿ ನೀಡಬೇಕಿದೆ.

Follow Us:
Download App:
  • android
  • ios