ಅರಣ್ಯ ಇಲಾಖೆ ವಿರುದ್ಧ ಲೋಕಾಯುಕ್ತಕ್ಕೆ ದೂರು, ನವಿಲು ಗರಿ ಇದ್ದರೂ ಅಪರಾಧ, ನಿದ್ದೆಯಲ್ಲಿದ್ದ ಅಧಿಕಾರಿಗಳು
ಹುಲಿ ಉಗುರು ಧರಿಸಿ ಪ್ರಕರಣದಲ್ಲಿ ವರ್ತೂರು ಸಂತೋಷ್ ಬಂಧನ ಪ್ರಕರಣ ಬೆನ್ನಲ್ಲೇ ಅರಣ್ಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲು ಮಾಡಲಾಗಿದೆ.
ಬೆಂಗಳೂರು (ಅ.27): ಹುಲಿ ಉಗುರು ಧರಿಸಿ ಪ್ರಕರಣದಲ್ಲಿ ವರ್ತೂರು ಸಂತೋಷ್ ಬಂಧನ ಪ್ರಕರಣ ಬೆನ್ನಲ್ಲೇ ಅರಣ್ಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲು ಮಾಡಲಾಗಿದೆ. ವಕೀಲ ಉಮೇಶ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಸಿಸಿಎಫ್ , ಅಂಡ್ ಡಿಸಿಎಫ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಅರಣ್ಯ ಅಧಿಕಾರಿಗಳ ವಿರುದ್ಧ ದೂರು ನೀಡಿದ ಬಳಿಕ ವಕೀಲ ಉಮೇಶ್ ಸ್ಪಷ್ಟನೆ ಕೊಟ್ಟಿದ್ದು, ಹುಲಿ ಉಗುರು, ನವಿಲು ಗರಿ, ಹುಲಿ ಚರ್ಮ ಸುದ್ದಿಯಾಗುತ್ತಿದೆ. ದರ್ಗಾದಲ್ಲಿ ನವಿಲು ಗರಿ ಇರುತ್ತವೆ. ಮಠಗಳಲ್ಲೂ ಇರುತ್ತವೆ.
ನಿಮ್ಮ ಮನೆಯಲ್ಲಿ ವನ್ಯಜೀವಿ ವಸ್ತುಗಳಿದ್ದರೆ ಇಲಾಖೆಗೆ ಮರಳಿಸಲು 2 ತಿಂಗಳ ಕಾಲಾವಕಾಶ
1972 ರಲ್ಲಿ ವನ್ಯಜೀವಿ ಕಾಯ್ದೆ ಜಾರಿ ಆದ್ಮೇಲೆ ಇಲ್ಲಿಯ ತನಕ ಅರಣ್ಯ ಇಲಾಖೆ ಅವರು ಏನು ಮಾಡ್ತಾ ಇದ್ದರು. 2003 ರಿಂದ 2006ರ ತನಕ ಮನೆಯಲ್ಲಿರೋ ಹುಲಿ ಉಗುರು ನವಿಲುಗರಿ ಸೇರಿದಂತೆ ಬೇರೆ ಬೇರೆ ವಸ್ತುಗಳು ರಿಟರ್ನ್ ಮಾಡೋದಕ್ಕೆ ಅರಣ್ಯ ಇಲಾಖೆ ಅವಕಾಶ ಮಾಡಿಕೊಟ್ಟಿತ್ತು. ಅದಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದರು.
ಹುಲಿ ಉಗುರು ಧರಿಸಿ ಶೋಕಿ ತೋರಿದ ಇಬ್ಬರು ಅರಣ್ಯಾಧಿಕಾರಿಗಳು ಸಸ್ಪೆಂಡ್
ಇವತ್ತು ಬಡವರನ್ನು ಹಿಡಿದುಕೊಂಡು ಹೋಗಿ ಒಳಗಡೆ ಹಾಕುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ. ಸೆಲಬ್ರೆಟಿಗಳನ್ನು ಬಿಟ್ಟು ರೈತನ ಮಗನನ್ನು ಜೈಲಿಗೆ ಕಳಿಸಿದ್ದಾರೆ. ಡಿಸಿಎಫ್ , ಸಿಎಫ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಅರಣ್ಯ ಇಲಾಖೆ ಅಧಿಕಾರಿಗಳೇ ಹುಲಿ ಉಗುರು ಧರಿಸಿದ್ದಾರೆ ಅಂತವರ ವಿರುದ್ಧ ಕ್ರಮ ಆಗಿಲ್ಲ. ಮೊದಲು ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕೆಂದು ವಕೀಲ ಉಮೇಶ್ ಆಗ್ರಹಿಸಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಹೈಕೋರ್ಟ್ ಗೆ ಹೋಗುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.