ಉಡುಪಿ(ಜ. 01)  ಮಂಗಳೂರಿನ ಕೇಬಲ್ ವಾಹಿನಿ ಮುಖ್ಯಸ್ಥರೊಬ್ಬರು ಅಸಹಜ ಸಾವು ಕಂಡಿದ್ದಾರೆ.  ಎನ್ಎಂಸಿ ಕೇಬಲ್ ಚಾನೆಲ್ ಮಾಲೀಕ ರೋಹಿತ್ ರಾಜ್ (52) ಅನುಮಾನಾಸ್ಪದ ಸಾವಿಗೀಡಾಗಿದ್ದಾರೆ.

ಉಡುಪಿಯ ಮಣಿಪಾಲದ ಅಪಾರ್ಟ್ ಮೆಂಟಿನಲ್ಲಿ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಉಡುಪಿಯಲ್ಲಿ ನ್ಯೂ ಇಯರ್ ಪಾರ್ಟಿ ಮಾಡಿದ್ದ ರೋಹಿತ್ ಮತ್ತು ಪತ್ನಿ ಪಾರ್ಟಿ ಬಳಿಕ ಅಪಾರ್ಟ್ ಮೆಂಟ್‌ಗೆ ತೆರಳಿದ್ದರು.

ಸನ್ಯಾಸ ಬಿಟ್ಟರೆ ಪೇಜಾವರ ಸ್ವಾಮೀಜಿ ಪ್ರಧಾನಿ ಆಗುತ್ತಿದ್ದರು

ಇಂದು ಬೆಳಗ್ಗೆ ಮಣಿಪಾಲ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಫೊರೆನ್ಸಿಕ್ ತಜ್ಞರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ರೋಹಿತ್ ರಾಜ್ ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ತಲೆ ಹಾಗೂ ಎದೆ ಭಾಗದಲ್ಲಿ ಗಾಯದ ಗುರುತು ಕಂಡುಬಂದಿದೆ. ಮೊದಲ ಬಾರಿಗೆ ಕೇಬಲ್ ಚಾನೆಲ್ ಮಾಡಿದ್ದ ರೋಹಿತ್  ಮೂಲತಃ ಮಂಗಳೂರಿನ ಪಾಂಡೇಶ್ವರ ನಿವಾಸಿ ರೋಹಿತ್ ರಾಜ್ ಸುವರ್ಣ ಎನ್ಎಂಸಿ ಕೇಬಲ್ ನಡೆಸಿಕೊಂಡು ಬರುತ್ತಿದ್ದರು.