‘ಸನ್ಯಾಸ ಬಿಟ್ಟರೆ ಪ್ರಧಾನಿ ಆಗುತ್ತಿದ್ದರು ಪೇಜಾವರ ಶ್ರೀಗಳು’
ನಾಡು ಕಂಡ ಸರ್ವ ಶ್ರೇಷ್ಠ ಸಂತ ಮಹಾನ್ ಯತಿವರ್ಯರಾದ ಪೇಜಾವರ ವಿಶ್ವೇಶ ತೀರ್ಥರು ದೈವಾಧೀನರಾಗಿದ್ದು, ಅವರ ನಿಧನಕ್ಕೆ ನಾಡಿನೆಲ್ಲೆಡೆ ಸಂತಾಪ ವ್ಯಕ್ತವಾಗಿದೆ.
ಕಬುರಗಿ [ಡಿ. 29]: ನಾಡು ಕಂಡ ಶ್ರೇಷ್ಠ ಸಂತ ಮಹಾನ್ ಯತಿವರ್ಯರಾದ ಪೇಜಾವರ ಶ್ರೀಗಳು ತಮ್ಮ89ನೇ ವಯಸ್ಸಿನಲ್ಲಿ ದೈವಾಧೀನರಾಗಿದ್ದು, ನಾಡಿನೆಲ್ಲೆಡೆ ಸಂತಾಪ ವ್ಯಕ್ತವಾಗಿದೆ.
ಕಲಬುರಗಿಯ ಖ್ಯಾತ ಜ್ಯೋತಿಷಿ, ರಾಜಗುರು ದ್ವಾರಕನಾಥ ಅವರು ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಉಡುಪಿಯ ಪೇಜಾವರ ಶ್ರೀಗಳು ಯತಿಶ್ರೇಷ್ಠರಲ್ಲಿ ಒಬ್ಬರು. ದೈವೀ ಸ್ವರೂಪರಾಗಿದ್ದ ಅವರು ಮರಳಿ ನಾಯಾರಣ ಸನ್ನಿಧಿ ಸೇರಿದ್ದಾರೆ. ಇದಕ್ಕೆ ದುಃಖ ಪಡುವುದೇನಿಲ್ಲ ಎಂದು ರಾಜಗುರುಗಳು ಹೇಳಿದರು.
ಪೇಜಾವರ ಶ್ರೀಗಳ ಬಗೆಗಿನ ಕ್ಷಣ ಕ್ಷಣದ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ಸನ್ಯಾಸ ಬಿಟ್ಟು ಅವರು ಒಂದು ವೇಳೆ ರಾಜಕಾರಣಕ್ಕೆ ಹೋಗಿದ್ದರೆ ಪ್ರಧಾನಿ ಹುದ್ದೆಯನ್ನೇ ಏರುತ್ತಿದ್ದರು. ಅಂತಹ ಜನಸ್ಪಂದನಾ ವ್ಯಕ್ತಿತ್ವ ಶ್ರೀಗಳದ್ದಾಗಿತ್ತು.
ಪೇಜಾವರ ಶ್ರೀಗಳ ಬಗೆಗಿನ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮನುಷ್ಯ ನೋವಿಗೆ ಜಾತಿಯನ್ನೂ ದೂರ ಇಟ್ಟು ಸ್ಪಂದಿಸುತ್ತಿದ್ದ ಮಹಾನ್ ಹೃದಯವಂತ ಪೇಜಾವರ ಶ್ರೀಗಳದ್ದಾಗಿದ್ದು, ಮತ್ತೆ ನಿಮ್ಮ ಚೇತನ ಭಾರತದಲ್ಲಿ ಮೂಡಲಿ ಎಂದಿದ್ದಾರೆ.
ಇಹಲೋಕದಿಂದ ಅವರು ದೂರಾಗಿದ್ದರೂ ಅವರ ಸ್ಮರಣೆ ಯಾವತ್ತಿಗೂ ಇರಲಿದೆ. ಅವರ ಆಶೀರ್ವಾದ ಭಾರತ, ಕರ್ನಾಟಕ ಸಾಮ್ರಾಜ್ಯದ ಮೇಲೆ ಸದಾ ಇರಲಿದೆ ಎಂದು ರಾಜಗುರು ಹೇಳಿದರು.