Robbery: ದೊಡ್ಡಧಿಕಾರಿ ಮನೆ ಮಹಿಳೆಯರ ಸೀರಿಯಲ್ ಹುಚ್ಚು, ದರೋಡೆ ನಡೆದಿದ್ದು ಗೊತ್ತೆ ಆಗಲಿಲ್ಲ!
* ದೊಡ್ಡ ಅಧಿಕಾರಿ ಪತ್ನಿಗೆ ಧಾರಾವಾಹಿ ಹುಚ್ಚು
* ಸೀರಿಯಲ್ ನೋಡುತ್ತಿದ್ದಾಗಲೇ ಕಳ್ಳತನ
* ಚಿನ್ನಾಭರಣ ದೋಚಿದ ನಾಲ್ವರ ತಂಡ
* ಮನೆಯಲ್ಲಿ ದರೋಡೆ ನಡೆಯುತ್ತಿರುವುದು ಗೊತ್ತೆ ಆಗಲಿಲ್ಲ
ಚೆನ್ನೈ (ಡಿ. 26) ಹೆಂಗಳೆಯರ ಸೀರಿಯಲ್ ಹುಚ್ಚನ್ನು ಗಂಗಾವತಿ ಪ್ರಾಣೇಶ್ ಭಿನ್ನ-ವಿಭಿನ್ನವಾಗಿ ವರ್ಣಿಸುತ್ತಾರೆ, ಧಾರಾವಾಹಿ ನೋಡಲು ಕೂತರೆ ಪ್ರಪಂಚವೇ ಮುಳುಗಿ ಹೋದರೂ ಗೊತ್ತಾಗುವುದಿಲ್ಲ.. ಧಾರಾವಾಹಿಯನ್ನು ನೋಡಿ ಕಣ್ಣೀರು ಹಾಕುತ್ತಾರೆ.. ಗೆಳತಿಯರಿಗೆ ಕರೆ ಮಾಡಿ ಧಾರಾವಾಹಿ ಕತೆ ಹೇಳುತ್ತಾರೆ.. ಗಂಟೆಗಟ್ಟಲೆ ಧಾರಾವಾಹಿ ಬಗ್ಗೆಯೇ ಮಾತನಾಡುತ್ತಾರೆ... ಪ್ರಾಣೇಶ್ ಮಾತಿನ ಕರಾಮತ್ತು ಅಂಥದ್ದು..
ಈಗ ನಿಮ್ಮ ಮುಂದೆ ಅಂಥದ್ದೇ ಒಂದು ಕತೆ ಹೇಳಬೇಕಾಗಿದೆ. ತಮಿಳುನಾಡಿನ (Tamil Nadu) ಕಾಂಚೀಪುರಂನಲ್ಲಿ ಮನೆಯೊಂದನ್ನು ದರೋಡೆ (Robbery) ಮಾಡಲಾಗಿದೆ. ಕಳ್ಳರು ದರೋಡೆ ಮಾಡುತ್ತಿರುವಾಗ ಇಬ್ಬರು ಮಹಿಳೆಯರು (Woman) ಸೀರಿಯಲ್ (TV serial) ನೋಡುತ್ತಲೇ ಇದ್ದರು! ನಾಲ್ವರು ಕಳ್ಳರ ತಂಡ ಮನೆಯನ್ನು ದರೋಡೆ ಮಾಡಿದ್ದು ಸುಮಾರು 19 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು (Gold Jewellery)ದೋಚಿ ಪರಾರಿಯಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಇದೀಗ ಕಾರ್ಯಾಚರಣೆ ಆರಂಭಿಸಿದ್ದಾರೆ.
Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ ನಮಸ್ಕಾರ ಮಾಡಿಕೊಂಡ! ವಿಡಿಯೋ
ವೃತ್ತಿಯಲ್ಲಿ ಆಡಿಟರ್ ಆಗಿರುವ ಮೇಗನಾಥನ್ ಅವರ ಮನೆ ದರೋಡೆಯಾಗಿದೆ. ಅವರ ಸಹೋದರ ಸರ್ಕಾರಿ ನೌಕರ. ಗುರುವಾರ ರಾತ್ರಿ ಕಳ್ಳತನವಾಗಿದೆ. ಕಳ್ಳತನ ನಡೆಯುವ ವೇಳೆ ಮೇಘನಾಥನ್ ಅವರ ಪತ್ನಿ ತನ್ನ ಸೋದರ ಸಂಬಂಧಿಯೊಂದಿಗೆ ಸೀರಿಯಲ್ ನೋಡುತ್ತಿದ್ದರು!
ಮನೆಯ ಬಾಗಿಲಿನ ಕಡೆ ಗಮನ ಕೊಡದೇ ಟಿವಿ ಸೌಂಡ್ ಜಾಸ್ತಿ ಇಟ್ಟುಕೊಂಡು ಧಾರಾವಾಹಿ ನೋಡುವುದರಲ್ಲಿ ತಲ್ಲೀನವಾಗಿದ್ದರು. ಈ ಗ್ಯಾಪ್ ನಲ್ಲಿ ಮಾಸ್ಕ್ ಧರಿಸಿ ಬಂದ ತಂಡ ಮನೆಯಲ್ಲಿನ ಆಭರಣ ದೋಚಿದೆ. 50 ಸವರಿನ್ ಚಿನ್ನಾಭರರಣ ಕಳ್ಳರ ಪಾಲಾಗಿದೆ.
ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆರೋಪಿಗಳು ದ್ವಿಚಕ್ರವಾಹನದಲ್ಲಿ ಮನೆಗೆ ಬಂದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಗೇಟ್‌ನ ಹೊರಗೆ ಇಬ್ಬರು ಕಾವಲು ನಿಂತಿದ್ದರೆ, ಇನ್ನಿಬ್ಬರು ಒಳಗೆ ನುಗ್ಗಿ ದರೋಡೆ ನಡೆಸಿದ್ದಾರೆ.
ಹಣ ತುಂಬುವ ಯಂತ್ರ ದೋಚಿದರು: ಉತ್ತರ ಪ್ರದೇಶದ ಆಗ್ರಾದ ಖೇರಿಯಾ ಗ್ರಾಮದಲ್ಲಿ ಹಣ ತುಂಬುವ ಟೆಲ್ಲರ್ ಮಶಿನ್ ಕಳ್ಳತನವಾಗಿದೆ. 8 ಲಕ್ಷ ರೂ. ಅದರ ಒಳಗಡೆ ಇತ್ತು. ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಹೆಂಗಳೆಯರ ಚೋರ ತಂಡ: ಬಟ್ಟೆ ಹಾಗೂ ಸೌಂದರ್ಯ ವರ್ಧಕ ವಸ್ತುಗಳ ಮಾರಾಟ (Sale) ಮಾಡುತ್ತಿದ್ದ ಮಹಿಳೆಯೊಬ್ಬರ ಮನೆಗೆ (House) ಸಂಘಟನೆಯೊಂದರ ಸದಸ್ಯರು ಎಂದು ಹೇಳಿಕೊಂಡು ನುಗ್ಗಿ ಜೀವ ಬೆದರಿಕೆ ಹಾಕಿ ಚಿನ್ನಾಭರಣ ದರೋಡೆ (Theft) ಮಾಡಿದ್ದ ಮೂರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಸವೇಶ್ವರ ನಗರ (Basaveshwara Nagar) ಠಾಣೆ ಪೊಲೀಸರು (Police) ಸೆರೆ ಹಿಡಿದಿದ್ದರು. #
ಜ್ಞಾನ ಭಾರತಿಯ ನಿವಾಸಿ ದೀಪಾ, ಅನಿತಾ, ಪೀಣ್ಯದ ವಿಜಯಾ, ನವೀನ್, ಚಂದ್ರಶೇಖರ್, ಮಾಹಾಲಿಂಗಯ್ಯ ಬಂಧಿತರಾಗಿದ್ದು, ಆರೋಪಿಗಳಿಂದ 152 ಗ್ರಾಂ ಚಿನ್ನಾಭರಣ, .63 ಸಾವಿರ ನಗದು ಹಾಗೂ ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿತ್ತು.
ಸೌಂದರ್ಯ ವರ್ಧಕ ವ್ಯಾಪಾರಿ ಜಗದೀಶ್ ಅವರಿಂದ ಸೌಂದರ್ಯ ವರ್ಧಕ ವಸ್ತುಗಳನ್ನು ಸಗಟು ದರದಲ್ಲಿ ಖರದಿಸಿ ಬಳಿಕ ಅಂಜು ಜೆಸ್ವಾನಿ ಅವರು, ತಮ್ಮ ಮನೆಯಲ್ಲಿ ಮಾರಾಟ (Sale) ಮಾಡುತ್ತಿದ್ದರು. ಇದರ ಜತೆಗೆ ಬಟ್ಟೆ ಮಾರಾಟ ಸಹ ಇತ್ತು. ಹಲವು ದಿನಗಳಿಂದ ಅವರಿಗೆ ಕೆಂಗೇರಿಯ ಸುಜಾತಾ ಪರಿಚಯಿವಿತ್ತು. ಈ ಸ್ನೇಹದಲ್ಲಿ ಗೆಳತಿಗೆ ಯಾರಾದರೂ ಕೆಲಸದಾಳು ಇದ್ದರೆ ತಿಳಿಸುವಂತೆ ಅಂಜು ಹೇಳಿದ್ದರು. ಆಗ ಸುಜಾತಾ, ತನ್ನ ಗೆಳತಿ ದೀಪಾ ಎಂಬಾಕೆಯನ್ನು ಕೆಲಸಕ್ಕೆ ಸೇರಿಸುವುದಾಗಿ ತಿಳಿಸಿದ್ದರು. ಆದರೆ ಮನೆಯಲ್ಲಿ ಏಕಾಂಗಿಯಾಗಿ ಅಂಜು ನೆಲೆಸಿರುವ ಬಗ್ಗೆ ಮಾಹಿತಿ ತಿಳಿದ ದೀಪಾ, ಆ ಮನೆಯಲ್ಲಿ ದರೋಡೆಗೆ ತನ್ನ ಸಹಚರರ ಜತೆ ಸೇರಿ ಸಂಚು ರೂಪಿಸಿದ್ದಳು.