Vijayapura: ಅಣ್ಣ-ತಂಗಿಯ ಹೆಣ ಕೆಡವಿದ ಪಾಪಿ ಗಂಡ: ತಲೆ ಮೇಲೆ ಕಲ್ಲು ಎತ್ತಿಹಾಕಿ ಡಬಲ್‌ ಮರ್ಡರ್!

ಗಂಡ ಹೆಂಡತಿ ಜಗಳಕ್ಕೆ ಅಣ್ಣ ತಂಗಿಯ ಹೆಣ ಉರುಳಿದೆ. ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳದಲ್ಲಿ ನಡೆದ ಅಣ್ಣ-ತಂಗಿಯ ಡಬಲ್‌ ಮರ್ಡರ್‌ ಜನರನ್ನ ಬೆಚ್ಚಿ ಬೀಳಿಸಿದೆ. ತಲೆ ಮೇಲೆ ಕಲ್ಲು ಎತ್ತಿಹಾಕಿ ಇಬ್ಬರನ್ನ ಹತ್ಯೆ ಮಾಡಲಾಗಿದೆ.

brother and sister gone murder in vijayapura gvd

ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಜೂ.07): ಗಂಡ ಹೆಂಡತಿ ಜಗಳಕ್ಕೆ ಅಣ್ಣ ತಂಗಿಯ ಹೆಣ ಉರುಳಿದೆ. ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳದಲ್ಲಿ ನಡೆದ ಅಣ್ಣ-ತಂಗಿಯ ಡಬಲ್‌ ಮರ್ಡರ್‌ ಜನರನ್ನ ಬೆಚ್ಚಿ ಬೀಳಿಸಿದೆ. ತಲೆ ಮೇಲೆ ಕಲ್ಲು ಎತ್ತಿಹಾಕಿ ಇಬ್ಬರನ್ನ ಹತ್ಯೆ ಮಾಡಲಾಗಿದ್ದು, ಕ್ರೌರ್ಯಕ್ಕೆ ಸಾರ್ವಜನಿಕರು ಅವಕ್ಕಾಗಿದ್ದಾರೆ ವಿಪರ್ಯಾಸ ಅಂದ್ರೆ ಮಗಳ ಎಲ್.ಸಿ ತೆಗೆದುಕೊಳ್ಳಲು ಅಣ್ಣ ಸಮೇತ ಗಂಡನ ಮನೆಗೆ ಬಂದವಳು ಸಹೋದರನ ಸಮೇತ ಕೊಲೆಯಾಗಿದ್ದಾಳೆ..

ಅಣ್ಣತಂಗಿಯ ಬರ್ಬರ ಹತ್ಯೆ: ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದ ರಸ್ತೆಯಲ್ಲಿ ಅಣ್ಣ ಹಾಗೂ ತಂಗಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಣ್ಣ 32 ವರ್ಷದ ನಾನಾಗೌಡ ಶ್ರೀಮಂತ ಯರಗಲ್‌ ಹಾಗೂ ಆತನ ತಂಗಿ  ರಾಜಶ್ರೀ ಶಂಕರಗೌಡ ಬಿರಾದಾರ (27) ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಡಬಲ್‌ ಮರ್ಡರ್‌ ಸುದ್ದಿ ಕೇಳಿ ಬೆಚ್ಚಿಬಿದ್ದ ಸಿಂದಗಿ ಜನ: ಬೂದಿಹಾಳ ಪಿ ಹೆಚ್‌ ನಿಂದ ಓತಿಹಾಳಕ್ಕೆ ಹೋಗುವ ದಾರಿ ಮಧ್ಯದಲ್ಲಿ ಈ ಭೀಕರ ಹತ್ಯೆ ನಡೆದಿದೆ. ಅಣ್ಣ-ತಂಗಿ ಜೋಡಿ ಕೊಲೆಯಿಂದ ಬೂದಿಹಾಳ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನೊಂದು ಕಡೆಗೆ ಘಟನಾ ಸ್ಥಳದಲ್ಲಿ ಶವಗಳು ಬಿದ್ದ ರೀತಿಯನ್ನ ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ಸ್ವತಃ ಪೊಲೀಸರು ಸಹ ಕೊಲೆ ನಡೆದ ಸ್ಥಳ ಪರಿಶೀಲನೆ ವೇಳೆ ದೃಶ್ಯಗಳನ್ನ ಅವಕ್ಕಾಗಿದ್ದಾರೆ.

Vijayapura: ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ವಿಶೇಷ ಸೈಕಲ್ ಜಾಥಾ!

ಮಗಳ ಎಲ್‌.ಸಿ ಪಡೆಯಲು ಬಂದಾಗ ಇಬ್ಬರ ಹತ್ಯೆ: ಪ್ರಕರಣದ ಹಿನ್ನೆಲೆ ನೋಡುವುದಾದರೇ ಕೊಲೆಯಾದ ಜಯಶ್ರೀ ತನ್ನ ದೇವರನಾವದಗಿಯ ತವರು ಮನೆಯಿಂದ ಅಣ್ಣ ನಾನಾಗೌಡನನ್ನ ಕರೆದುಕೊಂಡು ಗಂಡನ ಮನೆ ಇರುವ ಬೂದಿಹಾಳ ಗ್ರಾಮಕ್ಕೆ ಹೊರಟಿದ್ದಳು. ತನ್ನ ಮಗಳ ಎಲ್‌ ಸಿ ತೆಗೆದುಕೊಂಡು ಬಂದು ತವರು ಊರಲ್ಲೆ ಮಗಳ ಶಿಕ್ಷಣ ಮುಂದುವರೆಸಲು ಪ್ಲಾನ್‌ ಹಾಕಿಕೊಂಡಿದ್ದಳು. ಆದ್ರೆ ಎಲ್‌ ಸಿ ತರೋದಕ್ಕೆ ಬಂದಾಗಲೇ ಜಯಶ್ರೀ ಹಾಗೂ ಆಕೆ ಅಣ್ಣ ನಾನಾಗೌಡನನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಬಿಟ್ಟಿದ್ದಾರೆ..

ಗಂಡನಿಂದಲೇ ಅಣ್ಣ-ತಂಗಿಯ ದಾರುಣ ಹತ್ಯೆ: ಕೊಲೆಗೆ ಜಯಶ್ರೀ ಗಂಡ ಶಂಕರಗೌಡ ಬಿರಾದಾರ್‌ ಕಾರಣ ಎನ್ನಲಾಗ್ತಿದೆ. ಕಳೆದ 5 ವರ್ಷಗಳ ಹಿಂದೆ ಮದುವೆಯಾಗಿತ್ತು. 2 ವರ್ಷಗಳಿಂದ ಗಂಡ ಹೆಂಡತಿ ನಡುವೆ ಸಂಬಂಧ ಸರಿ ಇರಲಿಲ್ಲ. ಕಳೆದ 1 ವರ್ಷಗಳಿಂದ ಜಯಶ್ರೀ ಗಂಡನ ಮನೆ ಬದಲಿಗೆ ದೇವರನಾವದಗಿಯ ತವರು ಮನೆಯಲ್ಲೆ ಉಳಿದುಕೊಂಡಿದ್ದಳು. ಇದ್ರಿಂದ ಗಂಡ-ಹೆಂಡಿರ ನಡುವೆ ಸಂಬಂಧ ತೀರ ಹದಗೆಟ್ಟು ಹೋಗಿತ್ತು.  ನಡೆದಿರುವ ಈ ಕೊಲೆಯ ಹಿಂದೆ ಗಂಡನ ಶಂಕರಗೌಡನೇ ಇರುವ ಅನುಮಾನಗಳು ಪೊಲೀಸರಿಗಿದೆ..

ಹಲವು ಬಾರಿ ನಡೆದಿದ್ದ ನ್ಯಾಯ ಪಂಚಾಯ್ತಿ: ಕ್ಷುಲ್ಲಕ ಕಾರಣಕ್ಕೆ ರಾಜಶ್ರೀ ಹಾಗೂ ಗಂಡ ಶಂಕರಗೌಡ ನಡುವೆ ಜಗಳವಾಗ್ತಿತ್ತು. ಈ ಜಗಳ ಮುಂದುವರೆದು ಇಬ್ಬರ ನಡುವೆಯು ದ್ವೇಷ ಶುರುವಾಗಿತ್ತು. ಕಳೆದ 2 ವರ್ಷಗಳಲ್ಲಿ ಹಲವು ಬಾರಿ ಜಯಶ್ರೀ ತವರು ಮನೆಗೆ ಬಂದಿದ್ದಳು. ಗಂಡನ ಮನೆಯಲ್ಲಿ ಸರಿಯಾಗಿ ನೋಡಿಕೊಳ್ತಿಲ್ಲ ಎಂದು ಪೀರ್ಯಾದಿ ಹೇಳಿಕೊಂಡಿದ್ದಳು. ಬಳಿಕ ದೇವರನಾವದಗಿ ಹಾಗೂ ಬೂದಿಹಾಳ ಗ್ರಾಮದಲ್ಲಿ ಹಿರಿಯರು ನ್ಯಾಯ ಪಂಚಾಯ್ತಿಯನ್ನು ಮಾಡಿದ್ದರು. ಬಳಿಕ ಗಂಡನ ಮನೆಗು ರಾಜಶ್ರೀಯನ್ನ ಕಳುಹಿಸಿಕೊಡಲಾಗಿತ್ತು. ಆದ್ರೆ 2 ದಿನವು ನೆಟ್ಟಗೆ ಇರಲಾಗದೆ ಜಯಶ್ರೀ ತವರಿಗೆ ಪಲಾಯಣ ಮಾಡಿದ್ದಳಂತೆ.. ಹೀಗಾಗಿ ಗಂಡ-ಹೆಂಡಿರ ನಡುವಿನ ಜಗಳ ದ್ವೇಷವಾಗಿ ಪರಿಣಮಿಸಿತ್ತು ಎನ್ನೋದು ಪೊಲೀಸರ ಅನುಮಾನವಾಗಿದೆ..

ಪೊಲೀಸ್‌ ಮಾಹಿತಿಯಲ್ಲಿ ಏನಿದೆ: ಶಂಕರಗೌಡ ತಂದೆ ಅಪ್ಪ ಸಾಹೇಬ್ ಗೌಡ ಬಿರಾದರ್ ಸಾಕಿನ್ ಬೂದಿಹಾಳ್ ಈತನಿಗೆ ಸಿಂದಗಿ ತಾಲೂಕಿನ ದೇವರನಾವದಗಿ ಗ್ರಾಮದ ರಾಜಶ್ರೀ ತಂದೆ ಶ್ರೀಮಂತ ಯರಗಲ್  ಇವಳನ್ನು  ಕೊಟ್ಟು 5  ವರ್ಷಗಳ ಹಿಂದೆ ಮದುವೆ ಮಾಡಿದ್ದು ಇರುತ್ತದೆ. ಇವರಿಗೆ ಎರಡು  .ಮೇಗನಾ ರಾಕೇಶ ಎಂಬ ಎರಡು ಮಕ್ಕಳಿದ್ದು  ಶಂಕರಗೌಡ ಮತ್ತು ರಾಜಶ್ರೀಗೆ ಆಗಾಗ ಜಗಳವಾಗಿದ್ದು, ಈಗ ಒಂದು ವರ್ಷದಿಂದ ರಾಜಶ್ರೀ ಅವಳು ತನ್ನ ತವರು ಮನೆಯಲ್ಲಿ ವಾಸವಾಗಿರುತ್ತಾರೆ. 

ಸಾಕಷ್ಟು ಬಾರಿ ನ್ಯಾಯ ಪಂಚಾಯ್ತಿ ಮಾಡಿ ರಾಜೇಶ್ವರಿಗೆ ಗಂಡನ ಮನೆಗೆ  ಕರೆದುಕೊಂಡು ಬಂದಾಗ ಗಂಡನ  ಮನೆಯಲ್ಲಿ ರಾಜೇಶ್ರೀ ಇವಳಿಗೆ ಗ ಸರಿಯಾಗಿ ನೋಡಿಕೊಳ್ಳದೆ ಇರುವುದರಿಂದ ಅವಳು ಪುನಃ ತನ್ನ ತವರು ಮನೆ  ದೇವರನಾವದಗಿ ಗ್ರಾಮದಲ್ಲಿ  ತಂದೆ-ತಾಯಿಯೊಂದಿಗೆ ವಾಸವಾಗಿದ್ದು ಇರುತ್ತದೆ. ಇಂದು ಮಕ್ಕಳ ವ್ಯಾಸಂಗ ಪ್ರಮಾಣ ಪತ್ರ ತೆಗೆದುಕೊಂಡು ಹೋಗಲು ಬೂದಿಹಾಳ ಪಿ.ಹೇಚ್ ಗ್ರಾಮಕ್ಕೆ ಬರುವಾಗ ಗ್ರಾಮದ ಹತ್ತಿರ ರಾಜೇಶ್ವರಿ ಮತ್ತು ಅವಳ ತಮ್ಮ ನಾನಾಗೌಡನಿಗೆ ಶಂಕರಗೌಡ ಬಿರಾದಾರ ಹಾಗೂ ಇತರರು  ಕೂಡಿಕೊಂಡು ಕೊಲೆ ಮಾಡಿರುವ ಬಗ್ಗೆ ತಿಳಿದಿ ಬಂದಿರುತ್ತದೆ. ಹೀಗೆ ಪೊಲೀಸ್‌ ವರದಿಯಾಗಿದೆ.

Vijayapura ಹೊಲದಲ್ಲಿ ಸ್ವತಃ ನೇಗಿಲು ಹಿಡಿದು ಬಿತ್ತನೆ ಮಾಡಿದ ಮಠಾಧೀಶರು..!

ಪತ್ನಿಯ ಸ್ವಭಾವಕ್ಕೆ ರೊಚ್ಚಿಗೆದ್ದು ಕೊಲೆ ಮಾಡಿಸಿದನಾ ಗಂಡ: ಗಂಡ ಹೆಂಡಿರ ನಡುವೆ ಜಗಳ ಇರೋದು ಕಾಮನ್‌ ಆದ್ರೂ, ಹಿರಿಯರು ಬಗೆ ಹರಿಸಿದಾಗ ಗಂಡ ಹೆಂಡತಿ ಹೊಂದಾಣಿಕೆ ಮಾಡಿಕೊಂಡು ಸಂಸಾರ ಬಂಡಿ ನೂಕಬೇಕು.. ಆದ್ರೆ ಇಲ್ಲಿ ಆಗಿದ್ದೆ ಬೇರೆ, ಹಲವು ಬಾರಿ ಹಿರಿಯರು ನ್ಯಾಯ ಪಂಚಾಯ್ತಿ ಸೇರಿ ತಿಳಿ ಹೇಳಿದ್ರು ರಾಜಶ್ರೀ ಕೇಳಿದ್ದಿಲ್ಲವಂತೆ. ಮೇಲಿಂದ ಮೇಲೆ ತವರು ಮನೆಗೆ ಬಂದು ಕೂರುತ್ತಿದ್ದಳಂತೆ. ಇದರಿಂದ ಗಂಡ ಶಂಕರಗೌಡ ರೊಚ್ಚಿಗೆದ್ದಿದ್ದ ಎನ್ನಲಾಗಿದೆ. ರಾಜಶ್ರೀ ಹೀಗೆ ತವರು ಮನೆಯಲ್ಲಿ ಆಶ್ರಯ ಪಡೆದು ಇರೋದಕ್ಕು ಅವರ ಸಹೋದರರ ಕುಮ್ಮಕ್ಕಿದೆ ಎನ್ನುವ ಭಾವನೆ ಗಂಡನಲ್ಲಿ ಬಂದಿತ್ತು ಎನಿಸುತ್ತಿದೆ. ಹೀಗಾಗಿ ರೊಚ್ಚಿಗೆದ್ದು ಅಣ್ಣ-ತಂಗಿ ಇಬ್ಬರದ್ದು ಹೆಣವಿಟ್ಟಿದ್ದಾನೆ ಎನ್ನಲಾಗ್ತಿದೆ.

ಆರೋಪಿ ಬೆನ್ನಿಗೆ ಬಿದ್ದ ಸಿಂದಗಿ ಪೊಲೀಸರು: ಶ್ರೀದೇವಿ ಹಾಗೂ ಆಕೆ ಅಣ್ಣ ನಾನಾಗೌಡನನ್ನ ಕೊಂದಿರೋದು ಶ್ರೀದೇವಿ ಗಂಡನೆ ಎನ್ನಲಾಗ್ತಿದೆ. ಕೆಲ ಸ್ನೇಹಿತರ ಸಹಾಯ ಪಡೆದು ಇಬ್ಬರನ್ನ ಹೊಡೆದು ಕೊಂದು ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಗುರುತು ಸಿಗದಂತೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಸಿಂದಗಿ ಪೊಲೀಸರು ಜಾಲ ಬೀಸಿದ್ದಾರೆ. ಪಿಎಸೈ ನಿಂಗಪ್ಪ ಪೂಜಾರಿ ನೇತೃತ್ವದ ಒಂದು ಕೊಲೆಗಾರರ ಪತ್ತೆಗೆ ಓಡಾಡುತ್ತಿದೆ.

Latest Videos
Follow Us:
Download App:
  • android
  • ios