Illicit Relationship ಮಹಿಳೆ ಸಾವಿನ ತನಿಖೆ ವೇಳೆ ಅಣ್ಣ-ತಂಗಿಯ ಪಲ್ಲಂಗದಾಟ ಬಯಲು

* ನೀರಿನ ಸಂಪ್ ಗೆ ಬಿದ್ದು ಮಹಿಳೆಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್
* ಅಣ್ಣನ ಜತೆ ಲವ್ವಿ-ಡವ್ವಿಗಾಗಿ ಹೆತ್ತವಳನ್ನೇ ಕೊಂದಳು ಮಗಳು
* ಪೊಲೀಸ್ ತನಿಖೆ ವೇಳೆ ಕೊಲೆ ರಹಸ್ಯ ಬೆಳಕಿಗೆ 
* ಕಳೆದ ಜನವರಿ 30 ರಂದು ಕೊರಟಗೆರೆ ಪಟ್ಟಣದಲ್ಲಿ ಸಾವಿತ್ರಮ್ಮ ಎನ್ನವ ಮಹಿಳೆ ಸಾವನ್ನಪ್ಪಿದ್ದಳು

brother and sister arrested over Kills mother for illicit relationship at Tumakuru rbj

ತುಮಕೂರು, (ಫೆ.18): ಮನ ಮುಂದಿನ ನೀರಿನ ಸಂಪ್ ಗೆ ಬಿದ್ದು ಮಹಿಳೆಯ ಸಾವಿನ ಪ್ರಕರಣಕ್ಕೆ (Death Case) ಟ್ವಿಸ್ಟ್ ಸಿಕ್ಕಿದೆ. 

ಕಳೆದ ಜನವರಿ 30 ರಂದು ತುಮಕೂರು(Tumakuru) ಜಿಲ್ಲೆಯ ರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯ ಸಾವಿತ್ರಮ್ಮ(45) ಸಂಪಿಗೆ ಬಿದ್ದು ಸಾವನ್ನಪ್ಪಿದ್ದರು.ಈ ಪ್ರಕರಣ ದಾಖಲಿಸಿಕೊಂಡಿದ್ದ ಕೊರಟಗೆರೆ ಪೊಲೀಸ್ರು(Police), ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲು ಮಾಡಿದ್ದಾರೆ.

Mysuru Crime: ಸಾಲದ ಕಂತು ಕೇಳಿದ್ದಕ್ಕೆ ತಾಯಿಯನ್ನೇ ಕೊಂದ ಪಾಪಿ ಮಗ

ಹೌದು....ಸಾವಿತ್ರಮ್ಮ ಸಂಪಿಗೆ ಬಿದ್ದು ಸಾವನ್ನಪ್ಪಿಲ್ಲ. ಬದಲಾಗಿ ಅನೈತಿಕ ಸಂಬಂಧಕ್ಕೆ (Illicit Relationship)  ಅಡ್ಡ ಬಂದರೆಂದು ಉಸಿರುಗಟ್ಟಿಸಿ ಸಾವಿತ್ರಮ್ಮ ಅವರನ್ನು ಕೊಲೆ ಮಾಡಿ ಸಂಪಿಗೆ ಹಾಕಿದ್ದಾರೆ ಎಂದು ಪೊಲೀಸರ ತನಿಖೆ ವೇಳೆ ಬಟಾಬಯಲಾಗಿದೆ.

ಅಣ್ಣನ ಜತೆ ಲವ್ವಿ-ಡವ್ವಿಗಾಗಿ ಹೆತ್ತವಳನ್ನೇ ಕೊಂದಳು
ಅನೈತಿಕ ಸಂಬಂಧಕ್ಕಾಗಿ (Illicit relationship) ಅಣ್ಣನ ಜೊತೆ ಸೇರಿ ತಾಯಿಯನ್ನೇ(ಸಾವಿತ್ರಮ್ಮ) ಮಗಳು ಕೊಂದಿದ್ದಾಳೆ. ಈ ಸಂಬಂಧ ಪುನೀತ್ (26) ಮತ್ತು ಶೈಲಜಾ (21) ಬಂಧಿತ ಅಣ್ಣ-ತಂಗಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

ಕಳೆದ ಜನವರಿ 30 ರಂದು ಕೊರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯ ಸಾವಿತ್ರಮ್ಮ(45) (mother) ಸಂಪಿಗೆ ಬಿದ್ದು ಸಾವನ್ನಪ್ಪಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೊರಟಗೆರೆ ಪೊಲೀಸರು ಪ್ರೀತಿಗೆ ಅಡ್ಡ ಬಂದರೆಂದು ಉಸಿರುಗಟ್ಟಿಸಿ ಸಾವಿತ್ರಮ್ಮ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಶೈಲಜಾ ಹಾಗೂ ಪುನೀತ್ ಇಬ್ಬರು ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳು. ಸಂಬಂಧದಲ್ಲಿ ಶೈಲಜಾಗೆ ಪುನೀತ್ ಅಣ್ಣನಾಗಿದ್ದಾನೆ. ಹೊರಜಗತ್ತಿಗೆ ಇಬ್ಬರೂ ಅಣ್ಣ ತಂಗಿಯಂತೆ (Brother And Sister) ಇದ್ದರು. ಆದ್ರೆ, ಮನೆಯೊಳಗೆ ಇಬ್ಬರೂ  ಲವ್ವಿ-ಡವ್ವಿಯಲ್ಲಿ ತೊಡಗುತ್ತಿದ್ದರು. ಇಬ್ಬರ ಈ ಪಲ್ಲಂಗದಾಟ ಶೈಲಜಾ ತಾಯಿ ಸಾವಿತ್ರಮ್ಮಗೆ ಗೊತ್ತಾಗಿದೆ. ಇದಕ್ಕೆ ಬ್ರೇಕ್ ಹಾಕಿ ಪುನೀತ್ ಹಾಗೂ ಶೈಲಜಾಗೆ ಸಾವಿತ್ರಮ್ಮ ಹಾಗೂ ಪುನೀತ್ ತಾಯಿ ಬುದ್ಧಿ ಹೇಳಿದ್ದರು.

ಇದರಿಂದ ಕುಪಿತಗೊಂಡಿದ್ದ ಪುನೀತ್ ಮತ್ತು ಶೈಲಜಾ,  ತಮ್ಮ ಲವ್ವಿ-ಡವ್ವಿಗೆ ಅಡ್ಡಿಯಾಗಿದ್ದಾಳೆಂದು ಸಾವಿತ್ರಮ್ಮನನ್ನ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ಬಳಿಕ, ಸಾವಿತ್ರಮ್ಮ ಕಾಲು ಜಾರಿ ಸಂಪ್ ಗೆ ಬಿದ್ದು ಸಾವನ್ನಪ್ಪಿರೋದಾಗಿ ಬಿಂಬಿಸಿದ್ದರು. 

ಸಾವಿನ ಘಟನೆಯ ಬಳಿಕ ಪುನೀತ್ ಹಾಗೂ ಶೈಲಜಾ ಅವರ ನಡೆ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಕೂಡಲೇ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. 

ಅಶ್ಲೀಲ ಫೋಟೋ, ವಿಡಿಯೋ ಕಳಿಸಿ ಮಹಿಳೆಯರಿಗೆ ಕಾಟ
ಬೆಂಗಳೂರು: ಮಹಿಳೆಯರಿಗೆ ಅಶ್ಲೀಲ ಫೋಟೋ, ವಿಡಿಯೋ ಕಳಿಸಿ ಕಾಟ ಕೊಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಕೆ.ಎನ್.ಹರೀಶ್(26) ಬಂಧಿತ ಆರೋಪಿ‌.

ಈತ ಫೇಸ್ ಬುಕ್ ಮೆಸೆಂಜರ್, ವಾಟ್ಸ್ ಆ್ಯಪ್ನಲ್ಲಿ ಅಶ್ಲೀಲ ವಿಡಿಯೋ ಕಳಿಸಿ ಮಹಿಳೆಯರಿಗೆ ಕಾಟ ಕೊಡ್ತಿದ್ದ. ವಿಡಿಯೋ ಕಳಿಸಿ ಪದೇ ಪದೇ ವಿಡಿಯೋ ಕಾಲ್ ಮಾಡುತ್ತಿದ್ದ. ತನಿಖೆ ವೇಳೆ 10 ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಕಾಟ ಕೊಟ್ಟಿರೋದು ಬೆಳಕಿಗೆ ಬಂದಿದೆ. ತನ್ನ ಪತ್ನಿಗೆ ಇದೇ ರೀತಿ ಕಾಟ ಕೊಡಲಾಗುತ್ತಿದೆ ಎಂದು ಪತಿಯೊಬ್ಬರು ದೂರು ನೀಡಿದ್ರು. ಆ ದೂರಿನ ಆಧಾರದ ಮೇಲೆ ಆರೋಪಿಯನ್ನು ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ತಾಯಿಯನ್ನೇ ಕೊಂದ ಪಾಪಿ ಮಗ
ಮೈಸೂರು(ಫೆ.18):  ಸಂಘದಲ್ಲಿ ಸಾಲ(Loan) ತೆಗೆದುಕೊಂಡು ಮಗನಿಗೆ ವ್ಯಾನ್‌ ತೆಗೆದುಕೊಟ್ಟ ತಾಯಿಯನ್ನು(Mother) ಮಗ ವ್ಯಾನ್‌ ಹತ್ತಿಸಿ ಕೊಲೆ(Murder) ಮಾಡಿದ್ದಾನೆ. ಮೈಸೂರು(Mysuru) ಜಿಲ್ಲೆ ಬೆಟ್ಟದಪುರ ಹೋಬಳಿಯ ಸೂಳೆಕೋಟೆ ಗ್ರಾಮದ ಹೇಮರಾಜ್‌ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಆರೋಪಿ.
 

Latest Videos
Follow Us:
Download App:
  • android
  • ios