Asianet Suvarna News Asianet Suvarna News

ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಮಹಿಳೆಗೆ ಜೈನ ಧರ್ಮ ಸ್ವೀಕಾರ ಮಾಡಲು ಒತ್ತಡ

ಬ್ರಾಹ್ಮಣ ಮಹಿಳೆಯ ಸಂಕಟ/ ಜೈನ ಧರ್ಮ್ ಸ್ವೀಕಾರ ಮಾಡುವಂತೆ ಅತ್ತೆ-ಮಾವನಿಂದ ಒತ್ತಡ/ ಕಿರುಕುಳ ತಾಳಲಾರದೆ ಪೊಲೀಸರ ಮೊರೆ ಹೋದ ಮಹಿಳೆ/ ಕೆಲಸದ ನಿಮಿತ್ತ ವಿದೇಶಕ್ಕೆ ಹೋದ ಗಂಡ ಸಂಪರ್ಕಕ್ಕೆ ಸಿಗುತ್ತಿಲ್ಲ

Brahmin woman files case against in-laws for forcing her to embrace Jainism Gujarat mah
Author
Bengaluru, First Published Nov 30, 2020, 5:17 PM IST

ಮುಂಬೈ (ನ. 30) ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶದಲ್ಲಿ ಕಠಿಣ ಕಾನೂನು ಜಾರಿ ಮಾಡಲಾಗಿದೆ. ಆದರೆ ಇದು ಸ್ವಲ್ಪ ವಿಚಿತ್ರ ಪ್ರಕರಣ.

ನನ್ನನ್ನು ಜೈನ ಧರ್ಮಕ್ಕೆ ಮತಾಂತರ ಆಗು ಎಂದು ಅತ್ತೆ-ಮಾವ ಒತ್ತಾಯ ಮಾಡುತ್ತಿದ್ದಾರೆ, ಕಾಪಾಡಿ ಎಂದು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ   28  ವರ್ಷದ ಮಹಿಳೆಯೊಬ್ಬರು ಪೊಲೀಸರ ಮೊರೆ ಹೋಗಿದ್ದಾರೆ.

ಅಹಮದಾಬಾದ್ ನ ಪ್ರಹ್ಲಾದ್ ನಗರದ ಮಹಿಳೆ ದೂರು ನೀಡಿದ್ದಾರೆ.  ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ನಾನು ಜೈನ ಧರ್ಮೀಯನನ್ನು ಪ್ರೀತಿಸಿ 2017ರಲ್ಲಿ ಮದುವೆಯಾಗಿದ್ದೆ.  ನಾವಿಬ್ಬರು ಎಸ್‌ಜಿ ರಸ್ತೆಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆವು.

ಲವ್ ಜಿಹಾದ್ ವಿರುದ್ಧ ತಂದ ಕಾನೂನಿನ ಸಂಪೂರ್ಣ ವಿವರ

ಹಿಂದು ಸಂಪ್ರದಾಯದಂತೆ ನನ್ನ ಮದುವೆ  ನಡೆದಿತ್ತು. 2017 ಫೆಬ್ರವರಿಯಲ್ಲಿ  ಮದುವೆಯನ್ನು ನೋಂದಣಿ ಮಾಡಿಸಿಕೊಂಡಿದ್ದೇವೆ. 

ನನ್ನ ಪತಿಗೆ ಜರ್ಮನಿಯನ್ನು ಹೊಸ ಕೆಲಸ ಸಿಕ್ಕ ಕಾರಣ ಅಲ್ಲಿಗೆ ತೆರಳಿದರು. ನಿನ್ನನ್ನು ಅಲ್ಲಿಗೆ ಕರೆಸಿಕೊಳ್ಳುತ್ತೇನೆ ಎಂದು ಹೇಳಿದ್ದ ಗಂಡ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ.  ಇದಾದ ಮೇಲೆ ಕಿರುಕುಳ ಆರಂಭವಾಯಿತು. ಅತ್ತೆ ಮಾವ ನನ್ನ ಮೇಲೆ ನಿರಂತರ ಒತ್ತಡ ಹೇರುತ್ತಿದ್ದು ಜೈನ ಧರ್ಮ ಸ್ವೀಕಾರ ಮಾಡು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.  

Follow Us:
Download App:
  • android
  • ios