''ಚಾಕುವಿನಿಂದ ಬೆದರಿಸಿ ಮುಂಬೈ ಮಹಿಳೆ ಮೇಲೆ ಗ್ಯಾಂಗ್‌ರೇಪ್ ಕಟ್ಟುಕತೆ..!''
ಮುಂಬೈನ ಧಾರಾವಿಯಲ್ಲಿ ಮೇ ತಿಂಗಳಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣ ಕಟ್ಟುಕತೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಈಗಾಗಲೇ ಆರೋಪಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಕೇಸ್ ಅಂತ್ಯಗೊಳಿಸಲು ತೀರ್ಮಾನಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈನ ಧಾರಾವಿ 'ಗ್ಯಾಂಗ್‌ರೇಪ್' ಪ್ರಕರಣದಲ್ಲಿ ಮುಂಬೈ ಪೊಲೀಸರು ಈ ಹಿಂದೆ ಇಬ್ಬರು ಹದಿಹರೆಯ ವಯಸ್ಸಿನ ಸಹೋದರರನ್ನು ಬಂಧಿಸಿ ನಂತರ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಗೊಳಿಸಿದ್ದರು. ಇನ್ನು, ಈ ಸಾಮೂಹಿಕ ಅತ್ಯಾಚಾರವೇ ನಡೆದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಮುಂಬೈ ಪೊಲೀಸರು, ಮಹಿಳೆ ತನ್ನ ದಾಂಪತ್ಯದಲ್ಲಿ ಅತೃಪ್ತಿ ಹೊಂದಿದ್ದರಿಂದ ಸುಳ್ಳು ಹೇಳಿದ್ದಾರೆ ಮತ್ತು ಕತೆ ಕಟ್ಟಿದ್ದಾರೆ ಎಂದು ಮುಂಬೈ ಪೊಲೀಸರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಲಾದ ಸಮಯದಲ್ಲಿ ಆ ಮಹಿಳೆ ನಿರಂತರವಾಗಿ ಒಂದೂವರೆ ಗಂಟೆಗಳ ಕಾಲ ವಾಟ್ಸಾಪ್‌ನಲ್ಲಿ ಆನ್‌ಲೈನ್‌ನಲ್ಲಿದ್ದರು. ಈ ಹಿನ್ನೆಲೆ ಆಕೆ ನಿರಂತರವಾಗಿ ಚಾಟ್ ಮಾಡುತ್ತಿದ್ದರು ಅಥವಾ ಮಾತನಾಡುತ್ತಿದ್ದರು ಎಂದು ಆಕೆಯ ಮೊಬೈಲ್ ಫೋನ್‌ನ ತಾಂತ್ರಿಕ ಅಧ್ಯಯನದಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 20ರ ಹರೆಯದ ನವವಿವಾಹಿತ ಮಹಿಳೆ ಮೇ ತಿಂಗಳಲ್ಲಿ ತನ್ನ ಪತಿ ಮತ್ತು ಮಾವ ಕೆಲಸದ ನಿಮಿತ್ತ ಹೊರಗೆ ಹೋಗಿದ್ದು, ಆ ವೇಳೆ ಧಾರಾವಿಯಲ್ಲಿರುವ ತನ್ನ ಚಾಲ್‌ನ ಮೆಜ್ಜನೈನ್ ಫ್ಲೋರ್‌ನಲ್ಲಿ ಒಬ್ಬಂಟಿಯಾಗಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಅಡ್ಡಗಟ್ಟಿದ್ದರು ಎಂದು ಮಹಿಳೆ ಆರೋಪಿಸಿದ್ದರು.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್ ASI, ಮಹಿಳೆ ಜೊತೆ ಠಾಣೆಯಲ್ಲೇ ರಾಸಲೀಲೆ!
ಅಲ್ಲದೆ, ಆಕೆಯ ಕೈಗಳನ್ನು ಕಟ್ಟಿ, ಚಾಕುವಿನಿಂದ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದಾರೆ ಎಂದೂ ಮಹಿಳೆ ದೂರಿದ್ದರು. ಅಲ್ಲದೆ, ಇಬ್ಬರು ಆರೋಪಿಗಳಲ್ಲಿ ಒಬ್ಬರು ಸಂಪೂರ್ಣ ಕೃತ್ಯವನ್ನು ಚಿತ್ರೀಕರಿಸಿದ್ದಾರೆ ಎಂದೂ ಮಹಿಳೆ ಹೇಳಿಕೊಂಡಿದ್ದರು. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಸಾಕ್ಷ್ಯಕ್ಕಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಿದ್ದಾರೆ. ನಂತರ, ಮೇ 16ರಂದು ಇಬ್ಬರು ಸಹೋದರರನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸಿರುವುದಾಗಿ ಪೊಲೀಸರು ಹೇಳಿದ್ದರು.
ಆದರೆ, ಹದಿಹರೆಯ ಯುವಕರ ತಂದೆಯಾದ ಸಾಮಾಜಿಕ ಕಾರ್ಯಕರ್ತ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಹುಡುಗರು ನಿರಪರಾಧಿ ಎಂದು ಹೇಳಿದ್ದಾರೆ. ಹಾಗೂ, ವಿಚಾರಣೆಯ ಸಮಯದಲ್ಲಿ, ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವಂತೆ ಇಬ್ಬರೂ ನಿಜವಾಗಿಯೂ ಧಾರಾವಿಗೆ ಭೇಟಿ ನೀಡಿದ್ದರು. ಆದರೆ ವ್ಯಾಪಾರದ ಉದ್ದೇಶಕ್ಕಾಗಿ ಮಾತ್ರ ಎಂದು ತಿಳಿದುಬಂದಿದೆ. ಇದರ ಜತೆಗೆ, ಮಹಿಳೆಯ ವೈದ್ಯಕೀಯ ವರದಿಗಳು ಅನಿರ್ದಿಷ್ಟವಾಗಿದ್ದವು ಎಂದೂ ತಿಳಿದುಬಂದಿದೆ.
"ಸಂತ್ರಸ್ತ ಮಹಿಳೆ ಅವರನ್ನು ಸಿಸಿಟಿವಿ ದೃಶ್ಯಗಳಲ್ಲಿ ಗುರುತಿಸಿದ್ದರು ಮತ್ತು ಅದರ ಆಧಾರದ ಮೇಲೆ ನಾವು ಹುಡುಗರನ್ನು ಬಂಧಿಸಿದ್ದೇವೆ. ಆದರೆ ವಿವರವಾದ ತನಿಖೆಯ ನಂತರ, ಮಹಿಳೆ ಸುಳ್ಳು ಹೇಳಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ನಾವು ಎಲ್ಲಾ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಿದ್ದೇವೆ ಮತ್ತು 17 ರಿಂದ 18 ಜನರನ್ನು ಪ್ರಶ್ನಿಸಿದ್ದೇವೆ. ಆದರೆ ಏನೂ ಕಂಡುಬಂದಿಲ್ಲ. ನಾವು ಈಗ ಬಿ ಸಾರಾಂಶದ ಮುಕ್ತಾಯ ವರದಿಯನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರಿಗೆ ಯಾವುದೇ ಪುರಾವೆಗಳು ಸಿಗದಿದ್ದಾಗ 'ಬಿ-ಸಾರಾಂಶ' ವರದಿಯನ್ನು ಸಲ್ಲಿಸಲಾಗುತ್ತದೆ.
8 ವರ್ಷದ ಪಾಕ್ ಹಿಂದೂ ಬಾಲಕಿ ಮೇಲೆ ಸಾಮೂಹಿತ ಅತ್ಯಾಚರ ನಡೆಸಿ ಕಣ್ಣು ಕಿತ್ತ ದುರುಳರು!
ಮೇ 14, 2022 ರಂದು ಮುಂಬೈನ ಧಾರಾವಿಯಲ್ಲಿ ಈ ಅತ್ಯಾಚಾರ ಪ್ರಕರಣ ನಡೆದಿದೆ ಎಂದು ವರದಿಯಾಗಿತ್ತು. ಬಳಿಕ ಮೇ 16, 2022 ರಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೀಗ, ಆರೋಪಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಮುಂಬೈ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಲು ಹೊರಟಿದ್ದಾರೆ ಎಂದು ತಿಳಿದುಬಂದಿದೆ. ಹಾಗೂ, ಈ ಗ್ಯಾಂಗ್ ರೇಪ್ ನಡೆದಿಲ್ಲ ಎಂಬ ತೀರ್ಮಾನಕ್ಕೆ ಮಹಾರಾಷ್ಟ್ರ ಪೊಲೀಸರು ಬಂದಿದ್ದಾರೆ ಎಂದು ತಿಳಿದುಬಂದಿದೆ.