Asianet Suvarna News Asianet Suvarna News

ಯಾದಗಿರಿ ಧಬೆ ಧಬೆ ಫಾಲ್ಸ್ ನಲ್ಲಿ ನೀರು ಪಾಲಾದ ಕಲಬುರಗಿ ಯುವತಿ

* ಜಲಪಾತ ವೀಕ್ಷಣೆ ಮಾಡಲು ಬಂದ ಯುವತಿ ನೀರು ಪಾಲು

* ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಧಬೆ ಧಬೆ ಫಾಲ್ಸ್

* ಫಾಲ್ಸ್ ನೋಡಲು ಬಂದ ಯುವತಿ ಐಶ್ವರ್ಯ ನೀರು ಪಾಲು

* ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಐಶ್ವರ್ಯ ಎಂಬ ಯುವತಿ ನೀರು ಪಾಲು

woman drowns in waterfall Yadagiri Karnataka mah
Author
Bengaluru, First Published Oct 3, 2021, 10:28 PM IST
  • Facebook
  • Twitter
  • Whatsapp

ಯಾದಗಿರಿ(ಅ. 03) ಜಲಪಾತ ವೀಕ್ಷಣೆಗೆ  ಬಂದ ಯುವತಿ ನೀರು ಪಾಲಾಗಿದ್ದಾಳೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಧಬೆ ಧಬೆ ಫಾಲ್ಸ್ ನಲ್ಲಿ ದುರಂತ ಸಂಭವಿಸಿದೆ.

ಫಾಲ್ಸ್ ನೋಡಲು ಬಂದ ಯುವತಿ ಐಶ್ವರ್ಯ ನೀರು ಪಾಲಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಐಶ್ವರ್ಯ ದಾರುಣ ಸಾವು ಕಂಡಿದ್ದಾರೆ. ಭಾನುವಾರ ರಜಾ  ಹಿನ್ನೆಲೆ ಸಂಬಂಧಿಕರ ಜೊತೆ ಪ್ರವಾಸಿ ತಾಣ ವೀಕ್ಷಣೆಗೆ ಬಂದಿದ್ದಳು.

ಧಬೆ ಧಬೆ ಫಾಲ್ಸ್ ಕೆಳಭಾಗದಲ್ಲಿ ಪ್ರವಾಸಿಗರಿಗೆ ನಿಷೇಧ ಮಾಡಲಾಗಿತ್ತು. ಮುಳ್ಳು ಕಂಟಿ ದಾಟಿ ಜಲಪಾತ ನೀರು ಕೆಳಗಡೆ ಬಿಳುವ ಆಳವಾದ ತಗ್ಗಿನ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಯುವತಿಯ ಶವವನ್ನು ಸ್ಥಳೀಯರು ಹೊರಗೆ ತೆಗೆದಿದ್ದು  ಸ್ಥಳಕ್ಕೆ ಗುರುಮಠಕಲ್ ಪೊಲೀಸರ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರವಾಸಿ ತಾಣದಲ್ಲಿ ಹಾಕಿರುವ ಬೋರ್ಡ್ ಗಳಮನ್ನು  ಮತ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಜಪಪಾತ ಮತ್ತು ವೀವ್ ಪಾಯಿಂಟ್ ನೋಡಲು ಹೋಗುವವರು ಎಷ್ಟು ಮುನ್ನೆಚ್ಚರಿಕೆ ವಹಿಸಿದರೂ ಕಡಿಮೆಯೇ.  ಇಂಥ ದುರಂತಗಳು ಗೊತ್ತಿಲ್ಲದೆ ಘಟಿಸಿಬಿಡುತ್ತವೆ.  ಹಾಗಾಗಿ ಎಚ್ಚರಿಕೆ ತೆಗೆದುಕೊಳ್ಳಲೇಬೇಕು. 
 

 

 

 

Follow Us:
Download App:
  • android
  • ios