ಮದುವೆ ಅನ್ನೋದು ಸ್ವರ್ಗದಲ್ಲಿ ದೇವರು ನಿಶ್ಚಿಯ ಮಾಡುತ್ತಾನೆ ಅಂತಾರೆ. ಆದ್ರೆ ಇಂತಹ ಮದುವೆಗಳು‌ ಮಾತುಕತೆಯಲ್ಲೆ‌ ಮುರಿದು ಬಿದ್ದ ಅನೇಕ ಉದಾಹರಣೆಗಳು ಕಣ್ಣ ಮುಂದಿದೆ. ಹೀಗೆ ಮದುವೆಗೆ ಹುಡುಗಿ ಒಪ್ಪಲಿಲ್ಲ ಎಂಬ ಕಾರಣಕ್ಕೆ ಹುಡುಗಿಯ ತಂದೆಗೆ ಸೇರಿದ 3 ಎಕರೆ ಅಡಿಕೆ ಗಿಡವನ್ನೆ ಹುಡುಗ ನಾಶ ಮಾಡಿದ್ದಾನೆ ಭೂಪ. 

ವರದಿ: ಮಧು.ಎಂ.ಚಿನಕುರಳಿ, ಮೈಸೂರು

ಮೈಸೂರು (ಆ.10): ಮಧ್ಯಕ್ಕೆ ಮುರಿದು ಬಿದ್ದ ಅಡಿಕೆ ಗಿಡ. ಬೇಸರದಲ್ಲೆ ಇರುವ ಜಮೀನಿನ ಮಾಲೀಕ. ಇಷ್ಟಕ್ಕೆಲ್ಲ ಕಾರಣ ಅಂದ್ರೆ ಮದುವೆಗೆ ಹುಡುಗಿ ಒಪ್ಪಲಿಲ್ಲ ಎಂಬುದು. ಅಷ್ಟಕ್ಕು ಈ ಘಟನೆ ನಡೆದಿರೋದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಡೇ ಮನುಗನಹಳ್ಳಿ ಗ್ರಾಮದಲ್ಲಿ. ಅದೇ ಗ್ರಾಮದ ಅಶೋಕ್ ಎಂಬ ಯುವಕ ಅದೇ ಗ್ರಾಮದ ವೆಂಕಟೇಶ ಎಂಬುವವರ ಮಗಳನ್ನ ಮದುವೆ ಮಾಡಿಕೊಳ್ಳಲು‌ ಮಾತುಕತೆ ನಡೆದಿತಂತೆ.‌ 

ಆದ್ರೆ ಹುಡುಗಿ ಮಾತ್ರ ಅಶೋಕ್ ನಡವಳಿಕೆ ಸರಿ ಇಲ್ಲ ಎಂಬ ಕಾರಣಕ್ಕೆ ಮದುವೆಯಾಗಲು ಒಪ್ಪಿರಲಿಲ್ಲವಂತೆ. ಈ ವಿಚಾರವಾಗಿ ಮದುವೆ ಮಾತುಕತೆ ಮುರಿದು ಬಿದ್ದಿದೆ. ಇದ್ರಿಂದ ಅಶೋಕ್‌ ವೆಂಕಟೇಶ್ ಕುಟುಂಬಸ್ಥರ ವಿರುದ್ಧ ಸಿಟ್ಟು ಮಾಡಿಕೊಂಡಿದ್ದನಂತೆ. ಪ್ರತಿದಿನ ಊರಲ್ಲು ಈ ವಿಚಾರವಾಗಿ ಬೈಯುತ್ತಿದ್ದನಂತೆ. ಅಷ್ಟೆ ಅಲ್ಲದೆ ಕುಟುಂಬಸ್ಥರನ್ನ ಸುಮ್ಮನೆ ಇರಲು ಬಿಡುವುದಿಲ್ಲ ಎಂದು ಓಡಾಡುತ್ತಿದ್ದನಂತೆ. ಕಳೆದ ವಾರವು ವೆಂಕಟೇಶ್ ಅವರ ಜಮೀನಿನಲ್ಲಿ ಬೆಳೆದ ಅರ್ಧ ಎಕ್ಕರೆ ಶುಂಠಿಯ‌ನ್ನು ನಾಶ ಮಾಡಿದ್ದಾನೆ. ‌

ಹುಲಿಗಳ ಜೊತೆಗೆ ಆನೆಗಳ ಸಂಖ್ಯೆಯಲ್ಲೂ ರಾಜ್ಯದಲ್ಲೇ ಬಂಡೀಪುರ ನಂಬರ್ 1

ಇದೀಗ ಕಳೆದ ರಾತ್ರಿ 3 ಜಮೀನಿನಲ್ಲಿ‌ ಇದ್ದ 850 ಅಡಿಕೆ ಗಿಡಗಳನ್ನ ನಾಶ ಪಡಿಸಿದ್ದಾನೆ‌. ಕಳೆದ‌ ಮೂರ್ನಾಲ್ಕು ವರ್ಷದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಡಿಕೆ ಗಿಡವನ್ನ ನೆಟ್ಟಿದ್ದಾರೆ. ಇನ್ನ ಒಂದೆರಡು ವರ್ಷ ಕಳೆದರೆ ಅಡಿಕೆ ಫಸಲನ್ನು ನೀಡುತಿತ್ತು. ಆದ್ರೆ ಅಶೋಕ್ ಮಾತ್ರ ವೆಂಕಟೇಶ್ ಮಗಳು ತನ್ನನ್ನ ಮದುವೆಯಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಳೆತ್ತರ ಬೆಳೆದಿದ್ದ‌ ಅಡಿಕೆ ಗಿಡಗಳನ್ನ ಮಚ್ಚಿನಿಂದ ಕೊಚ್ವಿ ಮೂರು ಎಕ್ಕರೆ‌ ಅಡಿಕೆ ತೋಟವನ್ನ ಸಂಪೂರ್ಣ ನಾಶ ಪಡಿಸಿದ್ದಾನೆ. 

ಅಕ್ರಮ ದಾಖಲೆ ಸೃಷ್ಟಿಮಾಡಿದ್ರೆ ಹೋರಾಟ: ಎಂಟಿಬಿ ನಾಗರಾಜ್‌

ರಾತ್ರೋ ರಾತ್ರಿ ಅಡಿಕೆ ಗಿಡ ನಾಶ ಪಡಿಸಿ‌ ಅಶೋಕ್ ನಾಪತ್ತೆಯಾಗಿದ್ದಾನಂತೆ. ಒಟ್ಟಾರೆ, ಮೂರು ವರ್ಷದಿಂದ‌ ಮಕ್ಕಳಂತೆ ಸಾಕಿ ಬೆಳೆಸಿದ್ದ‌ ಅಡಿಕೆ ಗಿಡವನ್ನ ಹುಡುಗಿ‌ ಮದುವೆಗೆ ಒಪ್ಪಲಿಲ್ಲ ಎಂದು ನಾಶ ಪಡಿಸಿರೋದು ದುರಂತವೆ.‌ ಇಂತಹ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಿ ವೆಂಕಟೇಶ್ ಕುಟುಂಬಕ್ಕೆ ಪರಿಹಾರ ನೀಡಲಿ ಎಂಬುದೆ ನಮ್ಮ ಆಶಯ.