*  ಹಲವು ಹಂತದಲ್ಲಿನ ಫ್ರಾಕ್ಸಿ ಸರ್ವರ್‌ ಬೇಧಿಸುವ ಸವಾಲು*  ಮಾಹಿತಿ ನೀಡಲು ಗೂಗಲ್‌ಗೆ ಬೆಂಗಳೂರು ಪೊಲೀಸರಿಂದ ಪತ್ರ*  ಫ್ರಾಕ್ಸಿ ಸರ್ವರ್‌ ಬಳಸಿ ಬೆದರಿಕೆ ಇ-ಮೇಲ್‌ ಕಳುಹಿಸಿದ ದುಷ್ಕರ್ಮಿಗಳು 

ಬೆಂಗಳೂರು(ಏ.14): ನಗರದ ಖಾಸಗಿ ಶಾಲೆಗಳಿಗೆ(Private Schools) ಹುಸಿ ಬಾಂಬ್‌ ಬೆದರಿಕೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ದುಷ್ಕರ್ಮಿಗಳ ಜಾಡು ಹಿಡಿಯಲು ರಿವರ್ಸ್‌ ಮೋಡ್‌ನಲ್ಲಿ ತನಿಖೆ ಮಾಡುತ್ತಿದ್ದಾರೆ.

ದುಷ್ಕರ್ಮಿಗಳು ಫ್ರಾಕ್ಸಿ ಸರ್ವರ್‌(Proxy Server) ಬಳಸಿ ಬೆದರಿಕೆ ಇ-ಮೇಲ್‌ ಕಳುಹಿಸಿದ್ದಾರೆ. ಈ ಫ್ರಾಕ್ಸಿ ಸರ್ವರ್‌ನಲ್ಲಿ ಹಲವು ಲೇಯರ್‌ಗಳು ಇರುವುದರಿಂದ ರಿವರ್ಸ್‌ ಮೋಡ್‌ನಲ್ಲಿ ಒಂದೊಂದೆ ಲೇಯರ್‌ ಪತ್ತೆಹಚ್ಚುವಲ್ಲಿ ಪೊಲೀಸರು(Police) ನಿರತರಾಗಿದ್ದಾರೆ. ಐಟಿ ಕಾಯ್ದೆ ಹಾಗೂ ಸೈಬರ್‌ ಭಯೋತ್ಪಾದನೆಯಡಿ ಪ್ರಕರಣ ದಾಖಲಾಗಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಈ ಬೆದರಿಕೆ ಇ-ಮೇಲ್‌ಗಳ ಮೂಲ ಪತ್ತೆಗೆ ಗೂಗಲ್‌(Google) ಸಂಸ್ಥೆಗೆ ಪತ್ರ ಬರೆದು ಫ್ರಾಕ್ಸಿ ಸರ್ವರ್‌ಗಳ ಮಾಹಿತಿ ಪಡೆದಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕೇಸ್, ಇಡೀ ಪ್ರಕರಣಕ್ಕೆ ಸೈಬರ್ ಟೆರರಿಸಮ್ ಕರಿ ನೆರಳು..!

ಇತ್ತೀಚೆಗೆ ನಗರದ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್‌ ಇರಿಸಿರುವ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ತನಿಖೆ ಚುರುಕುಗೊಳಿಸಲು ಪೊಲೀಸರಿಗೆ ಸೂಚನೆ ನೀಡಿತ್ತು. ಅದರಂತೆ ಪೊಲೀಸರು, ಈ ಹುಸಿ ಬಾಂಬ್‌ ಬೆದರಿಕೆಯ(Bomb Threat) ಇ-ಮೇಲ್‌ಗಳ(E-Mail) ಮೂಲ ಪತ್ತೆಗಾಗಿ ಎಲ್ಲ ಆಯಾಮಗಳಲ್ಲಿ ತನಿಖೆಗೆ ಮುಂದಾಗಿದ್ದಾರೆ.

ನಗರದ ಮತ್ತೊಂದು ಶಾಲೆಗೆ ಬಾಂಬ್‌ ಬೆದರಿಕೆ ಇ-ಮೇಲ್‌

ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಇ-ಮೇಲ್‌ ಮೂಲಕ ‘ಬಾಂಬ್‌ ಸ್ಫೋಟದ ಬೆದರಿಕೆ ಒಡ್ಡುವ ಕೃತ್ಯ ಮುಂದುವರೆದಿದ್ದು, ರೆಸಿಡೆನ್ಸಿ ರಸ್ತೆಯ ಬಿಷನ್‌ ಕಾಟನ್‌ ಬಾಲಕಿಯ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ಬೆದರಿಕೆ ಇ-ಮೇಲ್‌ನಿಂದ ಕೆಲ ಹೊತ್ತು ಆಂತಕದ ವಾತಾವರಣ ನೆಲೆಸಿತ್ತು.

ಮತ್ತೆ 3 ಶಾಲೆಗಳಿಗೆ ಹುಸಿ ಬಾಂಬ್‌: ವಿದೇಶದಿಂದ ಇಮೇಲ್‌:ಕಮಲ್‌ಪಂಥ್

ಬಿಷಪ್‌ ಕಾಟನ್‌ ಶಾಲೆಗೆ ಏ.8ರಂದು ಬೆಳಗ್ಗೆ 11 ಗಂಟೆಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿದೆ. ಆದರೆ ಇ-ಮೇಲ್‌ ಅನ್ನು ಸೋಮವಾರ ನೋಡಿದ ಗಾಬರಿಗೊಂಡ ಶಾಲೆ ಸಿಬ್ಬಂದಿ, ತಕ್ಷಣವೇ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ಮಾಹಿತಿ ಮೇರೆಗೆ ಶಾಲೆಗೆ ತೆರಳಿದ ಕಬ್ಬನ್‌ ಪಾರ್ಕ್ ಪೊಲೀಸರು, ಶಾಲೆಯನ್ನು ಬಾಂಬ್‌ ನಿಷ್ಕ್ರೀಯ ದಳ ಹಾಗೂ ಶ್ವಾನ ದಳಗಳಿಂದ ಸಮಗ್ರವಾಗಿ ಶೋಧನೆ ನಡೆಸಿದ ಬಳಿಕ ಹುಸಿ ಬಾಂಬ್‌ ಬೆದರಿಕೆ ಸಂದೇಶ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ದಿನಗಳಿಂದ ನಗರದ 18ಕ್ಕೂ ಹೆಚ್ಚಿನ ಖಾಸಗಿ ಶಾಲೆಗಳಿಗೆ ಇ-ಮೇಲ್‌ ಮೂಲಕ ಬಾಂಬ್‌ ಸ್ಫೋಟದ ಬೆದರಿಕೆ ಬಂದಿದೆ. ಈ ರೀತಿ ಬೆದರಿಕೆ ಒಡ್ಡಿದ ಆರೋಪಿಗಳ(Accused) ಪತ್ತೆಗೆ ವಿಶೇಷ ತನಿಖಾ ತಂಡಗಳು ಕಾರ್ಯಾಚರಣೆ ಮುಂದುವರೆಸಿವೆ.