ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 ಮತ್ತು 377 ರ ಅಡಿಯಲ್ಲಿ ಕುಮಾರ್ ಹೆಗ್ಡೆ ಎಂಬ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರು ಮುಂಬೈ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಈತ ನಟಿ ಕಂಗನಾ ರಣಾವತ್ ಅವರ ಪರ್ಸನಲ್ ಬಾಡಿಗಾರ್ಡ್ ಎನ್ನಲಾಗಿದೆ. ಆದರೂ ಪೊಲೀಸರು ಆರೋಪಿಗಳ ಗುರುತು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಕುಮಾರ್ ಹೆಗ್ಡೆ ಎಂಬ ವ್ಯಕ್ತಿಯ ವಿರುದ್ಧ 376 ಮತ್ತು 377 ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಲೈವ್-ಇನ್ ಸಂಬಂಧ ಮತ್ತು ಬ್ರೇಕಪ್ ಹೊಂದಿದ್ದರು ಎಂದು ಡಿಎನ್ ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಭಾರತ್ ಗೈಕ್ವಾಡ್ ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ಸ್ 376 ಅತ್ಯಾಚಾರಕ್ಕೆ ಸಂಬಂಧಿಸಿದೆ ಮತ್ತು ಸೆಕ್ಷನ್ 377 ಅಸ್ವಾಭಾವಿಕ ಲೈಂಗಿಕತೆಗೆ ಸಂಬಂಧಿಸಿದೆ.

ಫ್ಯಾಮಿಲಿ ಮ್ಯಾನ್2: ಸಮಂತಾ ಅಭಿನಯ ಮೆಚ್ಚಿದ ಕಂಗನಾ

ಹೆಗಡೆ ಅವರನ್ನು ಕಂಗನಾ ಅವರ ವೈಯಕ್ತಿಕ ಅಂಗರಕ್ಷಕ ಎನ್ನಲಾಗುತ್ತಿದೆ, ಈ ಬಗ್ಗೆ ಪ್ರತಿಕ್ರಿಯಿಸಿ ಎಂದಾಗ ಹಿರಿಯ ಇನ್ಸ್‌ಪೆಕ್ಟರ್ ಗೈಕ್ವಾಡ್ ಅವರು ಏನು ಕೆಲಸ ಮಾಡುತ್ತಾರೆಂದು ಪೊಲೀಸರಿಗೆ ತಿಳಿದಿಲ್ಲ ಎಂದಿದ್ದಾರೆ.

ಎಂಟು ವರ್ಷಗಳ ಹಿಂದೆ ತಾನು ಆರೋಪಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದೇನೆ. ಕಳೆದ ಜೂನ್‌ನಲ್ಲಿ ಹೆಗ್ಡೆ ಅವರ ವಿವಾಹದ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದೆ ಎಂದು ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ಆರೋಪಿಸಿದ್ದಾಳೆ. ಆದರೆ ನಂತರ ಆರೋಪಿ ಅನೇಕ ಸಂದರ್ಭಗಳಲ್ಲಿ ಬಲವಂತವಾಗಿ ದೈಹಿಕ ಸಂಬಂಧವನ್ನು ಹೊಂದಲು ಪ್ರಾರಂಭಿಸಿದ್ದಾನೆ ಎನ್ನಲಾಗಿದೆ.