ದಿ ಫ್ಯಾಮಿಲಿ ಮ್ಯಾನ್ 2' ಟ್ರೈಲರ್ ನೋಡಿ ಸಮಂತಾ ಬಗ್ಗೆ ಕಂಗನಾ ಹೇಳಿದ್ದಿಷ್ಟು
ಕೆಲವು ದಿನಗಳ ಹಿಂದೆ ದಿ ಫ್ಯಾಮಿಲಿ ಮ್ಯಾನ್ 2 ಟ್ರೈಲರ್ ರಿಲೀಸ್ ಆಗಿದೆ. ಇದರಲ್ಲಿ ಸಮಂತಾ ಅಕ್ಕಿನೇನಿ ಅಭಿನಯಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2' ಟ್ರೈಲರ್ ನೋಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಸಮಂತಾರ ಅಭಿನಯದ ಹೇಳಿದ್ದೇನು ಗೊತ್ತಾ?
ಇತ್ತೀಚೆಗೆ ಪ್ರಿಯಾಮಣಿ, ಶರೀಬ್ ಹಶ್ಮಿ, ಶರದ್ ಕೇಲ್ಕರ್ ಮತ್ತು ಸಮಂತಾ ಅಕ್ಕಿನೇನಿ ಅಭಿನಯದ ಮನೋಜ್ ಬಾಜಪೇಯಿ ಅವರ ದಿ ಫ್ಯಾಮಿಲಿ ಮ್ಯಾನ್ 2 ಟ್ರೈಲರ್ ಬಿಡುಗಡೆಯಾಗಿದೆ.
2019 ರಲ್ಲಿ ದಿ ಫ್ಯಾಮಿಲಿ ಮ್ಯಾನ್‌ನ ಮೊದಲ ಸೀಸನ್ ಬಿಡುಗಡೆಯಾಗಿದ್ದು ಸಖತ್ ಹಿಟ್ ಆಗಿತ್ತು.
ಈಗ ಸೀಸನ್ 2 ರ ಟ್ರೈಲರ್ ರಿಲೀಸ್ ಆದ ಐದೇ ಗಂಟೆಗಳಲ್ಲಿ 5 ಮಿಲಿಯನ್ ಕ್ಲಿಕ್ಸ್ ಗಳಿಸಿದೆ ಹಾಗೂ ಮೊದಲನೇ ಸ್ಥಾನದಲ್ಲಿದೆ. ಅಮೇಜಾನ್ ಪ್ರೈಮ್‌ನಲ್ಲಿ ಈ ಚಿತ್ರ ಜೂನ್ 4ರಂದು ಬಿಡುಗಡೆಯಾಗಲಿದೆ.
ಎರಡು ವರ್ಷಗಳ ಕಾಯುವಿಕೆಯ ನಂತರ ರಿಲೀಸ್‌ಗೆ ರೆಡಿಯಾಗಿರುವ ದಿ ಫ್ಯಾಮಿಲಿ ಮ್ಯಾನ್ 2 ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ದಕ್ಷಿಣ ಸೂಪರ್‌ಸ್ಟಾರ್ ಸಮಂತಾ ಅಕ್ಕಿನೇನಿ ಈ ಮೂಲಕ ಡಿಜಿಟಲ್ ಡೆಬ್ಯೂ ಮಾಡಲಿದ್ದಾರೆ.
ಟ್ರೈಲರ್ ಬಿಡುಗಡೆಯ ನಂತರ ಸಮಂತಾ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು ನಟಿಯ ಅಭಿನಯಕ್ಕೆ ಅಭಿಮಾನಿಗಳು ಮತ್ತು ವಿಮರ್ಶಕರು ಸಖತ್ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಾಣವತ್ ಸಹ ಸಮಂತಾ ಅಭಿನಯವನ್ನು ಹೊಗಳಿದ್ದಾರೆ.
ಕಂಗನಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ದಿ ಫ್ಯಾಮಿಲಿ ಮ್ಯಾನ್ 2 ಟ್ರೈಲರ್‌ನಿಂದ ಸಮಂತಾರ ಸ್ಕ್ರೀನ್‌ಶಾಟ್
ಶೇರ್‌ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮಂತಾ ಕಂಗನಾ ಅವರ ಪೋಸ್ಟ್ ಅನ್ನು ಹಂಚಿಕೊಂಡು ಧನ್ಯವಾದಗಳನ್ನು ತಿಳಿಸಿದ್ದಾರೆ.
ಕಂಗನಾ ಸಮಂತಾರನ್ನು ಹೊಗಳುವುದು ಇದೇ ಮೊದಲಲ್ಲ. ಕಳೆದ ತಿಂಗಳು, ಸ್ಯಾಮ್ ಅವರನ್ನು epitome of woman empowerment' ಎಂದು ಕರೆದಿದ್ದರು ಕಂಗನಾ.
ಥಲೈವಿ ಟ್ರೈಲರ್ ಅತ್ಯುತ್ತಮವಾಗಿದೆ. ಕಂಗನಾ ಟೀಮ್ ನೀವು ನಮ್ಮ ಪೀಳಿಗೆಯ ಅತ್ಯಂತ ಧೈರ್ಯಶಾಲಿ ಮತ್ತು ಪ್ರತಿಭಾವಂತ ನಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಥಿಯೇಟರ್‌ನಲ್ಲಿ ಈ ಮ್ಯಾಜಿಕ್ ನೋಡಲು ಕಾಯಲು ಸಾಧ್ಯವಿಲ್ಲ ಎಂದು ಸಮಂತಾ ಕೂಡ ಕಂಗನಾರ ತಲೈವಿ ಟ್ರೈಲರ್ ಶೇರ್ ಮಾಡಿಕೊಂಡು ಬರೆದಿದ್ದರು.