ಛೇ..  ತಾಯಿ, ಗರ್ಭಿಣಿ ಮಗಳ ಶವ 4 ದಿನದಿಂದ ರಸ್ತೆ ಮಧ್ಯೆ ಬಿದ್ದಿತ್ತು!

ರಸ್ತೆ ಮಧ್ಯೆ ತಾಯಿ ಮತ್ತು ಗರ್ಭಿಣಿ ಮಗಳ ಶವ/ ನಾಲ್ಕು ದಿನದಿಂದ ಬಿದ್ದಿದ್ದರೂ ಕೇಳುವವರಿಲ್ಲ/ ಮಾನವ ಕುಲವೇ ತಲೆತಗ್ಗಿಸುವ ಘಟನೆ/ ಓರಿಸ್ಸಾದ ಈ ಪ್ರಕರಣಕ್ಕೆ ಏನೆನ್ನೋಣ

bodies-of-woman-and pregnant-daughter-lie-on-road-for-4-days-in-odisha mah

ಓರಿಸ್ಸಾ (ಸೆ 23) ತಾಯಿ ಹಾಗೂ ಅವರ ಗರ್ಭಿಣಿ ಮಗಳ ಶವ ನಾಲ್ಕು ದಿನಗಳ ಕಾಲ ರಸ್ತೆಯ ಮೇಲೆಯೇ ಅನಾಥವಾಗಿ ಬಿದ್ದಿತ್ತು. ಮಾನವ ಕುಲವೇ ತಲೆತಗ್ಗಿಸುವ ಘಟನೆ ಒರಿಸ್ಸಾದ ಕೇಂದ್ರಪರದಲ್ಲಿ ನಡೆದಿದೆ.

ಗರ್ಭಿಣಿ ಮತ್ತವಳ ತಾಯಿಯನ್ನು ಕೊಲೆ ಮಾಡಿ ರಸ್ತೆಯ ಮೇಲೆ ಎಸೆದು ಹೋಗಿದ್ದರು, ನಾಲ್ಕು ದಿನಗಳ ಕಾಲ ಶವ ರಸ್ತೆಯಲ್ಲಿಯೇ ಇತ್ತು.ಅವರ ಶವದ ಅಂತ್ಯ ಸಂಸ್ಕಾರ ಮಾಡಲು ಕುಟುಂಬದವರು ಸಹ ನಿರಾಕರಣೆ ಮಾಡಿದ್ದಾರೆ ಎಂಬ ಮಾಹಿತಿ ಪೊಲೀಸರು ನೀಡಿದ್ದು ದುರಂತವನ್ನು ಹೇಳುತ್ತಿದೆ.

ಕಾಂಡೋಮ್ ಬಳಸಲ್ಲ ಅಂದಿದ್ದಕ್ಕೆ ನೋ ಸೆಕ್ಸ್ ಅಂದ್ಲು; ಕೊಂದೆ ಬಿಟ್ಟ ಪಾಪಿ

ಆದರೆ ಕುಟುಂಬ ಹಾಗೂ ಸ್ಥಳೀಯರು ರಾಜನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹುಲಿಯಾ ಪಂಚಾಯತ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಮೀಳಾನಾಥ್(42), ಅವರ ಮಗಳು ಸತ್ಯಪ್ರಿಯ(22)  ರನ್ನು ಹತ್ಯೆ ಮಾಡಿ ಮಧ್ಯರಸ್ತೆಯಲ್ಲಿ ದುಷ್ಕರ್ಮಿಗಳು ಎಸೆದು ಹೋಗಿದ್ದರು/  ಸೆಪ್ಟೆಂಬರ್ 19ರಿಂದ ತಾಯಿ ಮತ್ತು ಮಗಳು ನಾಪತ್ತೆಯಾಗಿದ್ದರು ಎಂದು ಎಸ್‌ಡಿಪಿಒ ರಂಜನ್ ಕುಮಾರ್ ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು ಇದರ ಹಿಂದೆ ದೊಡ್ಡ ಕೈಗಳಿದ್ದು ಪೊಲೀಸರು ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

 

Latest Videos
Follow Us:
Download App:
  • android
  • ios