Bengaluru: ಭೂ ವಿವಾದ ಮುಕ್ತಾಯಗೊಳಿಸಲು ಲಂಚ: ಬಿಎಂಟಿಎಫ್‌ ಎಸ್‌ಐ ಬಲೆಗೆ

ಮೂರು ವರ್ಷಗಳ ಹಳೇ ಭೂ ವಿವಾದದ ಪ್ರಕರಣವನ್ನು ಮತ್ತೆ ಮುಕ್ತಾಯಗೊಳಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ .1 ಲಕ್ಷ ಲಂಚ ಸ್ವೀಕರಿಸುವಾಗ ಬಿಎಂಟಿಎಫ್‌ ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಕಾನ್‌ಸ್ಟೇಬಲ್‌ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ. 

bmtf officer caught red handed while accepting 1 lakh bribe in bengaluru gvd

ಬೆಂಗಳೂರು (ಜು.08): ಮೂರು ವರ್ಷಗಳ ಹಳೇ ಭೂ ವಿವಾದದ ಪ್ರಕರಣವನ್ನು ಮತ್ತೆ ಮುಕ್ತಾಯಗೊಳಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ 1 ಲಕ್ಷ ಲಂಚ ಸ್ವೀಕರಿಸುವಾಗ ಬಿಎಂಟಿಎಫ್‌ ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಕಾನ್‌ಸ್ಟೇಬಲ್‌ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ. ಬಿಎಂಟಿಎಫ್‌ ಪಿಎಸ್‌ಐ ಬೇಬಿ ಓಲೇಕಾರ್‌ ಹಾಗೂ ಕಾನ್‌ಸ್ಟೇಬಲ್‌ ಶ್ರೀನಿವಾಸ್‌ ಬಂಧಿತರಾಗಿದ್ದು, 2019ರ ಭೂ ವಿವಾದದ ಪ್ರಕರಣದಲ್ಲಿ ಪೊಲೀಸಲು ಹಣ ವಸೂಲಿಗೆ ಯತ್ನಿಸಿ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಬೆಂಗಳೂರು ಪೂರ್ವ ತಾಲೂಕು ಕೆ.ಆರ್‌.ಪುರ ಹೋಬಳಿಯ ಹೊರ ಮಾವು ಅಗರ ಗ್ರಾಮದ ಸರ್ವೆ ನಂ.151/3ರಲ್ಲಿ ರಸ್ತೆ ನಿರ್ಮಾಣದ ವಿಚಾರವಾಗಿ 2019ನೇ ಬಿಎಂಟಿಎಫ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದು ಈ ಅರ್ಜಿ ವಿಚಾರಣೆ ನಡೆಸಿ ಆಗಿನ ಇನ್‌ಸ್ಪೆಕ್ಟರ್‌ ಮುಕ್ತಾಯಗೊಳಿಸಿದ್ದರು. ಹೀಗಿದ್ದರೂ ಮತ್ತೆ ದೂರುದಾರರಿಗೆ ಕರೆ ಮಾಡಿ ನಿಮ್ಮ ಹಳೇ ಕೇಸ್‌ ಮುಕ್ತಾಯಗೊಳಿಸಲು ಹಣ ನೀಡುವಂತೆ ಪಿಎಸ್‌ಐ ಬೇಬಿ ಓಲೇಕಾರ್‌ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸಿಬಿಗೆ ದೂರು ಸಲ್ಲಿಕೆಯಾಗಿತ್ತು. ಅಂತೆಯೇ ಕಾರ್ಯಾಚರಣೆ ನಡೆಸಿದ ಎಸಿಬಿಗೆ ಬಿಎಂಟಿಎಫ್‌ ಕಚೇರಿಯಲ್ಲಿ ಪಿಎಸ್‌ಐ ಪರವಾಗಿ ಹಣ ಸ್ವೀಕರಿಸುವಾಗ ಕಾನ್‌ಸ್ಟೇಬಲ್‌ ಶ್ರೀನಿವಾಸ್‌ ಸಿಕ್ಕಿಬಿದ್ದಿದ್ದಾನೆ. ಬಳಿಕ ಪಿಎಸ್‌ಐ ಬೇಬಿಯನ್ನು ಬಂಧಿಸಲಾಗಿದೆ.

ಗುಬ್ಬಿಯಲ್ಲಿ ಅಕ್ರಮ: ಭ್ರಷ್ಟ ಅಧಿಕಾರಿಗಳನ್ನ ಜೈಲಿಗಟ್ಟಿಸಿದ ಶಾಸಕ ಶ್ರೀನಿವಾಸ್‌

ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಅರೆಸ್ಟ್: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಲಂಚ ಪ್ರಕರಣ ಸಂಬಂಧ ಬೆಂಗಳೂರು ಮಾಜಿ ಜಿಲ್ಲಾಧಿಕಾರಿ ಮಂಜುನಾಥ್ ಬಂಧನವಾಗಿದೆ. ಎಸಿಬಿ ಅಧಿಕಾರಿಗಳು ಮುಂಜುನಾಥ್ ಬಂಧಿಸಿದ್ದಾರೆ. ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆ ಲಂಚನ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಹೀಗಾಗಿ ಈ ಪ್ರಕರಣ ಐಎಸ್ ಅಧಿಕಾರಿ ಮಂಜುನಾಥ್ ಕಡೆ ತಿರುಗಿತ್ತು.

ಎಸಿಬಿ ಅಧಿಕಾರಿಗಳು ಈಗಾಗಗಲೇ ಮಂಜುನಾಥ್ ಕರೆಸಿ ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲಿ ನೀಡಿದ ಹೇಳಿಕೆಗೆ ಆಧರಿಸಿ ತನಿಖೆ ಮುಂದುವರಿಸಿದ ಅಧಿಕಾರಿಗಳಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿತ್ತು. ಇದರ ಹಿನ್ನಲೆಯಲ್ಲಿ ಮುಂಜುನಾಥ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಮಂಜುನಾಥ್ ವಿರುದ್ಧ ಎಸಿಬಿ ಅಧಿಕಾರಿಗಳು ಲಂಚ ಪ್ರಕರಣ ತನಿಖೆಗೆ ಚುರುಕುಗೊಳಿಸುತ್ತಿದ್ದಂತೆ ಸರ್ಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯಿಂದ ಮುಂಜುನಾಥ್ ಅವರನ್ನು ಸಮಗ್ರ ಶಿಶು ಅಭಿವೃದ್ಧಿ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿತ್ತು. ಜಮೀನು ಕುರಿತು ತಮ್ಮ ಪರವಾಗಿ ಆದೇಶ ನೀಡಲು ಅಜಂ ಪಾಶಾ ಅವರಿಂದ 5 ಲಕ್ಷ ರೂಪಾಯಿ ಲಂಚ ಪಡೆಯುವಾಗ ಎಸಿಬಿ ದಾಳಿ ಮಾಡಿತ್ತು. 

ಬೆಳದಿಂಗಳ ಬಾಲೆಗೆ ಮನಸೋತು ಕೊಲೆಯಾದ ಯುವಕ: ಸುಪಾರಿ ಪಡೆದು ಕೊಲೆ ಮಾಡಿಸಿದ ಲೇಡಿ ಡಾನ್

ಮುಂಜುನಾಥ್ ಆದೇಶದಂತೆ ಅಜಂ ಪಾಶಾ ಜಿಲ್ಲಾಧಿಕಾರಿ ಕಚೇರಿ ವ್ಯವಸ್ಥಾಪಕ ಮಹೇಶ್ ಹಾಗೂ ಸಹಾಯಕ ಚೇತನ್ ಲಂಚ ಸ್ವೀಕರಿಸಿದ್ದರು. ಈ ವೇಳೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಇಬ್ಬರು ಕಚೇರಿ ಅಧಿಕಾರಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಈ ಲಂಚ ಮುಂಜುನಾಥ್ ನಿರ್ದೇಶದ ಮೇರೆ ಪಡೆಯಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಜಿಲ್ಲಾಧಿಕಾರಿ ಮುಂಜನಾಥ್ ವಿರುದ್ಧದ ತನಿಖೆ ಚುರುಕುಗೊಳಿಸಲಾಗಿತ್ತು. ಅಜಂ ಪಾಷಾ ನೀಡಿದ್ದ ಕೂರಿನಲ್ಲಿ ಮಂಜುನಾಥ್ ಹೆಸರು ಉಲ್ಲೇಖಿಸಲಾಗಿತ್ತು. ಇಷ್ಟೇ ಅಲ್ಲ ಫೋನ್ ವಿವರಗಳನ್ನು ನೀಡಲಾಗಿತ್ತು. ಹೀಗಾಗಿ ಪ್ರಕರಣದಲ್ಲಿ ಮೂರನೇ ಅರೋಪಿಯಾಗಿ ಮಂಜುನಾಥ್ ಹೆಸರು ಉಲ್ಲೇಖಿಸಲಾಗಿದೆ. 

Latest Videos
Follow Us:
Download App:
  • android
  • ios