Asianet Suvarna News Asianet Suvarna News

ಅಧಿಕಾರಿಗಳ ಕಿರುಕುಳಕ್ಕೆ ಡಿಪೋದಲ್ಲಿಯೇ ಬಿಎಂಟಿಸಿ ಚಾಲಕ ಆತ್ಮಹತ್ಯೆ!

ಬಿಎಂಟಿಸಿ ಚಾಲಕನೊಬ್ಬ ಬಸ್‌ ಡಿಪೋ ಆವರಣದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಪತ್ನಿ ದೂರು ನೀಡಿದ್ದಾರೆ. ದೂರು ಹಿಂಪಡೆಯುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

BMTC driver committed suicide over harassment by officers gow
Author
First Published Aug 30, 2022, 11:01 AM IST

ಬೆಂಗಳೂರು (ಆ.30): ಬಿಎಂಟಿಸಿ ಚಾಲಕನೊಬ್ಬ ಬಸ್‌ ಡಿಪೋ ಆವರಣದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಎಂಟಿಸಿ ಚಾಲಕ ಹೊಳೆಬಸಪ್ಪ (49) ಮೃತ ಚಾಲಕ. ರಾಜರಾಜೇಶ್ವರಿ ನಗರದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಡಿಪೋ 21 ರಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಬೆಳಗ್ಗೆ ಕರ್ತವ್ಯ ನಿರ್ವಹಿಸಲು ಡಿಪೋಗೆ ಬಂದಿರುವ ಹೊಳೆ ಬಸಪ್ಪ, ಕರ್ತವ್ಯಕ್ಕೆ ಹಾಜರಾಗದೇ, ಡಿಪೋ ಆವರಣದಲ್ಲಿರುವ ಡೀಸೆಲ್‌ ಬಂಕ್‌ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ 12.20ರ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಪೋ ಮೇಲಾಧಿಕಾರಿಗಳ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ರಜಾ ಮತ್ತು ನಾನಾ ಕಾರಣಗಳಿಂದ ಡಿಪೋ ಮ್ಯಾನೇಜರ್ ನನಗೆ ಕಿರುಕುಳ ನೀಡ್ತಿದ್ರು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಪತ್ನಿ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.

ಮ್ಯಾನೇಜರ್ ಕಿರುಕುಳದಿಂದಲೇ ನನ್ನ ಪತಿ ಆತ್ಮಹತ್ಯೆ ‌ಪತ್ನಿ ದೂರು:
ಮ್ಯಾನೇಜರ್ ಕಿರುಕುಳದಿಂದಲೇ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು  ಆರ್ ಆರ್ ನಗರ ಪೋಲಿಸ್ ಠಾಣೆಯಲ್ಲಿ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನ ವಿರುದ್ಧ ಪತ್ನಿ ಸೀಮಾ ದೂರು ನೀಡಿದ್ದು, ಬಿಎಂಟಿಸಿ ಡಿಪೋ‌ ಮ್ಯಾನೇಜರ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ

ಕಂಠ ಮಟ್ಟ ಕುಡಿದು ಪೊಲೀಸರ ಮೇಲೆ ಆಫ್ರಿಕನ್ ಯುವತಿಯರ ಹಲ್ಲೆ!

 ಡಿಪೋ ಮ್ಯಾನೇಜರ್ ಕಿರುಕುಳದಿಂದಾನೇ  ಬಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದು,  ಮ್ಯಾನೇಜರ್ ಕಿರುಕುಳದಿಂದಲೇ ನಾನು ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ಡೆತ್ ನೋಟ್  ಬರೆದಿಟ್ಟಿದ್ದು ಬಸಪ್ಪ ಸಾವನ್ನಪ್ಪಿದ್ದಾನೆ. ಪೋಸ್ಟ್ ಮಾರ್ಟಂ ಮಾಡುವ ವೇಳೆ ಬಸಪ್ಪನ ಒಳಉಡುಪಿನಲ್ಲಿ ಸಿಕ್ಕ ಡೆತ್ ನೋಟ್ ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.  ಸದ್ಯ ಡೆತ್ ನೋಟ್ ಆರ್ ಆರ್ ನಗರ ಪೊಲೀಸ್ ಪಿಎಸ್ಐ ಕೈಯಲ್ಲಿದೆ.

ಮಹಿಳೆಯರ ವಿರುದ್ಧ ಅಪರಾಧ: ಬೆಂಗಳೂರು ದೇಶದಲ್ಲೇ ನಂ.3!

ಪ್ರಕರಣ ನಡೆದಾಗಿನಿಂದ ಕೇಸ್ ವಾಪಸು ಪಡೆಯುವಂತೆ ಪತ್ನಿ ಸೀಮಾಗೆ ಬಿಎಂಟಿಸಿ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ದೂರು ನೀಡಿದ್ರೆ ಯಾವುದೇ ಪರಿಹಾರವಿಲ್ಲ ಎಂದು ಅಧಿಕಾರಿಗಳು ಸೀಮಾಗೆ  ಎಚ್ಚರಿಕೆ ನೀಡುತ್ತಿದ್ದಾರೆ ಎಂಬ  ಆರೋಪ ಕೇಳಿಬಂದಿದೆ. ಸದ್ಯ ಮೃತ ದೇಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿದೆ.
 

 

Follow Us:
Download App:
  • android
  • ios