Woman dies on her birthday: ಬೆಂಗಳೂರಿನ ವಿಜಯನಗರದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದು 58 ವರ್ಷದ ಮಾಲಾ ಎಂಬ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮರುದಿನವೇ ಅವರ ಹುಟ್ಟುಹಬ್ಬವಿದ್ದು, ಸಂಭ್ರಮಿಸಬೇಕಿದ್ದ ಕುಟುಂಬದಲ್ಲಿ ಇದೀಗ ಶೋಕ ಮಡುಗಟ್ಟಿದೆ.

ಬೆಂಗಳೂರು (ಅ.26): ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿ ನಿನ್ನೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಹುಟ್ಟು ಹಬ್ಬ ಇಂದು. ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿಂದು ಸೂತಕದ ಛಾಯೆ. ಕೇಕ್ ಕಟ್ ಮಾಡಿ ಹುಟ್ಟು ಸೆಲೆಬ್ರೇಷನ್ ಮಾಡಬೇಕಿದ್ದ ಕುಟುಂಬಸ್ಥರು ಇಂದು ಮೃತ ಶರೀರದ ಮುಂದೆ ಕಣ್ಣೀರಿಡುವಂತಾಗಿದೆ.

ಹೌದು, ಸಂಜೆ 6:30ರ ಸುಮಾರು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಾಲಾ(58) ಅವರಿಗೆ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯೊಡೆದ ಪರಿಣಾಮ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ದಾರುಣವಾಗಿ ಮೃತರರಾಗಿದ್ದಾರೆ.

ಇದನ್ನೂ ಓದಿ:ಹುಟ್ಟುಹಬ್ಬದ ದಿನವೇ ಮಗ ಸಾವು, ಆಸ್ಪತ್ರೆಯಲ್ಲೇ ಕೇಕ್ ಕತ್ತರಿಸಿದ ಕುಟುಂಬ, ದೃಶ್ಯ ನೋಡಿದ್ರೆ ಕಣ್ಣೀರು ಬರುತ್ತೆ

ಇಂದು ಹುಟ್ಟುಹಬ್ಬ ಹಿನ್ನೆಲೆ ನಿನ್ನೆ ಊರಿನಿಂದ ಬೆಂಗಳೂರಿಗೆ ಬಂದಿದ್ದ ಫ್ಯಾಮಿಲಿ. ಆದರೆ ಸಂಜೆ ವೇಳೆಗೆ ಅಪಘಾತದಲ್ಲಿ ದಾರುಣವಾಗಿ ಮಾಲಾ ಮೃತಪಟ್ಟಿದ್ದಾರೆ. ಸಂಭ್ರಮಿಸಬೇಕಿದ್ದ ಮನೆಯಲ್ಲೀಗ ಕಣ್ಣೀರು ಹಾಕುವಂತಾಗಿದೆ. ಹುಟ್ಟುಹಬ್ಬದ ಸಿದ್ಧತೆಗೆ ತಂದ ವಸ್ತುಗಳೆಲ್ಲವೂ ಮೃತ ಶರೀರದ ಮೇಲೆ ಇಡುವ ಪರಿಸ್ಹಿತಿ ಸೃಷ್ಟಿಸಿದೆ. ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.