ಉತ್ತರಪ್ರದೇಶ: ಮಹಿಳೆಗೆ ಕಿರುಕುಳ: ಬಿಜೆಪಿ ಶಾಸಕನ ವಿರುದ್ಧ FIR, ಮಗನ ಮೇಲೆ ಅತ್ಯಾಚಾರ ಆರೋಪ
Crime News: ಮಹಿಳೆ ಮೇಲೆ ಅತ್ಯಾಚಾರ, ಹಲ್ಲೆ ಮತ್ತು ಕಿರುಕುಳದ ಆರೋಪದ ಮೇಲೆ ಬಿಜೆಪಿ ಶಾಸಕ ಮತ್ತು ಆತನ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ
ಉತ್ತರಪ್ರದೇಶ (ಸೆ. 21): ಮಹಿಳೆ ಮೇಲೆ ಅತ್ಯಾಚಾರ, ಹಲ್ಲೆ ಮತ್ತು ಕಿರುಕುಳದ ಆರೋಪದ ಮೇಲೆ ಆಗ್ರಾ ಪೊಲೀಸರು ಬಿಜೆಪಿ ಶಾಸಕ ಚೊಟ್ಟೆ ಲಾಲ್ ವರ್ಮಾ ಮತ್ತು ಆತನ ಪುತ್ರ ಲಕ್ಷ್ಮಿಕಾಂತ್ ವರ್ಮಾ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆ ಶಾಸಕನ ವಿರುದ್ಧ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳದ ಆರೋಪ ಮಾಡಿಲ್ಲ. ಸಂತ್ರಸ್ತ ಮಹಿಳೆ ತಾನು ಚೋಟ್ಟೆ ಲಾಲ್‌ನ ಮಗಳ ಸ್ನೇಹಿತೆ ಮತ್ತು 17 ವರ್ಷ ವಯಸ್ಸಿನಿಂದಲೂ ಆಗ್ರಾ ನಿವಾಸಕ್ಕೆ ಭೇಟಿ ನೀಡುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. 2003 ರಲ್ಲಿ ಲಕ್ಷ್ಮಿ ಕಾಂತ್ ವರ್ಮಾ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದು, ಶಾಸಕರ ಪುತ್ರ ತನ್ನ ನಿವಾಸಕ್ಕೆ ಕರೆಸಿ ಮದ್ಯ ಸೇವಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆರೋಪಿ ಲಕ್ಷ್ಮೀಕಾಂತ್ ವರ್ಮಾ ಈ ಕೃತ್ಯದ ವೀಡಿಯೊಗಳನ್ನು ಮಾಡಿದ್ದಾರೆ, ಅಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಹಲ್ಲೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆಯನ್ನು ಮದುವೆಯಾಗುವುದಾಗಿ ಲಕ್ಷ್ಮೀಕಾಂತ್ ಭರವಸೆ ನೀಡಿದ್ದ ಎನ್ನಲಾಗಿದೆ.
ಲಕ್ಷ್ಮಿ ಕಾಂತ್ ವರ್ಮಾ ತನ್ನನ್ನು ದೇವಸ್ಥಾನದಲ್ಲಿ ವಿವಾಹವಾದರು ಮತ್ತು ನಂತರ ಹಲವಾರು ಬಾರಿ ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದರು ಎಂದು ಕೆಲವು ವರ್ಷಗಳ ನಂತರ ಮಹಿಳೆ ಹೇಳಿಕೊಂಡಿದ್ದಾಳೆ.
ಮಗಳ ವಯಸ್ಸಿನವಳ ಮೇಲೆ ಎರಗಿದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವರ ಗೆಳೆಯನ ಗಿಲಿಗಿಲಿ ಆಟ!
ಆದರೆ, 2006 ರಲ್ಲಿ ಮಹಿಳೆ ಜಲಂಧರ್‌ಗೆ ಹೋದಾಗ, ಚೋಟ್ಟೆ ಲಾಲ್ ತನ್ನ ಮಗನನ್ನು ಬೇರೆ ಹುಡುಗಿಯೊಂದಿಗೆ ಮದುವೆ ಮಾಡಿಸಿದ್ದಾರೆ. ಈ ಬಳಿಕ ಕಿರುಕುಳ ಮುಂದುವರಿದಿದ್ದು ಶಾಸಕರ ಮಗ ವಿಚ್ಛೇದನ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಇನ್ನು ದೂರಿನ ಆಧಾರದ ಮೇಲೆ, ಲಕ್ಷ್ಮೀಕಾಂತ್ ವರ್ಮಾ ವಿರುದ್ಧ ಸೆಕ್ಷನ್ 376 (ಅತ್ಯಾಚಾರ ಶಿಕ್ಷೆ), 313 (ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಕಾರಣ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ ಶಿಕ್ಷೆ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), ಭಾರತೀಯ ದಂಡ ಸಂಹಿತೆಯ 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), 494ರ (ಗಂಡ ಅಥವಾ ಹೆಂಡತಿಯ ಜೀವಿತಾವಧಿಯಲ್ಲಿ ಮತ್ತೆ ಮದುವೆಯಾಗುವುದು) ಅನ್ವಯ ಪ್ರಕರಣ ದಾಖಲಿಸಲಾಗಿದೆ.