* ಪಬ್ ಜಿ  ಗೇಮ್ ಪಾರ್ಟನರ್ ಇಲ್ಲ ಎಂಬ ಆತಂಕ* ಗೆಳೆಯನ ಜತೆ ಆಟ ಮುಂದುವರಿಸಲು ಬಾಂಬ್  ಇದೆ ಎಂದು ಕರೆ ಮಾಡಿದ* ರೇಲ್ವೆ ಸಹಾಯವಾಣಿಗೆ ಕರೆ ಮಾಡಿದ್ದ* ಪ್ರಯಾಣಿಕರನ್ನು ಇಳಿಸಿ ಪರಿಶೀಲನೆ ನಡೆಸಿದ ಪೊಲೀಸರು

ಬೆಂಗಳೂರು( ಏ. 03) ಪಬ್ ಜಿ (PUBG) ಟಕ್ಕಾಗಿ ಹುಸಿ ಬಾಂಬ್ ಕರೆ ಮಾಡಿದ್ದಾನೆ ಈ ಬಾಲಕ. ಬಾಲಕನ ಸುಳ್ಳಿಗೆ 90 ನಿಮಿಷ ರೈಲನ್ನ ತಡಕಾಡಬೇಕಾಗಿ ಬಂದಿದೆ. ಮಾರ್ಚ್ 30ರಂದು ಯಲಹಂಕ (Yalahanka) ರೈಲ್ವೇ (Indian Railways)ನಿಲ್ದಾಣದಲ್ಲಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಬಾಲಕನ ಸ್ನೇಹಿತ 2 ಗಂಟೆಗೆ ಯಲಹಂಕದಿಂದ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ತೆರಳಬೇಕಿತ್ತು. ಸ್ನೇಹಿತ ಹೋದರೆ ತನಗೆ ಗೇಮ್ ಪಾರ್ಟನರ್ ಇರಲ್ಲ ಎಂದು ಭಾವಿಸಿದ ಬಾಲಕ ಹುಸಿ ಕರೆ ಮಾಡಿದ್ದಾನೆ.

ರೈಲ್ವೇ ಸಹಾಯವಾಣಿಗೆ ಕರೆ ಮಾಡಿ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್ ಇದೆ ಎಂದಿದಿದ್ದಾನೆ. ಪ್ರಯಾಣಿಕರನ್ನ ಇಳಿಸಿ 90 ನಿಮಿಷ ಪರಿಶೀಲಿಸಬೇಕಾದ ಪರಿಸ್ಥಿತಿ ಬಂದಿದೆ. ಸುಳ್ಳೆಂದು ತಿಳಿದ ಮೇಲೆ ಹುಸಿ ಕರೆಯ ಬಗ್ಗೆ ಪೊಲೀಸರು ಹುಡುಕಾಟ ಮಾಡಿದ್ದಾರೆ.

ಬಳಿಕ ಅಪ್ರಾಪ್ತ ಹೇಳಿದ ಅಸಲಿ ಸುಳ್ಳಿನ ಕಹಾನಿ ಬಯಲಾಗಿದೆ ಅಪ್ರಾಪ್ತ ಬಾಲಕನಾದ್ದರಿಂದ ಪ್ರಕರಣ ದಾಖಲಿಸದೇ ಬುದ್ಧಿವಾದ ಹೇಳಿದ್ದಾರೆ ಪೊಲೀಸರು. ಹಾಗೇ ಮಗನಿಗೆ ಬುದ್ದಿವಾದ ಹೇಳುವಂತೆ ಪೋಷಕರಿಗೆ ತಿಳಿಸಿ ಬರಲಾಗಿದೆ.

ಬಾಂಬ್ ಇಟ್ಟಿದ್ದ ಆದಿತ್ಯಗೆ 20 ವರ್ಷ ಶಿಕ್ಷೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆಸಾಮಿಗೆ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟ ಮಾಡಿದೆ. 2020, ಜನವರಿ 20ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ದೋಷಿ ಎಂದಿರುವ ಸ್ಥಳೀಯ ನ್ಯಾಯಾಲಯ, ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು.

ಬಜ್ಪೆ ವಿಮಾನ ನಿಲ್ದಾಣದ ಬಾಂಬ್ ಪ್ರಕರಣದ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿತ್ತು. ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4ರ ಅಡಿಯಲ್ಲಿ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ.ಗಳ ದಂಡವನ್ನು ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದರು.

ಪಬ್‌ಜಿ ಬ್ಯಾನ್‌ಗೆ 3 ದಿನ ಮುನ್ನ ಆತ್ಮಹತ್ಯೆ ಮಾಡಿಕೊಂಡ ಹಾವೇರಿ ಹುಡುಗ!

ಗೇಮ್ ಆಡಬೇಡ ಎಂದಿದ್ದಕ್ಕೆ ಸುಸೈಡ್: ಪಬ್ಜಿ ವಿಡಿಯೋ ಗೇಮ್‌ ಆಡಬೇಡ ಎಂದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕನೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ತಾಲೂಕಿನ ಸಂಗೂರು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ತೇಜಸ್‌ ಶಿಡ್ಲಾಪುರ (17) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಅತಿಯಾಗಿ ಪಬ್ಜಿ ಆಡುತ್ತಿದ್ದ ಈತನಿಗೆ ಪೋಷಕರು ಬುದ್ಧಿವಾದ ಹೇಳಿದ್ದಾರೆ. ಆಗಲೂ ಕೇಳದ್ದಕ್ಕೆ ಮೊಬೈಲ್‌ ಇಂಟರ್‌ನೆಟ್‌ ಸಂಪರ್ಕ ಕಡಿತಗೊಳಿಸಿದ್ದರು. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ

ಗೇಮ್ ಗಾಗಿ ಕುಟುಂಬವನ್ನೇ ಕೊಂದ: ಪಂಜಾಬ್ ಪ್ರಾವಿನ್ಸ್‌ನಲ್ಲಿ 14ರ ಬಾಲಕ ಪಬ್‌ಜಿ ಪ್ರಭಾವದಿಂದ ಇಡೀ ಕುಟುಂಬವನ್ನೇ ಹತ್ಯೆ ಮಾಡಿದ್ದಾದೆ.

 45 ವರ್ಷದ ನಾಹಿದ್ ಮುಬಾರಕ್ ಆರೋಗ್ಯ ಕಾರ್ಯಕರ್ತೆ. ನಾಹಿದ್‌ಗೆ ನಾಲ್ವರು ಮಕ್ಕಳು. ಇದರಲ್ಲಿ 14 ವಯಸ್ಸಿನ ಬಾಲಕ ಕಳೆದ 6 ತಿಂಗಳಿನಿಂದ ಪಬ್‌ಜಿ ಗೇಮ್‌ನಲ್ಲಿ ಮುಳುಗಿದ್ದ. ಈ ಕುರಿತು ತಾಯಿ ನಾಹಿದ್ ಕೆಲ ಬಾರಿ ವಾರ್ನಿಂಗ್ ಮಾಡಿದ್ದರೂ ಬಾಲಕ ಮಾತ್ರ ಪಬ್‌ಜಿ ಗೇಮ್‌ನಿಂದ ಹಿಂದೆ ಸರಿದಿರಲಿಲ್ಲ ಪಬ್‌ಜಿಯಲ್ಲಿ ಮುಳುಗಿದ್ದ ಬಾಲಕ ಮಾನಸಿಕವಾಗಿ ಜರ್ಝರಿತನಾಗಿದ್ದ. ನಾಹಿದ್ ಕೆಲಸ ಮುಗಿಸಿ ಮನೆಗೆ ಬಂದ ವೇಳೆ ಬಾಲಕ ಪಬ್‌ಜಿ ಆಟ ಗಮನಿಸಿದ ತಾಯಿ ಸರಿಯಾಗಿ ಬುದ್ದಿವಾದ ಹೇಳಿದ್ದಾರೆ. ಮೊದಲೆ ಮಾನಸಿಕವಾಗಿ ಕುಗ್ಗಿಹೋಗಿದ್ದ ಬಾಲಕ, ತಾಯಿ ಡ್ರವರ್‌ನಲ್ಲಿಟ್ಟಿದ್ದ ಪಿಸ್ತೂಲ್ ತೆಗೆದು ಪಬ್‌‌ಜಿಯಲ್ಲಿ ಶೂಟ್ ಮಾಡುವಂತೆ ಏಕಾಏಕಿ ಗುಂಡಿನ ಸುರಿಮಳೆಗೈದು ಇಡೀ ಕುಟುಂಬವನ್ನು ಹತ್ಯೆ ಮಾಡಿದ್ದ.