Asianet Suvarna News Asianet Suvarna News

Bizarre Kidnap : 'ಕಿಡ್ನಾಪ್ ಮಾಡಿದ್ದಾರೆ ಬನ್ನಿ'  ಅಲ್ಲಿ ಹೋಗಿ ನೋಡಿದಾಗ ಗೊತ್ತಾಗಿದ್ದೇ ಬೇರೆ

* ಇದೊಂದು ವಿಚಿತ್ರದಲ್ಲಿ ವಿಚಿತ್ರ ಪ್ರಕರಣ
* ಸ್ಥಳೀಯರು ಕರೆ ಮಾಡಿದ್ದಕ್ಕೆ ಪೊಲೀಸರೆ ಕಂಗಾಲಾಗಿದ್ದರು
* ಬಲವಂತವಾಗಿ ಯುವಕನ ಕರೆದುಕೊಂಡು ಹೋಗಲಾಗಿದೆ
* ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸುಮ್ಮನಾಗಿದ್ದಾರೆ

Bizarre bengaluru police confused over emergency phone call mah
Author
Bengaluru, First Published Dec 26, 2021, 10:50 PM IST

ಬೆಂಗಳೂರು(ಡಿ. 26)   ಬೆಂಗಳೂರು ಪೊಲೀಸರಿಗೆ (Bengaluru Police) ಅದೊಂದು ಪೋನ್ ಕರೆ ತಲೆಬಿಸಿ ತಂದಿತ್ತು. ಇದೊಂದು ರೀತಿಯ ಸಿನಿಮೀಯ ಪ್ರಕರಣ.. ಗೊಂದಲದ ಪ್ರಕರಣ . ಪೊಲೀಸರಿಗೆ ಟೆನ್ಷನ್ ತರಿಸಿತು . 112 ಗೆ ಬಂದ ಅದೊಂದು ಕಿಡ್ನಾಪ್ (Kidnap) ಕರೆ. ರಾತ್ರಿ 11.50 ಕ್ಕೆ ಐದು ಜನರ ತಂಡ ಓಮಿನಿ‌ಯಲ್ಲಿ ಬಲವಂತವಾಗಿ ಯುವಕನನ್ನ ಕರೆದೊಯ್ದಿದ್ದಾರೆ ಎಂಬ ದೂರು  ಬಂದಿತ್ತು. ಸ್ಥಳೀಯರು ಕರೆ ಮಾಡಿ ತಿಳಿಸಿದ್ದರು.

ತಕ್ಷಣವೇ ಕಾರ್ಯನಿರತರಾದ ಕೆ ಆರ್ ಪುರ (KR Pura) ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಸಿಸಿಟಿವಿ (CCTV)ಪರಿಶೀಲಿಸಿದ್ದಾರೆ. ಇಡೀ ಘಟನೆ ಕಿಡ್ನಾಪ್ ಮಾದರಿಯಲ್ಲೇ ಇದ್ದಿದ್ದು ಗೊತ್ತಾಗಿದೆ. ಯುವಕನನ್ನು ಕರೆದೊಯ್ದ ಓಮಿನಿ ಕಾರು ನಂಬರ್ ಟ್ರೇಸ್ ಮಾಡಿದ್ದಾರೆ. ನಂತರ ಕಾರ್ ಎಲ್ಲಿಯದ್ದು ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ಆಗ ಪೊಲೀಸರೇ ದೊಡ್ಡ ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ಕಾರಿನಲ್ಲಿ ಎರಡು ತಿಂಗಳ ಹಿಂದೆ ಓರ್ವ ಯುವಕನನ್ನು ಬಲವಂತವಾಗಿ ಕರೆದೊಯ್ದಿದ್ದರು ಎಂಬ ಮಾಹಿತಿಯೂ ಗೊತ್ತಾಗಿದೆ.

Robbery:  ದೊಡ್ಡಧಿಕಾರಿ ಮನೆ ಮಹಿಳೆಯರ ಸೀರಿಯಲ್ ಹುಚ್ಚು, ದರೋಡೆ ನಡೆದಿದ್ದು ಗೊತ್ತೆ ಆಗಲಿಲ್ಲ!

ಕಿಡ್ನಾಪ್ ಆಗಿದೇ ಅಂತಲೇ ತಲೆ ಕೆಡಿಸಿಕೊಂಡು ಹುಡುಕಾಡಿದ್ದ ಪೊಲೀಸರು ಸುಮ್ಮನಾಗಿದ್ದಾರೆ. ಇದು‌ ಹೊಸಕೋಟೆ ಬಳಿಯ ರಿಹ್ಯಾಬ್ಲಿಟೇಶನ್ ಸೆಂಟರ್ ಒಂದರ ಕಾರು ಅನ್ನೋದು ಗೊತ್ತಾಗಿದೆ. ಘಟನೆಯ ಬಗ್ಗೆ ರಿಹ್ಯಾಬ್ಲಿಟೇಶನ್ ಸೆಂಟರ್ ಸಿಬ್ಬಂದಿ ಮಾಹಿತಿ  ನೀಡಿದ್ದಾರೆ.

35 ವರ್ಷದ ಯುವಕ ಕುಡಿತದ ಚಟಕ್ಕೆ ಬಿದ್ದಿದ್ದ. ಹಲವು ಬಾರಿ ಮನೆಗೂ ಬರ್ತಾ ಇರ್ಲಿಲ್ಲ. ರಿಹ್ಯಾಬ್ಲಿಟೇಶನ್ ಸೆಂಟರ್ ಗೆ ಕಳಿಸುವ ನಿರ್ಧಾರವನ್ನು ಕುಟುಂಬದವರು ಮಾಡಿದ್ದರು. ಹಲವು ಬಾರಿ ಪ್ರಯತ್ನಿಸಿದ್ರು ತಪ್ಪಿಸಿಕೊಂಡು ಹೋಗಿಬಿಡ್ತಿದ್ದ. ಯುವಕನನ್ನ ಕುಟುಂಬಸ್ಥರೇ ಸೇರಿ  ಚಿಕಿತ್ಸೆಗೆ ಕಳಿಸುವ ಪ್ಲಾನ್ ಮಾಡಿದ್ದರು.  ಎಷ್ಟೇ ಮಾಡಿದ್ದರೂ ಯುವಕ ಕೈಗೆ ಸಿಗುತ್ತಿರಲಿಲ್ಲ. ಈ ಬಾರಿ ಆತನನ್ನ ಬಲವಂತವಾಗಿ ಓಮಿನಿ ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆದರೆ ನೋಡುಗರಿಗೆ ಇದು ಕಿಡ್ನಾಪ್ ಮಾದರಿಯಲ್ಲೇ ಕಂಡಿತ್ತು. ಸ್ಥಳೀಯರು ಭಯಬಿದ್ದು ಕರೆ  ಮಾಡಿದ್ದಾರೆ. 

Gang of Thieves: ಬೈಕ್‌ ಕಳ್ಳರ ತಂಡಕ್ಕೆ ಪೊಲೀಸಪ್ಪನೇ ನಾಯಕ:   ಖಾಕಿ ತೊಟ್ಟು ಕಳ್ಳರ ಹಿಡಿಯಬೇಕಾದ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬ(Police Constable), ಶೋಕಿ ಬದುಕಿನ ಮೋಹಕ್ಕೆ ಸಿಲುಕಿ ಇಬ್ಬರು ಅಪ್ರಾಪ್ತ ಹುಡುಗರನ್ನು ಒಳಗೊಂಡ ಬೈಕ್‌ ಕಳ್ಳರ ತಂಡಕ್ಕೆ ಬಾಸ್‌ ಆದ. ಕಡೆಗೆ ತನ್ನ ಶಿಷ್ಯರು ಬಾರ್‌ನಲ್ಲಿ ಹೇಳಿದ ‘ಸತ್ಯ’ದ ಪರಿಣಾಮ ಇದೀಗ ಜೈಲು(Jail) ಸೇರಿದ್ದ.

ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯ ಕಾನ್‌ಸ್ಟೇಬಲ್‌ ಹೊನ್ನಪ್ಪ ದುರದಪ್ಪ ಮಾಳಗಿ ಅಲಿಯಾಸ್‌ ರವಿ ಎಂಬಾತನೇ ಬೈಕ್‌ ಕಳ್ಳರ ಗ್ಯಾಂಗ್‌(Gang of Thieves) ಸ್ಟಾರ್‌ ಆಗಿದ್ದು, ಕದ್ದ ಬೈಕ್‌ಗಳ ವಿಲೇವಾರಿಗೆ ಸಹಕರಿಸಿದ ಆರೋಪದ ಮೇರೆಗೆ ರಾಜಸ್ಥಾನ(Rajasthan) ಮೂಲದ ಚಿನ್ನಾಭರಣ ವ್ಯಾಪಾರಿ ರಮೇಶ್‌ ಕೂಡಾ ಜೈಲು ಸೇರುವಂತಾಗಿದೆ. ಈ ಕೃತ್ಯದಲ್ಲಿ ಹೊನ್ನಪ್ಪನ ಸಹಚರರಾದ 17 ವರ್ಷದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಪೊಲೀಸರು(Police) ವಿಚಾರಣೆ ನಡೆಸಿದ್ದಾರೆ.

ಇತ್ತೀಚಿಗೆ ಬಾರ್‌ನಲ್ಲಿ ಮದ್ಯ(Alcohol) ಸೇವಿಸುವಾಗ ಅಪ್ರಾಪ್ತರರು, ತಮ್ಮ ಕಳ್ಳತನಕ್ಕೆ ಪೊಲೀಸ್‌ ಬಾಸ್‌ ಎಂದಿದ್ದರು. ಈ ಮಾತು ಕೇಳಿಸಿಕೊಂಡ ಬಾತ್ಮೀದಾರನೊಬ್ಬ ನೀಡಿದ ಮಾಹಿತಿ ಮೇರೆಗೆ ಆ ಇಬ್ಬರು ಹುಡುಗರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬೈಕ್‌ ಕಳ್ಳತನ ಕೃತ್ಯ ಬಯಲಾಗಿದೆ. 

ಪೊಲೀಸ್ ಸಸ್ಪೆಂಡ್:   ಶ್ವಾನಗಳಿಗೆ ಊಟ ಹಾಕಲು ಬಂದ ಮಹಿಳೆಗೆ (Woman) ಮರ್ಮಾಂಗ (Private Part) ತೋರಿಸಿ ವಿಕೃತಿ (Sexual Harassment) ಮೆರೆದಿದ್ದ  ಆರೋಪ ಹೊತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿತ್ತು. 

ಅಮೃತಹಳ್ಳಿ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಅಮಾನತಾಗಿದ್ದರು.  ತಡರಾತ್ರಿ ಯಲಹಂಕ ನ್ಯೂಟೌನ್ ನ ಹೌಸಿಂಗ್ ಬೋರ್ಡ್ ಬಳಿಯಲ್ಲಿ ಘಟನೆ ನಡೆದಿತ್ತು. 

ಬರ್ತ್ ಡೇ ಪಾರ್ಟಿ ಮುಗಿಸಿ ಚಂದ್ರಶೇಖರ್ ಮೂತ್ರವಿಸರ್ಜನೆಗೆ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬೀದಿ ಬದಿಯ ನಾಯಿಗಳಿಗೆ ಊಟ ನೀಡಲು ಬಂದಿದ್ದರು. ಈ ಸಮಯಲ್ಲಿ ಚಂದ್ರಶೇಖರ್ ಮಹಿಳೆಗೆ ಮರ್ಮಾಂಗ ತೋರಿಸಿ ಅನುಚಿತವಾಗಿ ವರ್ತಿಸಿರುವ ಆರೋಪ ಬಂದಿದೆ. ಸದ್ಯ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ  IPC ಸೆಕ್ಷನ್ 354(a) (ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ) ನಿಯಮದಡಿ ಪ್ರಕರಣ ದಾಖಲಾಗಿತ್ತು  ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಹ ಹಂಚಿಕೊಳ್ಳಲಾಗಿತ್ತು

Follow Us:
Download App:
  • android
  • ios