ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌ ಸೇರಿದಂತೆ ಎಲ್ಲ ಆರೋಪಿಗಳಿಗೆ ರಾತ್ರಿ ಪೊಲೀಸರು ಬಿರಿಯಾನಿ ಊಟ ತರಿಸಿ ಕೊಟ್ಟಿದ್ದರು. 12 ಆರೋಪಿಗಳಿಗೆ ಚಿಕ್ಕಪೇಟೆಯ ದೊನ್ನೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇವರ ಜೊತೆಗೆ ಪಶ್ಚಿಮ ವಿಭಾಗ ಪೊಲೀಸರು ತಮಗೂ ಊಟ ತರಿಸಿಕೊಂಡಿದ್ದರು. 

ಬೆಂಗಳೂರು(ಜೂ.12): ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರ ಎರಡನೇ ಪತ್ನಿ ಪವಿತ್ರಾ ಗೌಡ ಮತ್ತು ನಟನ ಆಪ್ತರು ಸೇರಿ 13 ಮಂದಿಗೆ 6 ದಿನ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ.

ಹೀಗಾಗಿ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌ ಸೇರಿದಂತೆ ಎಲ್ಲ ಆರೋಪಿಗಳಿಗೆ ನಿನ್ನೆ(ಮಂಗಳವಾರ) ರಾತ್ರಿ ಪೊಲೀಸರು ಬಿರಿಯಾನಿ ಊಟ ತರಿಸಿ ಕೊಟ್ಟಿದ್ದರು. 12 ಆರೋಪಿಗಳಿಗೆ ಚಿಕ್ಕಪೇಟೆಯ ದೊನ್ನೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇವರ ಜೊತೆಗೆ ಪಶ್ಚಿಮ ವಿಭಾಗ ಪೊಲೀಸರು ತಮಗೂ ಊಟ ತರಿಸಿಕೊಂಡಿದ್ದರು. 

ಮರ್ಮಾಂಗದ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿ: ದರ್ಶನ್‌ ಸಿಟ್ಟಿಗೇಳಲು ಇದೇ ಕಾರಣವಂತೆ!

ಆರೋಪಿಗಳು ಮಲಗಲು ಪೊಲೀಸರು ಬೆಡ್ ಶೀಟ್, ತಲೆ ದಿಂಬು ತರಿಸಿಕೊಟ್ಟಿದ್ದಾರೆ. ಆರೋಪಿಗಳಿಗೆ ಬೆಡ್ ಶೀಟ್, ತಲೆ ದಿಂಬು, ನೀರಿನ ವ್ಯವಸ್ಥೆಯನ್ನ ಪೊಲೀಸರು ಮಾಡಿದ್ದರು. ಅಲ್ಲದೇ ಆರೋಪಿಗಳಿಗೆ ಡೋಲೊ 650 ಮಾತ್ರೆ ಕೂಡ ನೀಡಲಾಗಿದೆ. ಆರೋಪಿಗಳು ಮೈಕೈ ನೋವು ಅಂತಾ ಟ್ಯಾಬ್ಲೆಟ್ ತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.