ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸಾವು; ಕುಟುಂಬಸ್ಥರ ಆಕ್ರಂದನ ಕಂಡು ಕಾರು ನಿಲ್ಲಿಸಿ ಸಾಂತ್ವನ ಹೇಳಿದ ಗೃಹ ಸಚಿವ
ತುಮಕೂರು: ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸಾವು. ಜನಸಂದಣಿ ಕಂಡು ರಸ್ತೆ ಮಧ್ಯೆ ಕಾರು ನಿಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಗೃಹ ಸಚಿವ ಪರಮೇಶ್ವರ. ಸ್ಥಳದಲ್ಲೇ ಇದ್ದು ಪೊಲಿಸರಿಗೆ ಕರೆ ಮಾಡಿ ಕರೆಸಿಕೊಂಡು ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ ಬಳಿಕವೇ ತೆರಳಿದರು.
ತುಮಕೂರು (ಮಾ.23): ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಲೋಕಮ್ಮನಹಳ್ಳಿ ಗೇಟ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮಹಿಳೆಯೋರ್ವಳು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ನಡೆದಿದೆ ಇದೇ ವೇಳೆ ತುರುವೇಕೆರೆಯಲ್ಲಿ ಚುನಾವಣಾ ಪ್ರಚಾರ ಸಭೆ ಮುಗಿಸಿ ತುಮಕೂರಿಗೆ ವಾಪಸ್ ಆಗುತ್ತಿದ್ದ ಗೃಹ ಸಚಿವ ಪರಮೇಶ್ವರ್, ರಸ್ತೆಯಲ್ಲಿ ಜನಸಂದಣಿ ನೋಡಿ, ತಕ್ಷಣ ಕಾರು ನಿಲ್ಲಿಸಿ ಮೃತ ಮಹಿಳೆ ಕುಟುಂಬಸ್ಥರ ನೋವಿಗೆ ಸ್ಪಂದಿಸಿ ಸಾಂತ್ವನ ಹೇಳಿದರು.
ಅಪಘಾತ ನಡೆದ ಸ್ಥಳದಿಂದಲೇ ತುರುವೇಕೆರೆ ಠಾಣೆ ಪೊಲೀಸರಿಗೆ ಕರೆ ಮಾಡಿ ಇನ್ಸ್‌ಪೆಕ್ಟರ್ ಲೋಹಿತ್ ಅವರನ್ನ ಸ್ಥಳಕ್ಕೆ ಕರೆಯಿಸಿಕೊಂಡರು. ಬಳಿಕ ಅಪಘಾತ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸುವಂತೆ ಸೂಚನೆ ನೀಡಿದರು. ಈ ವೇಳೆ ಶಾಸಕ ಎಸ್‌ಆರ್ ಶ್ರೀನಿವಾಸ, ಪಾವಗಡ ಶಾಸಕ ವೆಂಕಟೇಶ್ ಸೇರಿದಂತೆ ಹಲವು ನಾಯಕರು ಗೃಹ ಸಚಿವರ ಜೊತೆಗಿದ್ದು ಸಾಥ್ ನೀಡಿದರು.
ಭೀಕರದ ರಸ್ತೆ ಅಪಘಾತದಲ್ಲಿ ನಟಿ ಅರುಂಧತಿಗೆ ಗಂಭೀರ ಗಾಯ, ವೆಂಟಿಲೇಟರ್ ನೆರವಿನಲ್ಲಿ ಚಿಕಿತ್ಸೆ!