ನಗರದಲ್ಲಿ ಬೈಕ್‌ ಕಳ್ಳತನದಲ್ಲಿ ತೊಡಗಿದ್ದ ಪ್ರೇಮಿಜೋಡಿ ಸೇರಿದಂತೆ ಮೂವರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಶ್ರೀರಾಂಪುರದ ಮುರುಗನ್‌, ಆತನ ಪ್ರಿಯತಮೆ ಯಾಸ್ಮಿನ್‌ ಹಾಗೂ ಸಹಚರ ಮತ್ತಿಕೆರೆಯ ಮುರುಳಿ ಬಂಧಿತರು.

ಬೆಂಗಳೂರು (ಏ.27): ನಗರದಲ್ಲಿ ಬೈಕ್‌ ಕಳ್ಳತನದಲ್ಲಿ ತೊಡಗಿದ್ದ ಪ್ರೇಮಿಜೋಡಿ ಸೇರಿದಂತೆ ಮೂವರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಶ್ರೀರಾಂಪುರದ ಮುರುಗನ್‌, ಆತನ ಪ್ರಿಯತಮೆ ಯಾಸ್ಮಿನ್‌ ಹಾಗೂ ಸಹಚರ ಮತ್ತಿಕೆರೆಯ ಮುರುಳಿ ಬಂಧಿತರಾಗಿದ್ದು, ಆರೋಪಿಗಳಿಂದ 1 ಲಕ್ಷ ರು ಮೌಲ್ಯದ 2 ಮೊಬೈಲ್‌ ಹಾಗೂ 3 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಮಲ್ಲೇಶ್ವರದ 15ನೇ ಅಡ್ಡರಸ್ತೆಯ ಎಂಇಎಸ್‌ ಕಾಲೇಜು ಬಳಿ ವಿದ್ಯಾರ್ಥಿ ಕೌಶಿಕ್‌ ಬಳಿ ಮೊಬೈಲ್‌ ದೋಚಿ ಕಿಡಿಗೇಡಿಗಳು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಮುರುಗನ್‌ ತಂಡವನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬೈಕ್‌ ಕಳವು ಬಯಲಾಗಿದೆ.

ಪ್ರಿಯತಮೆಗೆ ಬೈಕ್‌ ಕಳವು ಕಲಿಸಿದ: ಮರುಗನ್‌ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಎರಡು ವರ್ಷಗಳ ಹಿಂದೆ ದ್ವಿಚಕ್ರ ಕಳವು ಪ್ರಕರಣದಲ್ಲಿ ಆತನನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದ ಮತ್ತೆ ತನ್ನ ಚಾಳಿಯನ್ನು ಆತ ಮುಂದುವರೆಸಿದ್ದ. ಹೀಗಿರುವಾಗ ಕೆಲ ತಿಂಗಳ ಹಿಂದೆ ಆತನಿಗೆ ತನ್ನ ಗೆಳೆಯನ ಮೂಲಕ ಅನಾಥೆ ಯಾಸ್ಮಿನ್‌ ಪರಿಚಯವಾಗಿದೆ. ತರುವಾಯ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಆಗ ಸುಲಭವಾಗಿ ಹಣ ಸಂಪಾದನೆಗೆ ಪ್ರಿಯತಮೆಯನ್ನು ತನ್ನ ಅಪರಾಧ ಕೃತ್ಯಗಳಿಗೆ ಮುರುಗನ್‌ ಬಳಸಿದ್ದಾನೆ.

ಪ್ರಧಾನಿ ಮೋದಿ ಹೆಸರಿಂದಲೇ ವಿರೋಧಿಗಳಲ್ಲಿ ನಡುಕ: ಸಂಸದ ಮುನಿಸ್ವಾಮಿ

ನಕಲಿ ಕೀ ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುವ ದ್ವಿಚಕ್ರ ವಾಹನಗಳನ್ನು ಹೇಗೆ ಕಳ್ಳತನ ಮಾಡುವುದು ಎಂಬುದನ್ನು ಯಾಸ್ಮಿನ್‌ಗಳಿಗೆ ಆತ ಕಲಿಸಿದ್ದ. ಅಂತೆಯೇ ಮಲ್ಲೇಶ್ವರ, ಶ್ರೀರಾಮಪುರ ಹಾಗೂ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಪ್ರೇಮ ಜೋಡಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದರು. ಬಳಿಕ ಕದ್ದ ವಾಹನಗಳನ್ನು ಮುರುಳಿ ಮೂಲಕ ಮುರುಗನ್‌ ವಿಲೇವಾರಿ ಮಾಡಿಸಿದ್ದರು. ಹೀಗೆ ಸಂಪಾದಿಸಿದ ಹಣದಲ್ಲಿ ಆರೋಪಿಗಳು ಮೋಜು ಮಸ್ತಿ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3 ಕ್ವಿಂಟಾಲ್‌ ಬೆಳ್ಳಿ ಕಳವು: ಕೆಲಸ ಮಾಡುತ್ತಿದ್ದ ಬೆಳ್ಳಿ ಮಾರಾಟ ಮಳಿಗೆಯಲ್ಲಿ ಇಬ್ಬರು ನೌಕರರು 3 ಕ್ವಿಂಟಾಲ್‌ ಬೆಳ್ಳಿ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಹಲಸೂರುಗೇಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಬ್ಬನ್‌ ಪೇಟ್‌ನಲ್ಲಿ ಸಿಟಿ ಸ್ಟ್ರೀಟ್‌ನಲ್ಲಿ ವಿಕೆಎಸ್‌ ಸಿಲ್ವರ್‌ ಮಳಿಗೆಯ ನೌಕರರಾದ ಹರೀಶ್‌ ಮತ್ತು ಮುನ್ನಾ ಮೇಲೆ ಆರೋಪ ಬಂದಿದ್ದು, ಈ ಸಂಬಂಧ ಮಳಿಗೆ ಮಾಲೀಕ ಗೋವಿಂದರಾಜನಗರದ ಕೈಲಾಸ್‌ಚಂದ್‌ ಗಾಂಧಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಬ್ಬನ್‌ ಪೇಟ್‌ನಲ್ಲಿ ಸಿಟಿ ಸ್ಟ್ರೀಟ್‌ನಲ್ಲಿ ವಿಕೆಎಸ್‌ ಸಿಲ್ವರ್‌ ಮಳಿಗೆಯಲ್ಲಿ ಹರೀಶ್‌ ಮತ್ತು ಮುನ್ನಾ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಸರಕಿನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಅಂಗಡಿಯ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಮಂಗಳವಾರ ಮಧ್ಯಾಹ್ನ 3 ಗಂಟೆಯಲ್ಲಿ ಆರೋಪಿತ ನೌಕರರು ಬೆಳ್ಳಿ ಆಭರಣ ಕಳ್ಳವು ಮಾಡುತ್ತಿರುವ ದೃಶ್ಯ ಪತ್ತೆಯಾಗಿದೆ. ಈ ಬಗ್ಗೆ ದಾಖಲೆ ಪತ್ರಗಳನ್ನು ಪರೀಕ್ಷಿಸಿದಾಗ ಅಂದಾಜು .1.65 ಕೋಟಿ ರು ಮೌಲ್ಯದ 300 ಕೇಜಿ ಬೆಳ್ಳಿ ಆಭರಣ ಕಳ್ಳತನ ಮಾಡಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನನಗೆ ಆರೋಗ್ಯಕ್ಕಿಂತ ಅಭ್ಯರ್ಥಿಗಳ ಗೆಲುವು ಮುಖ್ಯ: ಎಚ್‌.ಡಿ.ಕುಮಾರಸ್ವಾಮಿ

ಇಬ್ಬರು ಕಳ್ಳರ ಬಂಧನ: ಇತ್ತೀಚಿಗೆ ಘೋಡಕೆ ಪ್ಲಾಟ್‌ ನಲ್ಲಿ ಚಿನ್ನ-ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಈಚೆಗೆ ಪ್ರಕರಣ ದಾಖಲಿಸಲಾಗಿತ್ತು. ಹುಬ್ಬಳ್ಳಿ ದಕ್ಷಿಣ ಉಪವಿಭಾಗದ ಎಸಿಪಿ ಆರ್‌.ಕೆ. ಪಾಟೀಲ್‌ ಮಾರ್ಗದರ್ಶನದಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಇನ್ಸಪೆಕ್ಟರ್‌ ಎಸ್‌.ಎಚ್‌. ಯಳ್ಳೂರ ನೇತೃತ್ವದ ತಂಡವು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ಆಭರಣ ಸೇರಿ . 52,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಲಾಗಿದೆ.