ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮರ್ಸಿಡೀಸ್ ಬೆಂಜ್ ಭೀಕರ ಅಪಘಾತ; ಬೈಕ್ ಸವಾರ ಸಾವು
ಮರ್ಸಿಡಿಸ್ ಬೆಂಜ್ ಕಾರೊಂದು ವೇಗವಾಗಿ ಚಲಿಸಿ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಬೆಂಗಳೂರಿನ ಜೆಪಿ ನಗರದ 8ನೇ ಪೇಸ್‌ನಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿದ್ದ ಬೈಕ್ ಸವಾರ ರಾಜೇಂದ್ರ(46) ಚಿಕಿತ್ಸೆ ಫಲಿಸದೇ ಸಾವು.

ಬೆಂಗಳೂರು (ಅ.28): ಮರ್ಸಿಡಿಸ್ ಬೆಂಜ್ ಕಾರೊಂದು ವೇಗವಾಗಿ ಚಲಿಸಿ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಬೆಂಗಳೂರಿನ ಜೆಪಿ ನಗರದ 8ನೇ ಪೇಸ್‌ನಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿದ್ದ ಬೈಕ್ ಸವಾರ ರಾಜೇಂದ್ರ(46) ಚಿಕಿತ್ಸೆ ಫಲಿಸದೇ ಸಾವು.
ಡಿಕ್ಕಿಯಾಗಿರುವ ಡಿಕ್ಕಿಯಾದ ರಭಸಕ್ಕೆ ಕಾರಿನ ಮೇಲೆ ಬಂದು ಬಿದ್ದಿರುವ ಬೈಕ್ ಸವಾರ. ಗೊಯೇಲ್ ಎಜುಕೇಷನ್ ಟ್ರಸ್ಟ್ ಗೆ ಸೇರಿದ ಕಾರು. ಮುಂದೆ ಚಲಿಸುತ್ತಿದ್ದ ಬೈಕ್ ಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದ ಬೆಂಜ್ ಕಾರು. ಅಪಘಾತ ಬಳಿಕ ಕಾರಿನ ಡ್ರೈವರ್ ಬೈಕ್ ಸವಾರನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಬೈಕ್ ಸವಾರ.
ಬ್ರೇಕ್ ಬದಲು ಎಕ್ಸ್‌ಲೇಟರ್ ತುಳಿದ ಚಾಲಕ; ಕಂಬಕ್ಕೆ ಡಿಕ್ಕಿಯಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂ
ಚಿಕ್ಕಲಸಂದ್ರ ನಿವಾಸಿಯಾಗಿರುವ ಮೃತ ರಾಜೇಂದ್ರ ಗೊಟ್ಟಿಗೆರೆಯಲ್ಲಿ ಫ್ಯಾಬ್ರಿಕೇಷನ್ ಶಾಪ್ ಹೊಂದಿದ್ದ. ಕೋಣನಕುಂಟೆ ಕ್ರಾಸ್ ನಿಂದ ಗೊಟ್ಟಿಗೆರೆಗೆ ತೆರಳ್ತಿದ್ದ. ಕೆ.ಎಸ್.ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಅಪಘಾತದ ಬಳಿಕ ನಾಪತ್ತೆಯಾದ ಬೆಂಜ್ ಕಾರು ಚಾಲಕ. ಕೆ.ಎಸ್.ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು. ಆರೋಪಿ ಕಾರು ಚಾಲಕ ರಿತೇಶ್ ಪತ್ತೆಗೆ ಪೊಲೀಸರಿಂದ ಶೋಧ.