ಬ್ರೇಕ್ ಬದಲು ಎಕ್ಸ್‌ಲೇಟರ್ ತುಳಿದ ಚಾಲಕ; ಕಂಬಕ್ಕೆ ಡಿಕ್ಕಿಯಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂ
ಕಾರಿನ ಚಾಲಕನ ನಿಯಂತ್ರಣ ತಪ್ಪಿ ಕಾರು ಕಂಬಕ್ಕೆ ಗುದ್ದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಕಾರ್ಪೋರೇಷನ್ ಸಿಗ್ನಲ್ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.

ಬೆಂಗಳೂರು (ಅ.24): ಕಾರಿನ ಚಾಲಕನ ನಿಯಂತ್ರಣ ತಪ್ಪಿ ಕಾರು ಕಂಬಕ್ಕೆ ಗುದ್ದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಕಾರ್ಪೋರೇಷನ್ ಸಿಗ್ನಲ್ ಬಳಿ ನಡೆದಿದೆ.
ಸಾಧಿಕ್ ಎಂಬಾತ ಚಲಾಯಿಸುತ್ತಿದ್ದ ಕಾರು. ಕಾರಿನಲ್ಲಿ ತಾಯಿ ಜೊತೆ ಮನೆಗೆ ತೆರಳುತ್ತಿದ್ದ. ಕಾರ್ಪೋರೇಷನ್ ಸಿಗ್ನಲ್ ಬಳಿ ಬರುತ್ತಿದ್ದಂತೆ ಬ್ರೇಕ್ ಎಂದುಕೊಂಡು ಎಕ್ಸ್‌ಲೇಟರ್ ಕೊಟ್ಟಿದ್ದ ಚಾಲಕ. ವೇಗವಾಗಿ ಎದುರಿನ ಕಂಬಕ್ಕೆ ಗುದ್ದಿದ ಕಾರು. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿಯೊಳಗಿದ್ದ ಚಾಲಕ ಸಾಧಿಕ್, ತಾಯಿಗೆ ಯಾವುದೇ ತೊಂದರೆಯಾಗಿಲ್ಲ. ಅದೃಷ್ಟವಶಾತ್ ಅಕ್ಕಪಕ್ಕದ ಯಾವುದೇ ವಾಹನಕ್ಕೂ ಡ್ಯಾಮೇಜ್ ಆಗಿಲ್ಲ. ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.
ಬಸ್ ಉರುಳಿಬಿದ್ದು 24 ಮಂದಿಗೆ ಗಾಯ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು!