* ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಅಸಭ್ಯ ವರ್ತನೆ* ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ಮೆಡಿಕಲ್ ವಿದ್ಯಾರ್ಥೀ* ಅಮೃತಹಳ್ಳಿ ಪೊಲೀಸರಿಂದ ಆರೋಪಿ ಭಾರದ್ವಾಜ್ ಬಂಧನ* ಬಿಹಾರ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಎಂಎಸ್ ಓದುತ್ತಿದ್ದ
ಬೆಂಗಳೂರು(ಡಿ. 14) ಕಾರಲ್ಲಿ ಹಿಂಬಾಲಿಸಿ ಯುವತಿ ಜೊತೆಗೆ ಅಸಭ್ಯವರ್ತನೆ ತೋರಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಅಮೃತಹಳ್ಳಿ(Bengaluru Police) ಪೊಲೀಸರು ಆರೋಪಿ ವಿಜಯ ಭಾರದ್ವಾಜ್ ಎಂಬಾತನನ್ನು ಬಂಧಿಸಿದ್ದಾರೆ.
ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಅಸಭ್ಯ ವರ್ತನೆ ತೋರಿದ್ದ. ಡಿಸೆಂಬರ್ 11 ರ ಬೆಳಗಿನ ಜಾವ 2 ರಿಂದ 4 ಗಂಟೆಗೆ ಸುಮಾರಿಗೆ ನಡೆದ ಘಟನೆ ನಡೆದಿತ್ತು. ಬಿಹಾರ (bihar)ಮೂಲದ ವಿಜಯ್ ಭಾರದ್ವಾಜ್ ಬೆಂಗಳೂರಲ್ಲಿ ಎಂಬಿಬಿಎಸ್ (MBBS)ಮುಗಿಸಿ ಎಂಎಸ್ (MS)ಓದುತ್ತಿದ್ದ. ಕಿಮ್ಸ್ ಕಾಲೇಜಿನಲ್ಲಿ ಎಂಎಸ್ ವಿದ್ಯಾರ್ಥಿಯಾಗಿರುವ ಆಸಾಮಿ ಕುಡಿದ ಮತ್ತಿನಲ್ಲಿ ಮನಸಿಗೆ ಬಂದಂತೆ ವರ್ತನೆ ತೋರಿದ್ದ.
ಕುಡಿದ ಮತ್ತಲ್ಲಿ ಅಸಭ್ಯವಾಗಿ ನಡೆದಿರೋದಾಗಿ ತಪ್ಪೊಪ್ಪಿಗೆ ನೀಡಿದ್ದಾನೆ. ಈತನ ಕಾಟಕ್ಕೆ ಹೈರಾಣಾಗಿದ್ದ ದೀಪಾ ಶ್ರೀಕುಮಾರ್ ಕುಟುಂಬ ಪೊಲೀಸರಿಗೆ ಗಾಬರಿಯಿಂದಲೇ ಕರೆ ಮಾಡಿತ್ತು. ದೀಪಾ ಶ್ರೀಕುಮಾರ್ ರವರ 21 ವರ್ಷದ ಮಗಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ. ಕಾರಿಲ್ಲಿ ಮುಂದೆ ಸಾಗಿದ್ದರೂ ಫಾಲೊ ಮಾಡಿ ಹಿಂಸೆ ಕೊಟ್ಟಿದ್ದ. ಘಟನೆ ಸಂಬಂಧ ಅಮೃತಹಳ್ಳಿ ಠಾಣೆಗೆ ದೀಪಾ ದೂರು ನೀಡಿದ್ದರು.
ತುಮಕೂರಿನ ಪ್ರಕರಣ: ರೈಲ್ವೆ ನಿಲ್ದಾಣದಲ್ಲಿ (Indian Railways) ಹೆಣ್ಣು ಮಕ್ಕಳ ಮುಂದೆ ಅಸಭ್ಯವಾಗಿ (Sexual Harassment) ವರ್ತಿಸುತ್ತಿದ್ದ ವ್ಯಕ್ತಿಗೆ ಸರಿಯಾಗಿ ಧರ್ಮದೇಟು ಬಿದ್ದಿತ್ತು. ತುಮಕೂರಿನ (Tumkur) ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಘಟನೆ ನಡೆದಿದೆ.
ನಟಿಯ ಬೆಡ್ ರೂಂ ನಲ್ಲಿ ಸಿಕ್ಕ ಸೆಕ್ಸ್ ಟಾಯ್ ಹೇಳಿದ ಮತ್ತೊಂದು ಕತೆ
ಶಾಲೆಯಿಂದ ಬರುವ ಹೆಣ್ಣು ಮಕ್ಕಳನ್ನ (Students)ಕಾಮುಕ ದೃಷ್ಟಿಯಿಂದ ಚೂಡಾಯಿಸುತ್ತಿದ್ದ ಕೀಚಕ ಕೈಯಲ್ಲಿ ಬಿಸ್ಕತ್ ಹಿಡಿದುಕೊಂಡು ಹೆಣ್ಣು ಮಕ್ಕಳನ್ನ ಕರೆಯುತ್ತಿದ್ದ. ಹತ್ತಿರ ಬಂದರೆ ತನ್ನ ಪ್ಯಾಂಟ್ ತೆಗೆದು ಅಸಭ್ಯವಾಗಿ ವರ್ತಿಸುತ್ತಿದ್ದ. ಈತನ ವರ್ತನೆ ಗಮನಿಸುತ್ತಿದ್ದ ಸಾರ್ವಜನಿಕರು ಹಿಡಿದು ಸರಿಯಾಗಿ ಗೂಸಾ ನೀಡಿದ್ದರು. ಭಿಕ್ಷೆ ಬೇಡುತ್ತಿದ್ದವ ಏಕಾಏಕಿ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದು ಜನರೇ ಗೂಸಾ ಕೊಟ್ಟಿದ್ದರು.
ಮಳವಳ್ಳಿ ಪ್ರಕರಣ: ಮಂಡ್ಯ (Mandya) ಜಿಲ್ಲೆ ಮಳವಳ್ಳಿ (Malavalli) ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರೊಬ್ಬರು ಎಸ್ಸೆಸ್ಸೆಲ್ಸಿ(SSLC) ವಿದ್ಯಾರ್ಥಿನಿಯರ (Students) ಜತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದಿತ್ತು.
ಗ್ರಾಪಂ ಪಿಡಿಒ (PDO) ಸಿದ್ದರಾಜು ಅವರಿಗೆ ವಿದ್ಯಾರ್ಥಿನಿಯರು ಮುಖ್ಯಶಿಕ್ಷಕ ಬೋರಯ್ಯ ಅಸಭ್ಯವಾಗಿ ವರ್ತಿಸಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಶಾಲೆಗೆ (School) ಗ್ರಾಪಂ ಅಧ್ಯಕ್ಷ ಚಿಕ್ಕಣ್ಣಶೆಟ್ಟಿ ಅವರ ಜತೆ ಪಿಡಿಒ ತೆರಳಿ ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ವಿದ್ಯಾರ್ಥಿನಿಯರು ಏನು ಹೇಳದೇ ಮೌನವಾಗಿದ್ದರು.
ನಿವೇಶನಕ್ಕೆಂದು ಅರ್ಜಿ ನೀಡಲು ಬಂದಿದ್ದ ಮಹಿಳೆಗೆ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ಲೈಂಗಿಕ ಕಿರುಕುಳ (sexual harassment) ನೀಡಿರುವ ಘಟನೆ ಉಳ್ಳಾಲ ಮುನ್ನೂರು ಗ್ರಾಮ ಪಂಚಾಯಿತಿಯಿಂದ ವರದಿಯಾಗಿತ್ತು. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿತ್ತು.
ಮಹಿಳೆಯೊಬ್ಬರು (woman) ನಿವೇಶನದ ಅರ್ಜಿ ನೀಡಲು ಪಂಚಾಯಿತಿಗೆ ಬಂದಿದ್ದು ಅಲ್ಲಿ ಇದ್ದ ಪಂಚಾಯಿತಿ ಸದಸ್ಯ ಬಾಬು ಶೆಟ್ಟಿಆ ಮಹಿಳೆಯನ್ನು ನೇರ ಅಧ್ಯಕ್ಷ ಡಿಸೋಜ ಕೊಠಡಿಗೆ ಕರೆದುಕೊಂಡು ಹೋಗಿದ್ದರು. ಅಧ್ಯಕ್ಷರು ಈ ಸಂದರ್ಭದಲ್ಲಿ ಹೊರ ಬಂದಿದ್ದರು. ಈ ಸಂದರ್ಭ ಮಹಿಳೆಯೊಂದಿಗೆ ಇದ್ದ ಮಕ್ಕಳನ್ನು ಹೊರಗೆ ಕಳುಹಿಸಿದ ಬಾಬು ಶೆಟ್ಟಿಅಧ್ಯಕ್ಷರು ಬರುವವರೆಗೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕುರಿತ ದೃಶ್ಯಾವಳಿ ಗ್ರಾ.ಪಂ ಸಿ.ಸಿ. ಟಿ.ವಿ (CCTV).ಯಲ್ಲಿ ದಾಖಲಾಗಿತ್ತು.
ಹಾಸನದ ಪ್ರಕರಣ: ಹಾಸನದ ಅಂಗಡಿಯೊಳಗೆ ನುಗ್ಗಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚು ಹಸ್ತ ಮೈಥುನ ಮಾಡಿಕೊಂಡಿದ್ದ ಪ್ರಕರಣವೂ ನಡೆದಿತ್ತು. ಕ್ಯಾಷ್ ಕೌಂಟರ್ ಎದುರು ಕುಳಿತಿದ್ದ ಮಹಿಳೆ ಎದುರಿಗೆ ಹೋಗಿ ಆರೋಪಿ ವಿಚಿತ್ರವಾಗಿ ನಡೆದುಕೊಂಡಿದ್ದ.
