ದಿನೇಶ್ ಆತನ ಗೆಳೆಯ ಭೀಮನ ಜೊತೆ ಸೇರಿ ಭಾನುಪ್ರಕಾಶ್‌ನ ಕತ್ತು ಸೀಳಿ ಕೊಲೆ ಮಾಡಿದ್ದರು. ಗ್ರಾಮದ ಹೊರ ವಲಯದಲ್ಲಿ ಶವ ಬಿಟ್ಟು ಡ್ರ್ಯಾಗರ್ ಕಬಿನಿ ನದಿಗೆ ಬಿಸಾಕಿದ್ದರು. ಈ ಕೊಲೆಯನ್ನು ಅದೇ ಗ್ರಾಮದ ಎನ್.ಪ್ರಕಾಶ್ ಎಂಬುರವ ಮೇಲೆ ಬರುವಂತೆ ಮಾಡಿದ್ದ. ಕೊನೆಗೆ ಮೊಬೈಲ್ ಟವರ್ ಲೊಕೇಶನ್ ಮೂಲಕ ಕೊಲೆ ಆರೋಪಿಯನ್ನ ಪತ್ತೆ ಹಚ್ಚಿದ ಪೊಲೀಸರು 

ಮೈಸೂರು(ಸೆ.02):  ಗೃಹಿಣಿಗೆ ಮೆಸೇಜ್ ಮಾಡಿದಕ್ಕೆ ಯುವಕನ ಕೊಲೆ ಪ್ರಕರಣಕ್ಕೆ‌ ರೋಚಕ ತಿರುವು ಪಡೆದುಕೊಂಡಿದೆ. ಹೌದು, ಮತ್ತೊಬ್ಬನ ಮೇಲೆ ದ್ವೇಷ ತೀರಿಸಿಕೊಳ್ಳಲು ಕಿರಾತಕ ಸ್ನೇಹಿತನನ್ನೇ ಕೊಲೆ ಮಾಡಿ ಮತ್ತೊಬ್ಬರ ಮೇಲೆ ಎತ್ತಿ ಹಾಕಲು ಪ್ಲಾನ್‌ ಮಾಡಿದ ಅಂತ ಬೆಳಕಿಗೆ ಬಂದಿದೆ. 

ಪ್ರಕರಣದ ಹಿನ್ನಲೆ: 

ಹೆಂಡತಿಗೆ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಮೈಸೂರು ಜಿಲ್ಲೆಯ ಹೆಚ್‌ಡಿ.ಕೋಟೆ ತಾಲೂಕಿನ ನೇರಳೆಹುಂಡಿ ಗ್ರಾಮದಲ್ಲಿ ಭಾನುಪ್ರಕಾಶ್ ಎಂಬ ಯುವಕನ‌ನ್ನ ಕೊಲೆ ಮಾಡಲಾಗಿತ್ತು. ಯುವಕನ ಕೊಲೆ ಸಂಬಂಧ ಗಲಾಟೆ ಮಾಡಿದ್ದ 6 ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಭಾನುಪ್ರಕಾಶ್ ಕೊಲೆ ಮಾಡಿದ್ದು ಆತನ ಸ್ನೇಹಿತ ದಿನೇಶ್ ಎಂಬುದು ಇದೀಗ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. 

ಮಗು ಪಡೆಯಲು 11 ವರ್ಷ ತಪಸ್ಸು ಮಾಡಿದ ತಾಯಿ : ಆಸ್ತಿಗಾಗಿ ಐದೇ ತಿಂಗಳಿಗೆ ಬಲಿ ಪಡೆದಳು ಮಲತಾಯಿ

ದಿನೇಶ್ ಆತನ ಗೆಳೆಯ ಭೀಮನ ಜೊತೆ ಸೇರಿ ಭಾನುಪ್ರಕಾಶ್‌ನ ಕತ್ತು ಸೀಳಿ ಕೊಲೆ ಮಾಡಿದ್ದರು. ಗ್ರಾಮದ ಹೊರ ವಲಯದಲ್ಲಿ ಶವ ಬಿಟ್ಟು ಡ್ರ್ಯಾಗರ್ ಕಬಿನಿ ನದಿಗೆ ಬಿಸಾಕಿದ್ದರು. ಈ ಕೊಲೆಯನ್ನು ಅದೇ ಗ್ರಾಮದ ಎನ್.ಪ್ರಕಾಶ್ ಎಂಬುರವ ಮೇಲೆ ಬರುವಂತೆ ಮಾಡಿದ್ದ. ಕೊನೆಗೆ ಮೊಬೈಲ್ ಟವರ್ ಲೊಕೇಶನ್ ಮೂಲಕ ಕೊಲೆ ಆರೋಪಿಯನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕೊಲೆಗೆ ಆರೋಪಿ ದಿನೇಶ್ ಹಾಗೂ ಎನ್.ಪ್ರಕಾಶ್ ನಡುವೆ ಹಳೆ ದ್ವೇಷದಿಂದ ಆತ್ಮೀಯ ಸ್ನೇಹಿತನನ್ನ ದಿನೇಶ್ ಕೊಂದಿದ್ದಾನೆ. ಈ ಸಂಬಂಧ ಅಂತರಸಂತೆ ಪೊಲೀಸರು ಆರೋಪಿಗಳ ಬಂಧಿಸಿದ್ದಾರೆ.