ಬೀದರ್, (ಜ.24): ಬೈಕ್ ಹಾಗೂ ಸರ್ಕಾರಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಆರ್.ಎಸ್.ಎಸ್. ಹಿರಿಯ ಮುಖಂಡ ಸುಧಾಕರ ದೇಶಪಾಂಡೆ ಸಾವನ್ನಪ್ಪಿದ್ದಾರೆ.

ಬೀದರ್ ಜಿಲ್ಲೆ, ಭಾಲ್ಕಿ ತಾಲೂಕಿನ ಭಾತಂಬ್ರಾ ರಸ್ತೆಯಲ್ಲಿ ಇಂದು (ಭಾನುವಾರ) ಈ ದುರ್ಘಟನೆ ಸಂಭವಿಸಿದೆ. ಬೈಕ್ ಹಾಗೂ ಸರ್ಕಾರಿ ಬಸ್ ನಡುವೆ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಸುಧಾಕರ ದೇಶಪಾಂಡೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. 

ಧಾರವಾಡ ಬಳಿ ಮಿನಿ ಬಸ್- ಟಿಪ್ಪರ್ ಡಿಕ್ಕಿ ಪ್ರಕರಣ: ಗಾಯಗೊಂಡಿದ್ದ ಮಾಜಿ ಶಾಸಕನ ಸೊಸೆ ಸಾವು...

ಘಟನೆಯಲ್ಲಿ ಇವರ ಜತೆಗಿದ್ದ ಇನ್ನೋರ್ವ ವ್ಯಕ್ತಿಗೆ ಸಹ ಗಾಯಗಳಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಮೃತ ಸುಧಾಕರ್ ದೇಶಪಾಂಡೆ ಅವರು  ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ  ಸಕ್ರಿಯವಾಗಿದ್ದರು.

ಘಟನೆ ಸಂಬಂಧ ಭಾಲ್ಕಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.