Asianet Suvarna News Asianet Suvarna News

ಸೆಕ್ಸ್ ಮೆಸೇಜ್‌ ಬರುತ್ತೆ ಹುಷಾರ್; ಅಪ್ಪಿತಪ್ಪಿ ರಿಪ್ಲೈ ಮಾಡಿದ್ರೆ ನಿಮ್ಮ ಮಾನ ಮೂರು ಕಾಸಿಗೆ ಹರಾಜು!

ಆನ್‌ಲೈನ್ ವಂಚನೆಗಳು ಮಿತಿ ಮೀರಿದ್ದು ಯುವಕರು ಸ್ವಲ್ಪ ಯಾಮಾರಿದರೂ ಮೋಸ ಹೋಗುತ್ತಾರೆ. ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದೆ. ಇಲ್ಲೊಂದು ಗ್ಯಾಂಗ್ ಯುವಕರ ಮೊಬೈಲ್‌ಗಳಿಗೆ ಸೆಕ್ಸ್‌ ಚಾಟ್, ವಿಡಿಯೋ ಚಾಟ್ ಮೂಲಕ ಹಣ ಸುಲಿಗೆ ಮಾಡುವ ದಂಧೆ ಬಳ್ಳಾರಿಯಲ್ಲಿ ಸಕ್ರಿಯವಾಗಿದೆ. 

Beware of Online Sextortion Dont reply msg or call ballari crime
Author
First Published Sep 2, 2022, 2:13 PM IST

ವರದಿ ; ನರಸಿಂಹ ಮೂರ್ತಿ ಕುಲಕರ್ಣಿ
   ಬಳ್ಳಾರಿ (ಸೆ.2) : ಎಚ್ಚರ ಎಚ್ಚರ ಕೂತ್ರೂ ಆನ್ ಲೈನ್.. ನಿಂತ್ರೂ ಆನ್ಲೈನ್. ಎಲ್ಲ ವ್ಯವಹಾರವೂ ಆನ್‌ಲೈನ್ ಅನ್ನೋರು ಈ ಸುದ್ದಿಯನ್ನು ನೋಡಲೇಬೇಕು. ಯಾಕಂದ್ರೆ, ಇಲ್ಲಿ ಸ್ವಲ್ಪ ಯಾಮಾರಿದ್ರೂ ದುಡ್ಡು ಕಳೆದುಕೊಳ್ಳೋದಷ್ಟೇ ಅಲ್ಲ, ನಿಮ್ಮ ಮಾನ  ಮರ್ಯಾದೆ ಕೂಡ ಬೀದಿ ಪಾಲಾಗುತ್ತೆ. ಮನೆ ಮಂದಿಯ ಮುಂದೆಯಷ್ಟೆ ಅಲ್ಲ; ಇಡೀ ಸಮಾಜದೆದರು ನಿಮ್ಮ ಮಾನ ಮಾರ್ಯದೆ ಮೂರು ಕಾಸಿಗೆ ಹರಾಜಾಕ್ತಾರೆ. ಅದಕ್ಕೆಂದೇ ಈ ಮಾನಿನೀಯರು ತಯಾರಾಗಿ ನಿಂತಿದ್ದಾರೆ. ಹಣಕೊಡದೇ ಇದ್ರೆ, ನಿಮ್ಮನ್ನು ಬೆತ್ತಲು ಮಾಡೋ ಮೂಲಕ ನಿಮ್ಮ ಜೀವನವನ್ನು ಅಂತ್ಯ ಮಾಡಿಕೊಳ್ಳುವ ಸ್ಥಿತಿ ಬಂದ್ರೂ ಅಚ್ಚರಿಯಿಲ್ಲ ಅನ್ನೋ ಬೆಳವಣಿಗೆ ಸದ್ದಿಲ್ಲದೇ ನಡೆಯುತ್ತಿದೆ. ಇದು ಕೇವಲ ಬಳ್ಳಾರಿಗೆ ಸಂಬಂಧಿಸಿದ ಸುದ್ದಿಯಲ್ಲ ಇಡೀ ರಾಜ್ಯಾದ್ಯಾಂತ ಪುರುಷರನ್ನು ಅದರಲ್ಲೂ ಯುವಕರನ್ನು ಬೆಂಬಿಡದೇ ಕಾಡ್ತಿರೋ ಅದೃಶ್ಯ ರಾಣಿಯರ ಕೈಚಳಕವಾಗಿದೆ.

Bengaluru: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಸುಂದರಿಯಿಂದ ಹನಿಟ್ರ್ಯಾಪ್!

ಮೊಬೈಲ್ ಗೆ ಬರುತ್ತದೆ ಡೇಂಜರ್ ಮೆಸೇಜ್:

ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್(Bank Account Number) ಕೇಳೋದು, ಎಟಿಎಂ ಪಿನ್(ATM Pin) ಕೇಳೋದು ಅದರಿಂದ ಮೋಸ ಮಾಡೋದು ಇದೆಲ್ಲ ಹಳೇ ಟೆಕ್ನಿಕ್. ಇದೀಗ ಹೊಸದೊಂದು ಪ್ಲಾನ್ ಮೂಲಕ ಬರೋ ಆನ್‌ಲೈನ್ ವಂಚಕರು ನಿಮ್ಮಲ್ಲಿರೋ ಹಣದ ಜೊತೆ ನಿಮ್ಮ ಮರ್ಯಾದೆಯನ್ನು ತೆಗೆಯಲು ನಿಂತಿದ್ದಾರೆ. ಹೌದು, ಆರಂಭದಲ್ಲಿ ನಿಮ್ಮ ಮೊಬೈಲ್‌ಗೆ ಸಂದೇಶವೊಂದು ಬರುತ್ತದೆ. ಕೇವಲ ಹಾಯ್ ಅಥವಾ ಹಲೋ ಅನ್ನೋ ಸಂದೇಶದಿಂದ ಆರಂಭವಾಗೋ  ಈ  ಆಟ ನಿಮ್ಮಲ್ಲಿರೋ ಹಣ ದೋಚೋದಕ್ಕೆ ನಾಂದಿ ಹಾಡುತ್ತದೆ.

 ಮೊದಲಿಗೆ ಹಾಯ್ ಎನ್ನುವ ಮೂಲಕ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ನಂತರ ನೀವು ಅವರಿಗೆ ರಿಪ್ಲೆ ಮಾಡಿದ್ರೆ ಸಾಕು, ನಿಮಗೆ ಸೆಕ್ಸ್(Sex) ಮಾಡೋಕೆ ಇಷ್ಟವಿದೆಯೇ..? ಸೆಕ್ಸ್ ವಿಡಿಯೋ(Sex Video) ನೋಡಬಯಸುತ್ತೀರಾ ಹಾಗಿದ್ರೇ, ವಿಡಿಯೋ ಕಾಲ್(Video Call) ಮಾಡಿ ಎನ್ನುತ್ತಾರೆ. ಅಪ್ಪಿತಪ್ಪಿ ನೀವೇನಾದ್ರೂ ಪೋನ್ ಮಾಡಿದ್ದೇ ಆದ್ರೆ, ಅಲ್ಲಿಗೆ ನಿಮ್ಮ ಕಥೆ ಮುಗಿತು..!

ವಿಡಿಯೋ ಸಂದೇಶವನ್ನಿಟ್ಟುಕೊಂಡು ಬ್ಲಾಕ್ ಮೇಲ್(Black mail)ಮಾಡುತ್ತಾರೆ

ಆರಂಭದಲ್ಲಿ ಒಂದೆರಡು ಬಾರಿ ವಿಡಿಯೋ ಕಾಲ್ ಮಾಡೋ ಹುಡುಗಿಯರು ನಂತರ ನಿಧಾನವಾಗಿ ಪರಿಚಯ ಬೆಳೆಸಿಕೊಳ್ಳುತ್ತಾರೆ. ನಿಮ್ಮ ಊರು, ವಿಳಾಸ ನಿಮ್ಮ ವೃತ್ತಿ ಸೇರಿದಂತೆ ಎಲ್ಲವನ್ನೂ ತೆಗೆದುಕೊಳ್ಳುತ್ತಾರೆ. ಒಂದೆರಡು ದಿನಗಳ ಕಾಲ ಈ ಆಟ ಮುಂದುವರಿದ ಬಳಿಕ ನೀವು ಸೆಕ್ಸ್ ವಿಡಿಯೋ ನೋಡ್ತಿರೋದನ್ನು ಸ್ಕ್ರೀನ್ ರೆಕಾರ್ಡ್ ಮಾಡೋ ಮೂಲಕ ಅದನ್ನು ನಿಮಗೆ ವಾಟ್ಸಾಪ್ ಸಂದೇಶ ಕಳುಹಿಸುತ್ತಾರೆ. 

ಇಂತಿಷ್ಟು ಹಣವನ್ನು ಕೊಡದಿದ್ರೆ ನೀವು ಸೆಕ್ಸ್ ವಿಡಿಯೋ ನೋಡ್ತಿರೋದನ್ನು ಸಾಮಾಜಿಕ ಜಾಲತಾಣ(Social media) ಗಳಲ್ಲಿ ಅಪ್ಲೋಡ್(Upload) ಮಾಡೋದಾಗಿ ಬೆದರಿಸುತ್ತಾರೆ.  ಐದು ಸಾವಿರದಿಂದ ಪ್ರಾರಂಭವಾಗುವ ಬೇಡಿಕೆ ನಿಧಾನವಾಗಿ ಲಕ್ಷಾಂತರ ಹಣದ ಬೇಡಿಕೆವರೆಗೂ ಹೋಗುತ್ತದೆ. ಇತ್ತ ಹಣ ಕೊಡಲು ಆಗದೇ ಅತ್ತ ವಿಡಿಯೋ ವೈರಲ್ ಆಗೋ ಭೀತಿಯಲ್ಲಿ ಪರದಾಡೋ ಸ್ಥಿತಿ ನಿರ್ಮಾಣವಾಗುತ್ತಿದೆ. 

ಇದು ಕೇವಲ ಬಳ್ಳಾರಿ(Ballari)ಯೋ ಅಥವಾ ಬೆಂಗಳೂರಿ(Bengaluru)ಗೆ ಸೀಮೀತವಾದ ಜಾಲವಲ್ಲ ಈಗಾಗಲೇ ರಾಜ್ಯಾದ್ಯಾಂತ ಅಷ್ಟೇ ಅಲ್ಲ ದೇಶಾದ್ಯಾಂತ ಈ ರೀತಿಯ ಜಾಲ ಸಕ್ರಿಯವಾಗಿದ್ದು, ಅಮಾಯಕ ಪುರುಷರೇ ಇವರ ಟಾರ್ಗೇಟ್ ಆಗಿದ್ದಾರೆ. ಸ್ವಲ್ಪ ಯಾಮಾರಿದ್ರೂ ನಿಮ್ಮ ಮಾನ ಮೂರು ಕಾಸಿಗೆ ಹರಾಜು ಹಾಕೋ ಈ ಖದೀಮರು ನಿಮ್ಮ ಅಕೌಂಟ್‌ನಲ್ಲಿರೋ ಹಣ ಖಾಲಿಯೋಗೋವರೆಗೂ ಬಿಡೋದಿಲ್ಲ. ಈ ಬಗ್ಗೆ ದೂರು ನೀಡೋದಕ್ಕೂ ಮುಜುಗರ ಒಂದು ವೇಳೆ ಸೈಬರ್ ಕ್ರೈಂ (Cyber Crime) ದೈರ್ಯಮಾಡಿ ದೂರು ಕೊಟ್ರೂ ಅದು ಗಂಭೀರ ಸ್ವರೂಪ ಪಡೆದುಕೊಳ್ಳುವುದಿಲ್ಲ. ಹೀಗಾಗಿ ಈ ರೀತಿಯ ಸಂದೇಶದಿಂದ ಎಚ್ಚರದಿಂದ ಇರೋದ್ರ ಜೊತೆ ಯಾವುದಕ್ಕೂ ರಿಪ್ಲೈ ಮಾಡಬಾರದು. ಮಾಡಿದರೇ, ನಿಮ್ಮ ಕಥೆ ಅಲ್ಲಿಗೆ ಮುಗಿತು ಎಂದರ್ಥ.

ವಿಡಿಯೋ ಕಾಲ್‌ನಲ್ಲಿ ಯುವತಿಯ ಮೈಮಾಟಕ್ಕೆ ಸೋತು 90 ಸಾವಿರ ಕಳೆದುಕೊಂಡ ಯುವಕ..

ಒಂದೆರಡು ಬಾರಿ ಮಾತನಾಡಿದ್ರೇ ಸಾಕು:

ಇನ್ನೂ ಈ ಜಾಲದ ಉಪಾಯ ಏನು ಅಂದ್ರೆ. ಒಂದೆರಡು ಬಾರಿ ಫೋನ್ ಮಾಡಿದ್ರೇ, ಸಾಕು ಅವರು ನಿಮ್ಮ ಕಾಂಟೆಕ್ಟ್‌ನಲ್ಲಿರೋ ಎಲ್ಲ ನಂಬರ್ ಗಳು ಅವರ ಬಳಿ ಬಂದು ಬಿಡುತ್ತದೆ. ಇದು ಹೇಗೆ ಅನ್ನೋದು ಮಾತ್ರ ನಿಗೂಢವಾಗಿದೆ. ಒಮ್ಮೆ ಅವರ ಸಂಪರ್ಕಕ್ಕೆ ನೀವು ಹೋದ್ರೇ, ನಿಮ್ಮ ಮೊಬೈಲ್ನಲ್ಲಿರೋ ಎಲ್ಲ ನಂಬರ್‌ಗಳು ಅವರು ಟ್ರ್ಯಾಕ್ ಮಾಡಿಕೊಂಡು ಬಿಟ್ಟಿರುತ್ತಾರೆ. ಹಣ ನೀಡದೇ ಇದ್ರೆ ನಿಮ್ಮ ಮೊಬೈಲ್ ಕಾಂಟ್ಯಾಕ್ಟ್ ನಲ್ಲಿ ಎಲ್ಲರಿಗೂ ನೀವು ಸೆಕ್ಸ್ ವಿಡಿಯೋ ನೋಡೋ ಸಂದೇಶ ರವಾನೆ ಮಾಡುತ್ತಾರೆ. 

Follow Us:
Download App:
  • android
  • ios