Bengaluru: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಸುಂದರಿಯಿಂದ ಹನಿಟ್ರ್ಯಾಪ್!
ಸಿಲಿಕಾನ್ ಸಿಟಿಯಲ್ಲಿ ಹನಿ ಹಿಂದೆ ಬಿದ್ದು ಟ್ರ್ಯಾಪ್ ಆಗಿದ್ದವನ್ನ ಕತೆ ಇದು. ಸೋಶಿಯಲ್ ಮೀಡಿಯಾ ಮೂಲಕ ಆ ಸುಂದರಿ ಪರಿಚಯವಾಗಿದ್ದಳು. ನಂತರ ಹನಿ ಜೊತೆಗೆ ವಿಡಿಯೋ ಕಾಲ್ ಚಾಟಿಂಗ್ ಶುರುವಾಗಿತ್ತು.
ಬೆಂಗಳೂರು (ಜು.10): ಸಿಲಿಕಾನ್ ಸಿಟಿಯಲ್ಲಿ ಹನಿ ಹಿಂದೆ ಬಿದ್ದು ಟ್ರ್ಯಾಪ್ ಆಗಿದ್ದವನ್ನ ಕತೆ ಇದು. ಸೋಶಿಯಲ್ ಮೀಡಿಯಾ ಮೂಲಕ ಆ ಸುಂದರಿ ಪರಿಚಯವಾಗಿದ್ದಳು. ನಂತರ ಹನಿ ಜೊತೆಗೆ ವಿಡಿಯೋ ಕಾಲ್ ಚಾಟಿಂಗ್ ಶುರುವಾಗಿತ್ತು. ಆ ಸುಂದರಿ ಅಶ್ಲೀಲ ವಿಡಿಯೋ ಕಾಲ್ ಅನ್ನ ರೆಕಾರ್ಡ್ ಮಾಡಿದ್ಲು. ಅಶ್ಲೀಲ ವಿಡಿಯೋ ಕಾಲ್ ಮೂಲಕ ಹನಿಟ್ರ್ಯಾಪ್ ನಡೆದಿತ್ತು.
ನಂತರ ವಿಡಿಯೋ ಲೀಕ್ ಮಾಡೋದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ರು. ಒಂದು ಹಂತದಲ್ಲಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಬೇರೆ ದಾರಿ ಹಿಡಿದ ಸೈಬರ್ ಚೋರರು. ವಿಡಿಯೋ ಕಾಲ್ ಮಾಡಿದ್ದ ಸುಂದರಿ ಸಾವನ್ನಪ್ಪಿದ್ದಾಳೆ ಅನ್ನೋ ಕಥೆ ಕಟ್ಟಿದ್ರು. ಅವಳ ಸಾವಿಗೆ ನೀನೆ ಕಾರಣ ಅಂತ ಕರೆ ಮಾಡಲಾರಂಭಿಸಿದ್ರು. ಈ ಪ್ರಕರಣ ಸಿಬಿಐನಲ್ಲಿ ದಾಖಲಾಗಿದೆ ಅಂತ ಕಥೆ ಕಟ್ಟಿ, ಗೂಗಲ್‌ನಲ್ಲಿ ಸಿಗುವ ಸಿಬಿಐನಲ್ಲಿ ದಾಖಲಾಗಿರುವ ಪ್ರಕರಣಗಳ ಲಿಸ್ಟ್ ತೆಗೆದು ಅದರಲ್ಲಿ ದೂರುದಾರನ ಹೆಸರು ಹಾಕಿದರು.
MBBS ಸೀಟು ಕೊಡಿಸೋದಾಗಿ ವೈದ್ಯನಿಗೆ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ ವಂಚಕರ ಬಂಧನ
ಮಾತ್ರವಲ್ಲದೇ ಆ ಲೆಟರ್ ತೋರಿಸಿ ವಿಚಾರಣೆಗೆ ಬರುವಂತೆ ಹೇಳಿ ಹಂತ ಹಂತವಾಗಿ 5 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿದ್ದಾರೆ. ಕಡೆಗೆ ಸ್ನೇಹಿತರೊಬ್ಬರಿಗೆ ನಡೆದ ವಿಷಯ ತಿಳಿಸಿ, ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದರು. ಇದೀಗ ಆನ್‌ಲೈನ್‌ನಲ್ಲಿ ಲಕ್ಷ ಲಕ್ಷ ಪೀಕಿರುವ ಸುಂದರಿ ಹಾಗೂ ಆಕೆಯ ಗ್ಯಾಂಗ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.