* ಯುವತಿಯ ಮೈಮಾಟಕ್ಕೆ ಸೋತು 90 ಸಾವಿರ ಕಳೆದುಕೊಂಡ ಯುವಕ*ಪರಿಚವಾದ ಯುವಕನೋರ್ವನಿಗೆ ವಿಡಿಯೋ ಕಾಲ್​ ಮೂಲಕ ಮೋಸ* ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲಾಕ್‌ಮೇಲ್

ಶಿರಸಿ, (ಏ.18): ಯುವತಿಯೊಬ್ಬಳು ಫೆಸ್​​ಬುಕ್​ನಲ್ಲಿ ಪರಿಚವಾದ ಯುವಕನೋರ್ವನಿಗೆ ವಿಡಿಯೋ ಕಾಲ್​ನಲ್ಲಿ ಬಳಕುವ ತನ್ನ ಮೈಮಾಟವನ್ನ ತೋರಿಸಿ ಆತನಿಂದ 90 ಸಾವಿರ ರೂಪಾಯಿ ಲಪಟಾಯಿಸಿದ್ದಾಳೆ. 

ಔದು..ಈ ಘಟನೆ ಶಿರಸಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಡದಿದ್ದು, ನಗರದ ಟಿ.ಎಸ್. ಎಸ್​.ಗೆ ಅಡಿಕೆ ವ್ಯಾಪಾರ ಮಾಡಿದ ಹಣವನ್ನೆಲ್ಲ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಯುವತಿಯೋರ್ವಳು ಫೇಸ್​ಬುಕ್​ನಲ್ಲಿ ಶಿರಸಿಯ ಯುವಕನಿಗೆ ಪರಿಚಯವಾಗಿದ್ದಾಳೆ, ನಂತರ ದಿನನಿತ್ಯ ಇಬ್ಬರು ಚಾಟಿಂಗ್ ಮಾಡಿದ್ದಾರೆ. ಈ ಯುವಕನಿಗೆ 35 ವರ್ಷ ವಯಸ್ಸಾಗಿದ್ದು, ಈವರೆಗೂ ಮದುವೆಯಾಗಿಲ್ಲ. 

Bengaluru Crime: ಹಾಡಹಗಲೇ ಬಟ್ಟೆ ಅಂಗಡಿಗೆ ಕನ್ನ

ಈ ಹಿನ್ನೆಲೆ ಫೇಸ್​ಬುಕ್​ನಲ್ಲಿ ಚೆಂದವಾಗಿ ಮಾತನಾಡುತ್ತಿದ್ದ ಯುವತಿಯ ಜೊತೆ ಸಲಿಗೆಯಿಂದಲೇ ಮಾತನಾಡುತ್ತಿದ್ದ. ಆಗಾಗ ಇಬ್ಬರ ಫೋಟೋಗಳು ಶೇರ್​ ಆಗುತ್ತಾ ಇದ್ದವು. ಕಳೆದ ಗುರುವಾರ ಇಬ್ಬರು ಸೇರಿ ವಿಡಿಯೋ ಕಾಲ್​ ಮಾಡಿ ಅಶ್ಲೀಲ ರೀತಿಯಲ್ಲಿ ವ್ಯವಹರಿಸಿದ್ದಾರೆ. ಆದರೇ ಆ ಹುಡುಇ ಆತನ ವಿಡಿಯೋ ಕಾಲ್​ ರೆಕಾರ್ಡ್​​ ಮಾಡಿಕೊಂಡಿದ್ದು, ಮಾರನೇ ದಿನ ​ ಹುಡುಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ.

ನನಗೆ ತುರ್ತಾಗಿ 10 ಸಾವಿರ ಬೇಕು ಎಂದು ಕೇಳಿದಕ್ಕೆ ಯುವಕ ಅಡಿಕೆ ಮಾರಿದ್ದ ಹಣದಲ್ಲಿ ಯುವತಿಗೆ ಗೂಗಲ್​ ಪೇ ಮೂಲಕ ಹಣ ರವಾನಿಸಿದ್ದಾನೆ. ಇದನ್ನೇ ರೂಢಿ ಮಾಡಿಕೊಂಡ ಯುವತಿ ಪದೇ ಪದೇ ಯುವಕನ ಬಳಿ ಹಣಕ್ಕೆ ಬೇಡಿಕೆ ಇಡುತ್ತಾ ಬಂದಿದ್ದಾಳೆ. ಇದಕ್ಕೆ ಬೇಸತ್ತ ಯುವಕ ನಂನಿಂದ ಇನ್ನೂ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. 

ಯುವಕ ಯುವತಿಯ ಜೊತೆ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದ ವಿಡಿಯೋ ರೆಕಾರ್ಡ್​ರನ್ನು ಯುವಕನಿಗೆ ಕಳಿಸಿ ನೀನು ಹಣ ನೀಡದಿದ್ದರೇ ಇದನ್ನ ವೈರಲ್​ ಮಾಡುತ್ತೇನೆ ಎಂದು ಧಮಕಿ ಹಾಕಿದ್‌ಉ , ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೆದರಿಸಿದ್ದಾಳೆ. ಇದಕ್ಕೆ ಹೆದರಿದ ಯುವಕ ಯುವಕ ಬರೋಬ್ಬರಿ 90 ಸಾವಿರ ಹಾಕಿ ಕೈ ತೊಳೆದುಕೊಂಡಿದ್ದಾನೆ. ಆದರೆ ಈ ವಿಷಯ ಮನೆಯಲ್ಲಿ ಅಡಿಕೆ ಮಾರಿದ್ದ ಹಣ ಎಲ್ಲಿ ಎಂದು ಕೇಳಿದಾಗಿ ಬೆಳಕಿಗೆ ಬಂದಿದೆ.

ದೊಡ್ಡ ದಂಧೆ:
ಯೆಸ್..ಇದೊಂದು ದೊಡ್ಡ ದಂಧೆಯಾಗಿದೆ. ಯುವತಿಯರು ಬಣ್ಣ ಬಣ್ಣದ ಮಾತುಗಳಿಂದ ಫೇಸ್‌ಬುಕ್ ಮೂಲಕ ಆಕರ್ಷಿಸುತ್ತಾರೆ. ಬಳಿಕ ವಾಟ್ಸಪ್‌ ನಂಬರ್ ಕೇಳಿ ಚಾಟ್ ಶುರು ಮಾಡಿಕೊಳ್ತಾರೆ. ನಂತರ ಕಾಮ ಪ್ರಚೋದಿಸುವ ಮೆಸೇಜ್ ಮಾಡಿ ಪುರುಷರನ್ನು ಉದ್ರೇಕಿಸುತ್ತಾರೆ.. ನಂತ ವಾಟ್ಸಪ್ ವಿಡಿಯೋ ಕಾಲ್‌ಗೆ ಬರ್ತಾರೆ. ವಿಡಿಯೋ ಕಾಲಿಂಗ್‌ನಲ್ಲಿ ಬೆತ್ತಲಾಗುವುಂತೆ ಹೇಳಿ ರೇಕಾರ್ಡ್ ಮಾಡಿಕೊಳ್ಳತ್ತಾರೆ. ಇದೆಲ್ಲಾ ಆದಮೇಲೆ ರೇಕಾರ್ಡ್ ಮಾಡಿದ ವಿಡಿಯೋವನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಡ್ತಾರೆ. ಹಣ ಕೊಡದಿದ್ದರೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸುತ್ತಾರೆ. ಇದರಿಂದ ಪುರಷರು ಮಾನ ಮರ್ಯಾದೆಗೆ ಹೆದರಿ ಹಣ ಕೊಡ್ತಾರೆ. 

ಈ ರೀತಿಯಾಗಿ ಈ ದಂಧೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಪುರುಷರು ಯಾವುದೇ ಅನಾಮಿಕ ಯುವತಿಯ ಮೆಸೇಜ್ ಕಾಲ್‌ ಬಂತು ಅಂದ್ರೆ ಕೊಂಚ ಎಚ್ಚರದರಿಂದ ಇರುವುದು ಒಳಿತು.