ಬೆಂಗಳೂರುಲ್ಲಿ ಬೇಗ ಹಣ ಮಾಡುವ ಆಸೆಗಾಗಿ ಗುರುತು ಪರಿಚಯ ಇಲ್ಲದವರ ಕಂಪನಿಯಲ್ಲಿ ಹೂಡಿಕೆ ಮಾಡುವ ಮುನ್ನ ತುಸು ಈ ಸುದ್ದಿ ನೋಡಿ.
ರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು
ಬೆಂಗಳೂರು (ಜು.26) : ಈ ಕಾಲ್ದಲ್ಲಿ ಜೊತೇಲಿಕ ಹುಟ್ಟಿ ಬೆಳ್ದೋರು. ಒಂದೇ ತಟ್ಟೇಲಿ ತಿಂದೋರೇ ದ್ರೋಹ ಮಾಡೋವಾಗ ಯಾರೋ ಹೊರಗಡೆ ಬಂದೋರನ್ನ ನಂಬಿ ಕೋಟಿ ಕೋಟಿ ಇನ್ವೆಸ್ಟ್ ಮಾಡಿದ್ರೆ ಸೇಫ್ ಇರುತ್ತಾ ಖಂಡಿತಾ ಇರಲ್ಲ... ಬೆಂಗ್ಳೂರಲ್ಲಿ ನಡ್ದಿರೋ ಈ ಘಟನೆ ಪ್ರೂವ್ ಮಾಡ್ಬಿಟ್ಟಿದೆ.. ನರೇಂದ್ರ ಬಾಬು ಅನ್ನೋರು ಹಿರೇನ್ ವಾಹೇನ್ ಬಿಲ್ಡಟೆಕ್ ಪ್ರೈವೇಟ್ ಕಂಪನಿಯಲ್ಲಿ ಒಂದಷ್ಟು ಬಂಡವಾಳ ಹೂಡಿಕೆ ಮಾಡಿ ಡೈರೆಕ್ಟರ್ ಆಗಿರ್ತಾರೆ... ಇವ್ರ್ ಜೊತೆಗೆ ಲಲಿತ್ ಸಿಂಗ್, ಅನ್ನೋ ವ್ಯಕ್ತಿ ಕೂಡ ಸಹ ಪಾಲುದಾರರಾಗಿರ್ತಾರೆ..
ಹೀಗೆ ನರೇಂದ್ರ ಬಾಬು(Narendrababu) ಇವರಿಬ್ಬರನ್ನ ನಂಬಿರ್ತಾರೆ... ಇವ್ರ್ ಕಂಪನಿ ಖರೀದಿ ಮಾಡಿದ ಜಮೀನಿನಲ್ಲಿ ಅಪಾರ್ಟ್ ಮೆಂಟ್(Apertment) ನಿರ್ಮಿಸಿ ನೂರಾರು ಫ್ಲಾಟ್ ಗಳನ್ನ ಅಗ್ರಿಮೆಂಟ್ ಮೂಲಕ ನಮ್ಮ ಕನ್ನಡಿಗರಿಗೇನೇ ಬಹುಪಾಲು ಮಾರಾಟ ಮಾಡಿರ್ತಾರೆ.. ಕಂಪನಿ ಚನ್ನಾಗಿ ನಡ್ಕೊಂಡ್ ಹೋಗ್ತಿರುತ್ತೆ... ಇದೇ ಸಂಧರ್ಭದಲ್ಲಿ ನರೇಂದ್ರ ಬಾಬು ಕೆಲಸದ ನಿಮಿತ್ತ ಹೊರ ದೇಶಗಳಿಗೆ ಹೋದಾಗ ಇವ್ರಿಗೆ ತಿಳಿಯದ ಹಾಗೇ ಈ ಲಲಿತ್ ಸಿಂಗ್(Lalit singh) ಸೇಲ್ ಡೀಡ್ ಅಗ್ರಿಮೆಂಟ್(Agreement)ಮಾಡ್ಕೊಂಡು ಮಾರಾಟ ಆಗಿರೋ ಫ್ಲಾಟ್ ಗಳನ್ನ ಮತ್ತೆ ಮಾರಾಟ ಮಾಡಿದ್ದಾನೆ.. ಇದನ್ನ ನರೇಂದ್ರ ಬಾಬು ಅವ್ರಿಗೆ ಗಮನಕ್ಕೆ ಬಾರದಂತೆ ಅವರ ಸಹಿ ಇಲ್ಲದೆ ಒಂದೇ ಫ್ಲಾಟ್ ಗಳನ್ನು ಬೇರೆ ಬೇರೆವ್ರಿಗೆ ಮಾರಾಟ ಮಾಡಿದ್ದಾರೆ... ಇದೇ ರೀತಿ ನೂರಾರು ಕನ್ನಡಿಗರಿಗೆ ಈ ಐನಾತಿ ಲಲಿತ್ ಸಿಂಗ್ ಮಾಡಿದ್ದಾನೆ..
100 ಕೋಟಿಗೆ ಗೌರ್ನರ್, ಎಂಪಿ ಸ್ಥಾನ: ವಂಚನೆ ಸಂಚು ಬಯಲು!
ಇವನ ಬಂಡವಾಳ ತಿಳಿದ ನರೇಂದ್ರ ಬಾಬು ಪ್ರಶ್ನಿಸಿದಕ್ಕಾಗಿ ಇವರಿಗೆ ರೌಡಿಗಳನ್ನ ಬಿಟ್ಟು ಧಮ್ಕಿ ಹಾಕಿ ಬೆದರಿಕೆ ಹಾಕಿದ್ದಾನೆ... ಎಷ್ಟು ಚೆನ್ನಾಗಿದೆ ನೋಡಿ ನಮ್ ಕರ್ಮ. ಎಲ್ಲೋ ಹರಿಯಾಣ(Hariyana)ದಿಂದ ಬೆಂಗ್ಳೂರಿಗೆ ಬಂದು ನಮ್ಮ ಜಾಗದಲ್ಲೇ ಕೂತು ನಮ್ಮ ಜನಾನೇ ಹೆದ್ರುಸೋ ಮಟ್ಟಿಗೆ ಬಂದಿದ್ದಾರೆ. ಈ ಲಲಿತ್ ಸಿಂಗ್ ಹೇಳೋ ಪ್ರಕಾರ ಮಾನ್ಯ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ(CM Basavaraj Bommai) ಅವರ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್(Manjunath prasad) ಅವ್ರಿಗೂ ಕೂಡ ಕಮೀಶನ್ ಕೊಡ್ತಿವಿ. ನಮ್ಮ ವ್ಯವಹಾರಕ್ಕೆ ಯಾರೂ ಡಿಸ್ಟರ್ಬ್(Disturb) ಮಾಡಲ್ಲ ಅಂತ ಎದೆ ನಿಗುರ್ಸೋಂಡೇ ಹೇಳ್ತಾನೆ. ಇವ್ರಿಗೆಲ್ಲಾ ನೀವ್ ದುಡ್ ಹೆಂಗ್ ಸೆಟ್ಲ್ ಮಾಡ್ತೀರಾ ಅಂದ್ರೆ, ನಮ್ ಲಾಯರ್ ಎಂ.ಸಿ.ನಾಣಯ್ಯ(M.C.Nanayya) ಅಂತ ಇದ್ದಾರೆ ಅವ್ರ್ ಮುಖಾಂತರ ಸಿ.ಎಂ.ಸೆಕ್ರೇಟರಿಗೆ ಹಣ ಹೋಗುತ್ತೆ ಅಂತ ಖುಲ್ಲಂಖುಲ್ಲಾಗಿ ಈ ಲಲಿತ್ ಸಿಂಗ್ ಹೇಳ್ತಾನೆ.
ವಾಹನ ಸಾಗಿಸುವುದಾಗಿ ಹಣ ಪಡೆದು ವಂಚನೆ: ಖತರ್ನಾಕ್ ಖದೀಮರ ಸೆರೆ
ಒಟ್ನಲ್ಲಿ ಈಗ ಪರರಾಜ್ಯ ಪಾಪಿ ಲಲಿತ್ ಸಿಂಗ್ ಮಾಡಿರೋ ಫ್ರಾಡ್ ಕೆಲ್ಸ ಗೊತ್ತಾಗಿ. ಈತನ ಮೋಸದ ಜಾಲ,ಬೆದರಿಕೆ, ಧಮ್ಕಿ ಎಲ್ಲವನ್ನ ಇದೀಗ ಜಯನಗರ ಪೊಲೀಸ್ರಿಂದ ಲಲಿತ್ ಸಿಂಗ್ ನನ್ನು ವಿಚಾರಣೆ ನಡೆಸುತ್ತಿದ್ದು.. ಜೊತೇಲ್ ಹುಟ್ಟಿ, ಒಂದೇ ತಟ್ಟೇಲಿ ತಿಂದು ಉಂಡಿರೋರೇ ನಂಬಿಕೆ ದ್ರೋಹ ಮಾಡೋ ಕಾಲ ಇರೋವಾಗ ಇನ್ನು ಬೆಂಗ್ಳೂರ್ ಅಂತ ನಗರದಲ್ಲಿ ಸಿಗೋ ಅಪರಿಚಿತ ವ್ಯಕ್ತಿಗಳನ್ನ ನಂಬಿದ್ರೇ ಮೋಸ ಆಗ್ದೇ ಇರುತ್ತಾ...ಇನ್ನಾದ್ರು ಬೆಂಗ್ಳೂರ್ ಜನ ಎಚ್ಚೆತ್ಕೋಬೇಕಾಗಿದೆ...
