Asianet Suvarna News Asianet Suvarna News

ಗಂಡ ಹೆಂಡತಿ ಜಗಳಕ್ಕೆ ಹೆತ್ತ ಮಗುವನ್ನೇ ಕೊಂದ ತಾಯಿ? ಪತಿಗೆ ಕಂದಮ್ಮನ ಕೊಡಲು ಇಷ್ಟವಿಲ್ಲದೆ ಕೊಲೆ!

ಪಶ್ಚಿಮ ಬಂಗಾಳ ಮೂಲದ ಸುಚನಾ ಸೇಠ್‌ ಹಾಗೂ ಕೇರಳ ಮೂಲದ ಪತಿ ವೆಂಕಟರಾಮನ್ ನಡುವಿನ ಸಂಬಂಧ ಹದಗೆಟ್ಟಿತ್ತು. ಅವರು ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದು, ಅಂತಿಮ ಪ್ರಕ್ರಿಯೆಯಲ್ಲಿದೆ.

bengalusu start up founder suchana seth accused of killing young son in goa was separated ash
Author
First Published Jan 9, 2024, 3:36 PM IST

ಚಬೆಂಗಳೂರು (ಜನವರಿ 9, 2024): ಗೋವಾದಲ್ಲಿ ತನ್ನ 4 ವರ್ಷದ ಮಗನನ್ನು ಕೊಂದು ಶವದೊಂದಿಗೆ ಕರ್ನಾಟಕಕ್ಕೆ ಪ್ರಯಾಣ ಬೆಳೆಸಿದ ಬೆಂಗಳೂರು ಸ್ಟಾರ್ಟ್ ಅಪ್ ಸಂಸ್ಥಾಪಕಿ ಸುಚನಾ ಸೇಠ್‌ ಪತಿಯಿಂದ ಬೇರೆಯಾಗಿದ್ದಾರೆ ಎಂದು ಗೋವಾ ಪೊಲೀಸರು ಮಾಹಿತಿ ನೀಡಿದ್ದಾರೆ. ಅವರ ಹದಗೆಟ್ಟ ಸಂಬಂಧವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ.

ಆದರೂ, ಸುಚನಾ ಸೇಠ್ ಕೊಲೆ ಮಾಡಿದ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಎಂದು ಗೋವಾ ಉತ್ತರ ಎಸ್‌ಪಿ ನಿಧಿನ್ ವಲ್ಸನ್ ಹೇಳಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸುಚನಾ ಸೇಠ್‌ ಹಾಗೂ ಕೇರಳ ಮೂಲದ ಪತಿ ವೆಂಕಟರಾಮನ್ ನಡುವಿನ ಸಂಬಂಧ ಹದಗೆಟ್ಟಿತ್ತು. ಅವರು ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದು, ಇದೂ ಕೂಡ ಅಂತಿಮ ಪ್ರಕ್ರಿಯೆಯಲ್ಲಿದೆ. ಇನ್ನು, ಮಗುವನ್ನು ಸ್ಟಾರ್ಟಪ್‌ ಸಂಸ್ಥಾಪಕಿಯೇ ನೋಡಿಕೊಳ್ಳುತ್ತಿದ್ದರೂ ಕೋರ್ಟ್‌ ಸೂಚನೆ ಪ್ರಕಾರ ಕೆಲ ಕಾಲ ಗಂಡನಿಗೆ ಸಹ ಮಗುವನ್ನು ಹಸ್ತಾಂತರ ಮಾಡಬೇಕಿತ್ತು.

ಇದನ್ನು ಓದಿ: ಗೋವಾದಲ್ಲಿ ಮಗು ಕೊಂದ ಬೆಂಗಳೂರು ಸ್ಟಾರ್ಟಪ್‌ ಸಂಸ್ಥಾಪಕಿ ಅರೆಸ್ಟ್: ಶವದ ಸಮೇತ ಕರ್ನಾಟಕದಲ್ಲಿ ಸಿಕ್ಕಿಬಿದ್ದ ಪಾತಕಿ!

ಈ ಹಿನ್ನೆಲೆ ಮಗುವಿನ ಪಾಲನೆಗಾಗಿ ಇಬ್ಬರೂ ಜಗಳವಾಡುತ್ತಿದ್ದರು. ಉಸಿರುಗಟ್ಟಿಸಿ ಮತ್ತು ಚೂಪಾದ ವಸ್ತುವಿನ ಬಳಕೆಯಿಂದ ಬಾಲಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಮಗು ನೀಡುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ ಅಪ್ ಮೈಂಡ್‌ಫುಲ್ ಎಐ ಲ್ಯಾಬ್‌ನ 39 ವರ್ಷದ ಸಿಇಒ ಸುಚನಾ ಸೇಠ್‌ಗೆ ಇಷ್ಟವಿರಲಿಲ್ಲ. ಈ ಹಿನ್ನೆಲೆ ಕೊಲೆ ಮಾಡಿರಬಹುದು ಎಂದೂ ಶಂಕಿಸಲಾಗಿದೆ. 

ಸುಚನಾ ಸೇಠ್‌ರನ್ನು ಸೋಮವಾರ ಚಿತ್ರದುರ್ಗದ ಐಮಂಗಲದಲ್ಲಿ ತನ್ನ ಮಗನ ಶವದ ಸಮೇತ ಬಂಧಿಸಲಾಗಿತ್ತು. ಗೋವಾ ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಲಾಗಿದ್ದು, ಮಗುವಿನ ಶವವನ್ನು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ತಿಳಿದುಬಂದಿದೆ.

ಆದರೆ, ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ ಅಪ್ ಮೈಂಡ್‌ಫುಲ್ ಎಐ ಲ್ಯಾಬ್‌ನ 39 ವರ್ಷದ ಸಿಇಒ ಸುಚನಾ ಸೇಠ್‌ಗೆ ಇಷ್ಟವಿರಲಿಲ್ಲ. ಈ ಹಿನ್ನೆಲೆ ಕೊಲೆ ಮಾಡಿರಬಹುದು ಎಂದೂ ಶಂಕಿಸಲಾಗಿದೆ. ಸುಚನಾ ಸೇಠ್‌ರನ್ನು ಸೋಮವಾರ ಚಿತ್ರದುರ್ಗದ ಐಮಂಗಲದಲ್ಲಿ ತನ್ನ ಮಗನ ಶವದ ಸಮೇತ ಬಂಧಿಸಲಾಗಿತ್ತು. ಗೋವಾ ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಲಾಗಿದ್ದು, ಮಗುವಿನ ಶವವನ್ನು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ತಿಳಿದುಬಂದಿದೆ.

ಕೇರಳದಿಂದ ಬಂದಿರುವ ಮತ್ತು ಪ್ರಸ್ತುತ ಇಂಡೋನೇಷ್ಯಾದಲ್ಲಿರುವ ವೆಂಕಟರಾಮನ್ ರನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಹಾಗೂ, ಇಂದು ಸಂಜೆ ವೇಳೆಗೆ ಚಿತ್ರದುರ್ಗದ ಹಿರಿಯೂರಿಗೆ ಪತಿ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 

100 ಬ್ರಿಲಿಯಂಟ್ ಮಹಿಳೆಯರ ಲಿಸ್ಟ್‌ನಲ್ಲಿದ್ದಾಳೆ ಹೆತ್ತ ಮಗನನ್ನೇ ಕೊಂದು ಬ್ಯಾಗ್‌ನಲ್ಲಿ ಸಾಗಿಸ್ತಿದ್ದ ಪಾಪಿ ತಾಯಿ!

ಸುಚನಾ ಸೇಠ್‌ರನ್ನು ನ್ಯಾಯಾಲಯದ ಮುಂದೆ ವಿಚಾರಣೆಗೆ ಒಳಪಡಿಸಬೇಕಿದೆ. ಆಕೆ, ಜನವರಿ 6 ರಂದು ಗೋವಾದ ಕ್ಯಾಂಡೋಲಿಮ್‌ಗೆ ಮಗನ ಜತೆ ಬಂದಿದ್ದರು. ಆದರೆ, ವಾಪಸ್‌ ಹೋಗುವಾಗ ಸರ್ವೀಸ್‌ ಅಪಾರ್ಟ್‌ಮೆಂಟ್‌ನಿಂದ ಒಬ್ಬರೇ ಹೊರಟಿದ್ದರು. 

ಟ್ಯಾಕ್ಸಿಯಲ್ಲೇ ಬೆಂಗಳೂರಿಗೆ ವಾಪಸ್‌ ಹೊರಟಿದ್ದರು. ಹಾಗೂ ಅವರ ರೂಮಿನಲ್ಲಿ ರಕ್ತದ ಕಲೆ ಕಂಡುಬಂದಿದ್ದ ಹಿನ್ನೆಲೆ ಸಿಬ್ಬಂದಿ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದುತಿಳಿದುಬಂದಿದೆ.

ಇನ್ನೊಂದೆಡೆ, ಅಪಾರ್ಟ್‌ಮೆಂಟ್‌ನಲ್ಲಿರೋ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಫೊರೆನ್ಸಿಕ್ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ ಎಂದೂ ಗೋವಾ ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios