Bengaluru: ಯೂಟ್ಯೂಬ್‌ ಚಾನಲ್‌ ಆರಂಭಿಸಿ ದಂಧೆ, ಮಾಂಸದಂಗಡಿಗಳಲ್ಲಿ ಹಫ್ತಾ ವಸೂಲಿ: 4 ಪತ್ರಕರ್ತರ ಸೆರೆ

ಯೂಟ್ಯೂಬ್‌’ ಚಾನೆಲ್‌ವೊಂದರ ಪತ್ರಕರ್ತರ ಸೋಗಿನಲ್ಲಿ ವ್ಯಾಪಾರಿಗಳಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ದುಷ್ಕರ್ಮಿಗಳನ್ನು ಸಿಸಿಬಿ ಸೆರೆ ಹಿಡಿದಿದೆ. ಹಲವರಿಂದ  80 ಲಕ್ಷ ವಸೂಲಿ ಮಾಡಲಾಗಿದೆ.

 

Bengaluru Youtubers Blackmail Extort money From Meat Shop Owner gow

ಬೆಂಗಳೂರು (ಆ.1): ಯೂಟ್ಯೂಬ್‌’ ಚಾನೆಲ್‌ವೊಂದರ ಪತ್ರಕರ್ತರ ಸೋಗಿನಲ್ಲಿ ವ್ಯಾಪಾರಿಗಳಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ದುಷ್ಕರ್ಮಿಗಳನ್ನು ಸಿಸಿಬಿ ಸೆರೆ ಹಿಡಿದಿದೆ. ಮಹಾಲಕ್ಷ್ಮಿ ಲೇಔಟ್‌ ನಿವಾಸಿಗಳಾದ ಆತ್ಮಾನಂದ ಅಲಿಯಾಸ್‌ ಕೃಷ್ಣೇಗೌಡ, ಆನಂದ ಅಲಿಯಾಸ್‌ ಫಿಗರ್‌ ಆನಂದ, ಶ್ರೀನಿವಾಸ ಅಲಿಯಾಸ್‌ ರೇಷ್ಮೆನಾಡು ಶ್ರೀನಿವಾಸ್‌ ಹಾಗೂ ಕೇಶವ ಮೂರ್ತಿ ಬಂಧಿತರಾಗಿದ್ದು, ಆರೋಪಿಗಳಿಂದ .13 ಸಾವಿರ ಹಾಗೂ ಕಾರು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕೆ.ಆರ್‌.ಪುರದ ಮಾಂಸದ ವ್ಯಾಪಾರಿ ಸಾದಿಕ್‌ಖಾನ್‌ ಅವರನ್ನು ಹೆದರಿಸಿ  2 ಲಕ್ಷ ವಸೂಲಿ ಮಾಡಿದ್ದ ಆರೋಪಿಗಳು, ಮತ್ತೆ ಪ್ರತಿ ತಿಂಗಳು ಹಫ್ತಾಕ್ಕೆ ಖಾನ್‌ ಬಳಿ ಬೇಡಿಕೆ ಇಟ್ಟಿದ್ದರು.

ಬೆಂಗಳೂರಿನಲ್ಲಿ ಬಂಧಿಸಿರುವ ಐವರು ಶಂಕಿತ ಉಗ್ರರಿಗೆ ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಸಂಪರ್ಕ

ಮಾಂಸದ ವ್ಯಾಪಾರಿಗಳೇ ಟಾರ್ಗೆಟ್‌: ನಂದಿನಿ ಲೇಔಟ್‌ನಲ್ಲಿ ‘ಎ.ಕೆ.ನ್ಯೂಸ್‌’ ಹೆಸರಿನ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದ ಆತ್ಮಾನಂದ, ಆನಂದ, ಶ್ರೀನಿವಾಸ್‌ ಹಾಗೂ ಕೇಶವ, ಕೆಲ ಸಂಘಟನೆಗಳ ಜತೆ ಸೇರಿ ವ್ಯಾಪಾರಿಗೆ ಬೆದರಿಕೆ ಹಾಕಿ ಹಣ ವಸೂಲಿ ದಂಧೆ ಶುರು ಮಾಡಿದ್ದರು. ಅದರಲ್ಲೂ ಮಾಂಸದ ವ್ಯಾಪಾರಿಗಳೇ ಆರೋಪಿಗಳ ಟಾರ್ಗೆಟ್‌ ಆಗಿದ್ದರು. ನೀವು ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿರುವ ವಿಷಯ ಗೊತ್ತಿದೆ. ಸುದ್ದಿಪ್ರಸಾರ ಮಾಡಿ ಪೊಲೀಸರ ಮೂಲಕ ದಾಳಿ ಮಾಡಿಸಿ ಅಂಗಡಿಗೆ ಬೀಗ ಹಾಕಿಸುತ್ತೇವೆ ಎಂದು ಬೆದರಿಸುತ್ತಿದ್ದರು. ಈ ಧಮ್ಕಿಗೆ ಹೆದರಿ ಕೆಲವರು ಹಣ ಕೊಟ್ಟಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಎಣ್ಣೆ ಹೊಡೆದ ವಿಷ್ಯ, ಅಪ್ಪನಿಗೆ ಹೇಳಿದ್ದಕ್ಕೆ ಕೊಂದೇ ಬಿಟ್ರು: ಎರಡು ಡಿಚ್ಚಿ, ನಾಲ್ಕು ಗುನ್ನಾಗೆ ಮಟಾಷ್‌

ಅಂತೆಯೇ ನಾಲ್ಕು ತಿಂಗಳ ಹಿಂದೆ ದೇವಸಂದ್ರದ ಸಾದಿಕ್‌ ಖಾನ್‌ ಅವರ ಮಾಂಸದ ಅಂಗಡಿಗೆ ತೆರಳಿದ ಆರೋಪಿಗಳು, ಅಕ್ರಮವಾಗಿ ನಿಷೇಧಿತ ಮಾಂಸ ಮಾರಾಟ ಮಾಡುತ್ತಿರುವ ಸುದ್ದಿ ಪ್ರಸಾರ ಮಾಡುತ್ತೇವೆ ಎಂದು ಹೇಳಿ .5 ಲಕ್ಷಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಇದಕ್ಕೂ ಮುನ್ನ ಇದೇ ರೀತಿ ಬ್ಲಾಕ್‌ಮೇಲ್‌ ಮಾಡಿ ಹಣ ಕೊಡದ ಕಾರಣಕ್ಕೆ ಸಾದಿಕ್‌ ಖಾನ್‌ ಸೋದರನ ಅಂಗಡಿ ಮೇಲೆ ಪೊಲೀಸರಿಂದ ದಾಳಿ ಮಾಡಿಸಿ ಅಂಗಡಿಗೆ ಆರೋಪಿಗಳು ಬಾಗಿಲು ಹಾಕಿಸಿದ್ದರು. ಹೀಗಾಗಿ ಆರೋಪಿಗಳಿಗೆ ಮಾತಿಗೆ ಹೆದರಿ .2 ಲಕ್ಷವನ್ನು ಸಾದಿಕ್‌ ಕೊಟ್ಟಿದ್ದರು. ಪ್ರತಿ ತಿಂಗಳು .20 ಸಾವಿರ ಹಫ್ತಾಕ್ಕೆ ಬೇಡಿಕೆ ಇಟ್ಟಿದ್ದರು. ಈ ಬ್ಲಾಕ್‌ಮೇಲ್‌ ಬಗ್ಗೆ ಕೆ.ಆರ್‌.ಪುರ ಠಾಣೆಗೆ ಸಾದಿಕ್‌ ದೂರು ನೀಡಿದರು. ಇವರು ಹೀಗೆ ಹಲವರನ್ನು ಬೆದರಿಸಿ 80 ಲಕ್ಷಕ್ಕೂ ಹೆಚ್ಚು ಹಣ ಸುಲಿಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios