ಬೆಂಗಳೂರು(ಜು.17)   ನಮ್ಮ ಬಳಿ ನಿಮ್ಮ ಬೆತ್ತಲೆ ವಿಡಿಯೋ ಇದೆ, ಕೂಡಲೇ  22  ಸಾವಿರ ರೂ. ಹಣ ನೀಡಿ ಎಂದು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ವ್ಯಕ್ತಿಯೊಬ್ಬತು ದೂರು ದಾಖಲಿಸಿದ್ದಾರೆ. 

ವಾಟ್ಸ್ ಆಪ್ ನಲ್ಲಿ  ವ್ಯಕ್ತಿಗೆ ಗೆಳತಿಯೊಬ್ಬಳಾಗಿದ್ದಳು. ನಾನು ನಿಶಾ ಎಂದು ಆಕೆ ಪರಿಚಯ ಮಾಡಿಕೊಂಡು ಮಾತುಕತೆ ನಡೆಸುತ್ತಿದ್ದಳು. ಕೇರಳ ಮೂಲದ ನಾನು ಬೆಂಗಳೂರಿನ ವೈಟ್ ಫೀಲ್ಡ್ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಳು.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ

ಪಿಜಿ ಒಂದರಲ್ಲಿ ವಾಸ ಮಾಡುತ್ತಿದ್ದ ಜಾನಿ(ಹೆಸರು ಬದಲಾಯಿಸಲಾಗಿದೆ) ಯುವತಿಯ ಜಾಲಕ್ಕೆ ಬಿದ್ದಿದ್ದಾನೆ. ಜಾನಿ ರೂಂ ಮೇಟ್ ಕೊರೋನಾ ಕಾರಣಕ್ಕೆ ಊರಿಗೆ ಹೋಗಿದ್ದರಿಂದ ಆತ ಒಬ್ಬನೇ ಇದ್ದ.  ನಿಮ್ಮ ಬೋಲ್ಡ್ ನೆಸ್ ನನಗೆ ಇಷ್ಟ, ಹಾಟ್ ಟಾಪಿಕ್ ಬಗ್ಗೆ ಮಾತಾಡೋಣ ಎಂದು ನಿಶಾ ನಿಧಾನವಾಗಿ ಜಾನಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ. 

ಕಳೆದ ವಾರ  ವಿಡಿಯೋ ಕಾಲ್ ನಲ್ಲಿ ಇದ್ದಾಗ ನೀನು ಬೆತ್ತಲೆಯಾಗು ಎಂದಿದ್ದಾಳೆ, ಮೊದಲಿಗೆ ನಾನು ವಿರೋಧಿಸಿದೆ, ನಾನು ಸಹ ನಿನ್ನಂತೆ ಬೆತ್ತಲೆ ಆಗುತ್ತೇನೆ ಎಂದಳು,,ಇದನ್ನು ನಂಬಿಕೊಂಡೆ ಎಂದು ಜಾನಿ ಪೊಲೀಸರ ಮುಂದೆ ಹೇಳಿದ್ದಾನೆ.

ಸೋಶೀಯಲ್ ಮೀಡಿಯಾದಲ್ಲಿ ಬಾಲಿವುಡ್ ನಟಿಯ ಬೆತ್ತಲೆ ನಿಸರ್ಗ ನೃತ್ಯ

ಮಾತು ನಂಬಿ ಜಾನಿ ಬಟ್ಟೆ ಬಿಚ್ಚಿದ್ದಾನೆ. ಇದಾದ ಮೇಲೆ ಯುವತಿಯ ಪೋನ್ ಇದ್ದಕ್ಕಿದ್ದಂತೆ ಸ್ವಿಚ್ ಆಫ್ ಆಗಿದೆ.  ಕಳೆದ  ಭಾನುವಾರ ಅಪರಿಚಿತ ನಂಬರ್ ನಿಂದ ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಬೆತ್ತಲೆ ವಿಡಿಯೋ ನಮ್ಮ ಬಳಿ ಇದೆ. 50  ಸಾವಿರ ಕೊಡಿ ಎಂದು ಇಲ್ಲವಾದರೆ ಹರಿಯಬಿಡುತ್ತೇವೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ.  ಇಪ್ಪತ್ತು ಸಾವಿರ ಕೊಡುತ್ತೇನೆ ಎಂದು ಒಪ್ಪಿದ ಜಾನಿ ಹಣ ನೀಡಿದ್ದಾರೆ. ಆದರೆ ಸೋಮವಾರ ಮತ್ತೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಇದಾದ  ನಂತರ ಆತ ಪೊಲೀಸ್ ಮೊರೆ ಹೋಗಿದ್ದಾನೆ.