ಬೆಂಗಳೂರು ( ಜ. 20)  ಆನ್ಲೈನ್‌ನಲ್ಲಿ ಮಸಾಜ್ ‌ಪಾರ್ಲರ್ ಗಳನ್ನ ಸರ್ಚ್ ಮಾಡೋ ಮುನ್ನಾ ಹುಷಾರ್.. ಹುಷಾರ್.. ಕಾಲ್ ಮಾಡಿದರೆ ಅಷ್ಟೆ ಕತೆ. ಮಸಾಜ್ ಮಾಡೋ ನೆಪದಲ್ಲಿ ಅಶ್ಲೀಲ ಪೊಟೋ ಕ್ಲಿಕ್ಕಿಸಿ ಮಾಡ್ತಾರೆ  ಸರಿಯಾಗಿ ಸುಲಿಗೆ ಮಾಡುತ್ತಾರೆ.

ರಾಜಧಾನಿಯಲ್ಲಿ ಇಂಥ  ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ.  ಕಳೆದ ವಾರ ಆನ್ಲೈನ್‌ನಲ್ಲಿ‌ ಮಸಾಜ್ ಪಾರ್ಲರನ್ನ ಸಂಪರ್ಕಿಸಿದ್ದ ಕೆ.ಎಸ್ ಲೇಔಟ್ ನ ಯುವಕ ಜಾಲಕ್ಕೆ ಸಿಕ್ಕಿ ಹಾಕಿಕೊಂಡಿದ್ದ. ಈ ವೇಳೆ ಜಯನಗರದ ಬಳಿ ಬರುವಂತೆ 38 ವರ್ಷದ ವ್ಯಕ್ತಿಗೆ ಆರೋಪಿಗಳು ತಿಳಿಸಿದ್ದಾರೆ.

ಬಾಡಿ ಟು ಬಾಡಿ ಮಸಾಜ್ ಎಂದು ಕರೆಸಿದರು..

ಕಾರ್ ನಲ್ಲಿ ಹುಡುಗಿಯನ್ನ ಕೂರಿಸಿ ಮಸಾಜ್ ಮಾಡ್ತೀವಿ ಅಂತ ಮೊದಲಿಗೆ 15 ಸಾವಿರ ಹಣ ಪಡೆದಿದ್ದಾರೆ. ನಂತರ ಮನೆಗೆ ಹೋಗೋಣ ಬನ್ನಿ ಅಲ್ಲೆ ಮಸಾಜ್ ಮಾಡ್ತೀವಿ ಅಂತ ಯುವಕನನ್ನ ಕರೆದೊಯ್ದಿದ್ದಾರೆ. ಮಸಾಜ್ ಮಾಡೋ ನೆಪದಲ್ಲಿ ಯುವತಿ ಜೊತೆಗಿನ ಯುವಕನ ಅಶ್ಲೀನ ಪೊಟೊಗಳನ್ನ ಯುವಕನ ಗಮನಕ್ಕೆ  ಬರದಂತೆ ತೆಗೆದುಕೊಂಡಿದ್ದಾರೆ.

ನಂತರ ಅಶ್ಲೀಲ ಪೊಟೊಗಳನ್ನ ತೋರಿಸಿ 4 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದೇ ಇದ್ರೆ ಕುಟುಂಬಸ್ಥರಿಗೆ ಫೋಟೋಗಳನ್ನ ತೋರಿಸಿ ಮಾನ ಕಳೆಯುತ್ತೆವೆ ಅಂತ ಬೆದರಿಸಿದ್ದಾರೆ. ಕಡೆಗೆ ತನ್ನ ಎಟಿಎಂ ನಿಂದ 50 ಸಾವಿರ ಹಣ, ಗೆಳೆಯನಿಗೆ ಕರೆ ಮಾಡಿ ಕರೆಸಿಕೊಂಡು 1 ಲಕ್ಷ ಹಣ ನೀಡಿ ಯುವಕ ಬಂದಿದ್ದಾನೆ. ಯುವಕನ ಬಳಿಯಿದ್ದ ಚಿನ್ನದ ಚೈನ್ ಉಂಗುರವನ್ನ ಗ್ಯಾಂಗ್ ಕಿತ್ತುಕೊಂಡಿದೆ.

ಮೋಸ ಹೋದ ಯುವಕನಿಂದ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು ಗ್ಯಾಂಗ್ ಪತ್ತೆಗೆ ಶೋಧ ನಡೆದಿದೆ.