ಬೆಂಗಳೂರು(ಜ. 12)  ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಇನ್ಪೆಂಟ್ ಕ್ರಿಸ್ಟಿ ಸುನೀಲ್ 35 ಎಂಬಾತನ್ನು ಬಂಧಿಸಲಾಗಿದೆ. ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ.

ಕೋರಮಂಗಲದ ನಾಲ್ಕನೇ ಬ್ಲಾಕ್ ನಲ್ಲಿ ಸೆಲ್ ಸ್ಪಾ ನಡೆಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಬಾಡಿ ಟು ಬಾಡಿ, ಹ್ಯಾಪಿ ಎಂಡಿಂಗ್ ಎಂಬ ಮಸಾಜ್  ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ.

ಸ್ಪಾ ಅಂದರೆ ಇವರಿಗೆ ಬಲು ಪ್ರೀತಿ

ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿಕೊಂಡಿದ್ದ 5 ಯುವತಿಯರನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಆರೋಪಿ ಸೇರಿದಂತೆ 12ಸಾವಿರ ನಗದು ಹಾಗೂ ಎರಡು ಮೊಬೈಲ್ ಫೋನ್ ವಶಕ್ಕೆಪಡೆದುಕೊಳ್ಳಲಾಗಿದೆ.

ಮಸಾಜ್ ಪಾರ್ಲರ್ ದಂಧೆ: ಪೊಲೀಸರೇ ಸಿಕ್ಕಿಬಿದ್ರು!

ಕೆಲ ದಿನಗಳ ಹಿಂದೆ ಬನಶಂಕರಿ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ರೇಡ್ ಮಾಡಿದ್ದ ಪೊಲೀಸರು ಹಣ ಪಡೆದು ಕೇಸು ದಾಖಲಿಸದೇ ಹಿಂದಕ್ಕೆ ಬಂದಿದ್ದರು ಎಂಬುದು ದೊಡ್ಡ ಸುದ್ದಿಯಾಗಿತ್ತು.